ಅಕ್ಟೋಬರ್ನಲ್ಲಿ ಒಂದು ಬೈಬಲ್ ಅಧ್ಯಯನ ಆರಂಭಿಸುವಿರೋ?
1. ಅಕ್ಟೋಬರ್ ತಿಂಗಳ ನೀಡುವಿಕೆ ಏನು?
1 ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಅಕ್ಟೋಬರ್ ತಿಂಗಳ ನೀಡುವಿಕೆ ಆಗಿವೆ. ಇವುಗಳಲ್ಲಿ ಆಸಕ್ತಿ ತೋರಿಸಿದವರಿಗೆ ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟನ್ನು ನೀಡಿ ಒಂದು ಬೈಬಲ್ ಅಧ್ಯಯನ ಆರಂಭಿಸುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ. ಇದನ್ನು ಪುನರ್ಭೇಟಿಯಲ್ಲಿ ಮಾಡುವುದು ಹೇಗೆ?
2. ಪತ್ರಿಕೆ ಸ್ವೀಕರಿಸಿದ ವ್ಯಕ್ತಿಯನ್ನು ಪುನರ್ಭೇಟಿ ಮಾಡುವಾಗ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಟ್ರ್ಯಾಕ್ಟನ್ನು ಬಳಸಿ ಹೇಗೆ ಬೈಬಲ್ ಅಧ್ಯಯನ ಆರಂಭಿಸಬಹುದು?
2 ಆ ಟ್ರ್ಯಾಕ್ಟ್ ಬಳಸುವುದು ಹೇಗೆ? ಮನೆಯವರಿಗೆ ಆಸಕ್ತಿಯಿದೆಯೆಂದು ಗ್ರಹಿಸಿದ ಬಳಿಕ ನಾವು ಹೀಗನ್ನಬಹುದು: “ನಾನು ನಿಮಗೆ ಕೊಟ್ಟುಹೋಗಿದ್ದ ಪತ್ರಿಕೆಗಳು ಬೈಬಲನ್ನು ಪರೀಕ್ಷಿಸಿ ನೋಡುವಂತೆ ಎಲ್ಲ ಹಿನ್ನೆಲೆ ಹಾಗೂ ಧರ್ಮಗಳ ಜನರನ್ನು ಪ್ರೋತ್ಸಾಹಿಸುತ್ತವೆ. [ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಟ್ರ್ಯಾಕ್ಟನ್ನು ಮನೆಯವರ ಕೈಗಿತ್ತು, ಮುಖಪುಟದಲ್ಲಿರುವ ಪ್ರಶ್ನೆಗಳನ್ನು ತೋರಿಸಿ.] ಇಲ್ಲಿ ಕೊಡಲಾಗಿರುವ ಆಸಕ್ತಿಕರ ಪ್ರಶ್ನೆಗಳಿಗೆ ಬೈಬಲ್ ತೃಪ್ತಿದಾಯಕ ಉತ್ತರಗಳನ್ನು ಕೊಡುತ್ತದೆ. ಇವುಗಳಲ್ಲಿ ಯಾವುದೇ ಪ್ರಶ್ನೆ ನಿಮ್ಮ ಮನಸ್ಸಿಗೆ ಬಂದಿದೆಯೋ? ನೀವು ಉತ್ತರ ತಿಳಿಯಲು ಬಯಸುತ್ತೀರೊ?” ಮನೆಯವರ ಪ್ರತಿಕ್ರಿಯೆಯ ನಂತರ, ಅವರ ಪ್ರಶ್ನೆಗಳಲ್ಲಿ ಒಂದಕ್ಕೆ ಟ್ರ್ಯಾಕ್ಟ್ನಲ್ಲಿರುವ ಉತ್ತರವನ್ನು ಒಟ್ಟಿಗೆ ಚರ್ಚಿಸಿ. ಅಲ್ಲಿ ಕೊಡಲಾದ ವಚನಗಳಲ್ಲಿ ಒಂದನ್ನು ಓದಿ. ಇದು ಬೈಬಲ್ ಬೋಧಿಸುವಂಥ ಸಂಗತಿಗಳ ಒಂದು ಚಿಕ್ಕ ಉದಾಹರಣೆಯೆಂದು