ನಿಮ್ಮ ಶುಶ್ರೂಷೆಯಲ್ಲಿ ದೇವರ ವಾಕ್ಯ ಪ್ರಭಾವ ಬೀರುವಂತೆ ಬಿಡಿ
ಯಾರಾದರೂ ಸುವಾರ್ತೆಯನ್ನು ಕೇಳಲು ಇಷ್ಟಪಟ್ಟು ನಮಗೆ ಸಮಯ ಕೊಟ್ಟರೆ, ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸುತ್ತಾ ಬೈಬಲ್ನಿಂದಲೇ ವಚನಗಳನ್ನು ಓದಿ ತೋರಿಸುತ್ತೇವೆ. ಹೀಗೆ, ಅವರ ಮೇಲೆ ದೇವರ ವಾಕ್ಯ ಪ್ರಭಾವ ಬೀರುವಂತೆ ಬಿಡುತ್ತೇವೆ. ಕಳೆದ ವರ್ಷದ ವಿಶೇಷ ಸಮ್ಮೇಳನದಲ್ಲಿ ಇದೇ ವಿಷಯಕ್ಕೆ ಒತ್ತು ನೀಡಲಾಗಿತ್ತು. “ನಿಮ್ಮ ಶುಶ್ರೂಷೆಯಲ್ಲಿ ದೇವರ ವಾಕ್ಯ ಪ್ರಭಾವ ಬೀರುವಂತೆ ಬಿಡಿ” ಎಂಬ ಭಾಷಣವನ್ನು ಸಂಚರಣ ಮೇಲ್ವಿಚಾರಕರು ನೀಡಿದ್ದರು. ಅದರಲ್ಲಿದ್ದ ಮುಖ್ಯಾಂಶಗಳು ನಿಮಗೆ ನೆನಪಿವೆಯಾ?
ನಮ್ಮ ಮಾತಿಗಿಂತ ಯೆಹೋವನ ವಾಕ್ಯಕ್ಕೆ ಹೆಚ್ಚು ಶಕ್ತಿಯಿದೆ. ಯಾಕೆ?—2 ತಿಮೊ. 3:16, 17.
ಯೆಹೋವನ ವಾಕ್ಯ ಹೇಗೆ ಭಾವನೆಗಳನ್ನು ಬಡಿದೆಬ್ಬಿಸುತ್ತದೆ, ಆಲೋಚನೆಗಳನ್ನು ರೂಪಿಸುತ್ತದೆ, ಇರಾದೆಗಳನ್ನು ಉತ್ತಮಗೊಳಿಸುತ್ತದೆ, ನಡತೆಯನ್ನು ನಿರ್ದೇಶಿಸುತ್ತದೆ?—2012 ಜೂನ್ 15ರ ಕಾವಲಿನಬುರುಜು ಪು. 27 ಪ್ಯಾರ 7 ನೋಡಿ.
ಶುಶ್ರೂಷೆಯಲ್ಲಿ ಬೈಬಲ್ ವಚನವನ್ನು ಓದುವಾಗ ದೇವರ ವಾಕ್ಯಕ್ಕೆ ಗೌರವ ತರುವ ರೀತಿಯಲ್ಲಿ ಅದರ ಕಡೆಗೆ ಕೇಳುಗರ ಗಮನವನ್ನು ಹೇಗೆ ಸೆಳೆಯಬಹುದು?—ಶುಶ್ರೂಷಾ ಶಾಲೆ ಪುಸ್ತಕದ ಪು. 148 ಪ್ಯಾರ 3-4 ಮತ್ತು 2013 ಮಾರ್ಚ್, ನಮ್ಮ ರಾಜ್ಯ ಸೇವೆ ಪು. 6 ಪ್ಯಾರ 8 ನೋಡಿ.
ವಚನಗಳನ್ನು ಓದಿದ ನಂತರ ಅವುಗಳನ್ನು ವಿವರಿಸಿ, ತರ್ಕಿಸುವುದು ಯಾಕೆ ಪ್ರಾಮುಖ್ಯ ಮತ್ತು ನಾವು ಅದನ್ನು ಹೇಗೆ ಮಾಡಬಹುದು?—ಅ. ಕಾ. 17:2, 3; ಶುಶ್ರೂಷಾ ಶಾಲೆ ಪುಸ್ತಕದ ಪು. 154 ಪ್ಯಾರ 4ರಿಂದ ಪು. 156 ಪ್ಯಾರ 5 ನೋಡಿ.
ಬೈಬಲನ್ನು ಬಳಸುವುದರಲ್ಲಿ ನಾವು ಹೇಗೆ ವಿವೇಚನೆಯನ್ನು ತೋರಿಸಬಹುದು?—ಮತ್ತಾ. 10:16; 2008 ಏಪ್ರಿಲ್, ನಮ್ಮ ರಾಜ್ಯದ ಸೇವೆ ಪು. 5 ನೋಡಿ.