ವಿವರಿಸಿ, ಅವರಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕ ಕೊಡಿ. ಅದರ ಪರಿವಿಡಿಯಿಂದ ಅವರ ಆಯ್ಕೆಯ ಒಂದು ಅಧ್ಯಾಯದ ಆರಂಭದ ಪ್ಯಾರಗಳನ್ನು ಚರ್ಚಿಸಬಹುದು. ಇಲ್ಲವೆ, ನಾವು ಟ್ರ್ಯಾಕ್ಟ್ನಲ್ಲಿ ಚರ್ಚಿಸಿದ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯಿರುವ ಅಧ್ಯಾಯಕ್ಕೆ ಹೋಗಬಹುದು. ಕೆಲವೊಂದು ಉದಾಹರಣೆಗಳು ಇಲ್ಲಿವೆ:
● ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆಯೇ? (ಪು. 9-11, ಪ್ಯಾರ. 6-10)
● ಯುದ್ಧ ಮತ್ತು ಕಷ್ಟ ಕೊನೆಗೊಳ್ಳುವವೋ? (ಪು. 12, ಪ್ಯಾರ. 12-13)
● ಸತ್ತ ಮೇಲೆ ನಮಗೆ ಏನಾಗುತ್ತದೆ? (ಪು. 59-60, ಪ್ಯಾರ. 7-8)
● ಸತ್ತವರನ್ನು ಪುನಃ ನೋಡಲು ಸಾಧ್ಯವಿದೆಯೋ? (ಪು. 71, ಪ್ಯಾರ. 13-15)
● ನಾನು ಹೇಗೆ ಪ್ರಾರ್ಥನೆಮಾಡಿದರೆ ದೇವರು ಕಿವಿಗೊಡುತ್ತಾನೆ? (ಪು. 166-167, ಪ್ಯಾರ. 5-8)
● ನಾನು ಜೀವನದಲ್ಲಿ ಹೇಗೆ ಸಂತೋಷವಾಗಿರಬಲ್ಲೆ? (ಪು. 9, ಪ್ಯಾರ. 4-5)
3. ಬೈಬಲ್ ಅಧ್ಯಯನ ಆರಂಭಿಸುವ ವಿಧಾನವನ್ನು ಪರಿಸ್ಥಿತಿಗೆ ತಕ್ಕಂತೆ ಹೇಗೆ ಬದಲಾಯಿಸಬಹುದು?
3 ಪರಿಸ್ಥಿತಿಯ ನಿಮಿತ್ತ ಮೊದಲ ಪುನರ್ಭೇಟಿಯಲ್ಲೇ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನ ಆರಂಭಿಸಲಾಗದಿದ್ದರೆ, ಪುನಃ ಭೇಟಿಮಾಡಿ ಚರ್ಚೆಯನ್ನು ಮುಂದುವರಿಸಬಹುದು. ಹಲವಾರು ಸಲ ಪುನರ್ಭೇಟಿ ಮಾಡಿ ಟ್ರ್ಯಾಕ್ಟ್ನಲ್ಲಿರುವ ಇನ್ನಷ್ಟು ಪ್ರಶ್ನೆಗಳನ್ನು ವ್ಯಕ್ತಿಯ ಆಸಕ್ತಿಗೆ ತಕ್ಕಂತೆ ಚರ್ಚಿಸಿ ಆಮೇಲೆ ಪುಸ್ತಕವನ್ನು ಪರಿಚಯಿಸಬಹುದು. ವಿಭಿನ್ನ ಹಿನ್ನೆಲೆಗಳ ಜನರೊಂದಿಗೆ ಬೈಬಲಾಧರಿತ ವಿಷಯಗಳನ್ನು ಜಾಣ್ಮೆ ಮತ್ತು ವಿವೇಚನೆಯಿಂದ ಚರ್ಚಿಸಬೇಕು. ಅಕ್ಟೋಬರ್ನಲ್ಲಿ ಈ ಉಪಯುಕ್ತ ಟ್ರ್ಯಾಕ್ಟನ್ನು ಬಳಸಿ ಒಂದು ಬೈಬಲ್ ಅಧ್ಯಯನ ಆರಂಭಿಸೋಣ. ಹೀಗೆ ಪ್ರಾಮಾಣಿಕ ಜನರು “ಸತ್ಯವನ್ನು ತಿಳಿದುಕೊಳ್ಳು”ವಂತೆ ಸಹಾಯಮಾಡೋಣ.—ಯೋಹಾ. 8:31, 32.