ರಾಜ್ಯ ಸಭಾಗೃಹ ನಿರ್ಮಾಣಕಾರ್ಯ—ನಮ್ಮ ಪವಿತ್ರ ಸೇವೆಯ ಪ್ರಮುಖ ಅಂಶ
1. ರಾಜ್ಯ ಸಭಾಗೃಹದ ನಿರ್ಮಾಣಕಾರ್ಯದಲ್ಲಿ ಏನನ್ನು ಸಾಧಿಸಲಾಗಿದೆ, ಆದರೆ ಇನ್ನೂ ಯಾವುದರ ಆವಶ್ಯಕತೆ ಇದೆ?
1 ಕಳೆದ ಸೇವಾ ವರ್ಷದಲ್ಲಿ, ಭಾರತದ ಬ್ರಾಂಚ್ ಕ್ಷೇತ್ರದಲ್ಲಿ 19 ರಾಜ್ಯ ಸಭಾಗೃಹಗಳನ್ನು ನಿರ್ಮಿಸಲಾಯಿತು. ಈ ಕೆಲಸದಲ್ಲಿ ನೆರವು ನೀಡಿದ ಎಲ್ಲರ ಶ್ರಮಶೀಲತೆಯನ್ನು ನಾವು ಮನಃಪೂರ್ವಕವಾಗಿ ಗಣ್ಯಮಾಡುತ್ತೇವೆ. ರಾಜ್ಯ ಸಭಾಗೃಹಗಳನ್ನು ನಿರ್ಮಿಸುವ ಕೆಲಸದಲ್ಲಿ ಇಷ್ಟರ ತನಕ ಮಹತ್ತರವಾದ ಕೆಲಸವು ಸಾಧಿಸಲ್ಪಟ್ಟಿರುವುದಾದರೂ, ಇನ್ನೂ ಬಹಳಷ್ಟನ್ನು ಮಾಡಲಿಕ್ಕಿದೆ. ನಮಗೆ ಇನ್ನೂ 175ಕ್ಕಿಂತಲೂ ಹೆಚ್ಚು ರಾಜ್ಯ ಸಭಾಗೃಹಗಳು ತುರ್ತಾಗಿ ಬೇಕಾಗಿವೆ. ಯೆಹೋವನಿಗೆ ನಮ್ಮ ಪವಿತ್ರ ಸೇವೆಯ ಈ ಪ್ರಮುಖ ಅಂಶವನ್ನು ನಾವೆಲ್ಲರೂ ಹೇಗೆ ಬೆಂಬಲಿಸಬಲ್ಲೆವು?—ಪ್ರಕ. 7:15.
2. ರಾಜ್ಯ ಸಭಾಗೃಹದ ನಿರ್ಮಾಣಕಾರ್ಯವನ್ನು ನೇರವಾಗಿ ನಾವು ಹೇಗೆ ಬೆಂಬಲಿಸಬಹುದು?
2 ಸಿದ್ಧಮನಸ್ಸಿನವರಾಗಿರಿ: ನೀವು ಒಬ್ಬ ಸ್ನಾತ ಪ್ರಚಾರಕರಾಗಿರುವಲ್ಲಿ, ಅಪ್ಲಿಕೇಶನ್ ಫೋರ್ ಕಿಂಗ್ಡಮ್ ಹಾಲ್ ಕನ್ಸಟ್ರಕ್ಷನ್ ವಾಲಂಟೀಯರ್ ಪ್ರೋಗ್ರಾಮ್ ಫಾರ್ಮನ್ನು ಭರ್ತಿಮಾಡುವ ಮೂಲಕ, ‘ರಾಜ್ಯ ಸಭಾಗೃಹ ನಿರ್ಮಾಣಕಾರ್ಯದ ಡೆಸ್ಕ್’ನ ಸಿಬ್ಬಂದಿಯೊಂದಿಗೆ ಕೆಲಸಮಾಡಲು ನಿಮ್ಮನ್ನು ಲಭ್ಯಗೊಳಿಸಿಕೊಳ್ಳುವಂತೆ ಕರೆಕೊಡುತ್ತೇವೆ. (ಕೀರ್ತ. 110:3) ಎಲ್ಲ ಸ್ವಯಂಸೇವಕರು ಸಿದ್ಧಮನಸ್ಸಿನ ಕೆಲಸಗಾರರಾಗಿರಬೇಕು ಮತ್ತು ಸಹಕಾರ ಮನೋಭಾವದವರಾಗಿರಬೇಕು. (ಕೀರ್ತ. 133:1) ಕಟ್ಟಡ ಕಾಮಗಾರಿಯ ಕೌಶಲಗಳು ನಿಮ್ಮಲ್ಲಿಲ್ಲವಾದರೂ, ಒಂದು ಕಟ್ಟಡ ನಿರ್ಮಾಣ ಯೋಜನೆಯ ಯಶಸ್ಸಿಗೆ ನೀವು ಅನೇಕ ರೀತಿಯಲ್ಲಿ ಸಹಾಯಮಾಡಬಲ್ಲಿರಿ. ಸದ್ಯಕ್ಕೆ ನಿರ್ಮಾಣಕಾರ್ಯದ ಮೇಲ್ವಿಚಾರಣೆಮಾಡಸಾಧ್ಯವಿರುವ ಮತ್ತು ವಿವಿಧ ರೀತಿಯ ಪರವಾನಗಿಗಳನ್ನು ದೊರಕಿಸಿಕೊಡುವುದರಲ್ಲಿ ನೆರವು ನೀಡಸಾಧ್ಯವಿರುವಂಥ ಅರ್ಹ ಸಹೋದರರ ಅಗತ್ಯವಿದೆ. ಭವಿಷ್ಯತ್ತಿನಲ್ಲಿ ನೀವು ಇನ್ನೂ ಹೆಚ್ಚು ಉಪಯೋಗಿಸಲ್ಪಡಲು ಸಾಧ್ಯವಾಗುವಂತೆ, ಅನೇಕ ರೀತಿಯ ಕಟ್ಟಡ ಕಾಮಗಾರಿ ತರಬೇತಿಯು ಸಹ ನಿಮಗೆ ಕೊಡಲ್ಪಡಬಹುದು.
3. ಈ ಏರ್ಪಾಡಿಗಾಗಿ ಇತರ ಯಾವ ವಿಧಗಳಲ್ಲಿ ನಾವು ಬೆಂಬಲವನ್ನು ತೋರಿಸಸಾಧ್ಯವಿದೆ?
3 ನೀವು ಸ್ವಯಂಸೇವಕರಾಗಿ ಸೇವೆಮಾಡಲು ಸಾಧ್ಯವಿಲ್ಲದಿರುವಲ್ಲಿ, ಈ ಏರ್ಪಾಡಿನಲ್ಲಿ ಭಾಗವಹಿಸಲು ಶಕ್ತರಾಗಿರುವ ಇತರರನ್ನು ಉತ್ತೇಜಿಸುವ ಮೂಲಕ ನೀವು ಬೆಂಬಲವನ್ನು ನೀಡಸಾಧ್ಯವಿದೆ. ಈ ಕೆಲಸದ ಕಾರಣದಿಂದ ಯಾರು ಸಭಾ ನೇಮಕಗಳನ್ನು ಪೂರೈಸಲು ಅಶಕ್ತರಾಗಿದ್ದಾರೋ ಅವರ ಭಾಗಗಳನ್ನು ನಿರ್ವಹಿಸಲು ನೀವು ಸಹಾಯಮಾಡಸಾಧ್ಯವಿದೆ. ಮುಂದಾಗಿಯೇ ಯೋಜಿಸುವುದರ ಮೂಲಕ, ಕೆಲವರು ರಾಜ್ಯ ಸಭಾಗೃಹದ ನಿರ್ಮಾಣ ಕೆಲಸದಲ್ಲಿರುವಾಗ ಸಹ ಸಭೆಯು ಒಳ್ಳೇ ರೀತಿಯಲ್ಲಿ ಪರಾಮರಿಸಲ್ಪಡುತ್ತಿದೆ ಎಂಬುದನ್ನು ಹಿರಿಯರು ಖಚಿತಪಡಿಸಿಕೊಳ್ಳಬಲ್ಲರು. ನಿಸ್ಸಂದೇಹವಾಗಿ, ರಾಜ್ಯಾಭಿರುಚಿಯನ್ನು ಅಭಿವೃದ್ಧಿಗೊಳಿಸಲಿಕ್ಕಾಗಿ ನಾವು ಐಕ್ಯಭಾವದಿಂದ ಕೆಲಸಮಾಡುವಾಗ ಯೆಹೋವನು ಪ್ರಸನ್ನನಾಗುತ್ತಾನೆ.—ಇಬ್ರಿ. 13:16.
4. ರಾಜ್ಯ ಸಭಾಗೃಹ ನಿರ್ಮಾಣಕಾರ್ಯದ ಯೋಜನೆಗಳಲ್ಲಿ ಭಾಗವಹಿಸುವವರನ್ನು ನಾವು ಹೇಗೆ ಉತ್ತೇಜಿಸಸಾಧ್ಯವಿದೆ?
4 ಸಕಾರಾತ್ಮಕ ಮನೋಭಾವದವರಾಗಿರಿ: ಆರಾಧನಾ ಸ್ಥಳಗಳನ್ನು ಕಟ್ಟುವುದು ಹೆಚ್ಚಿನ ಸಮಯ ಮತ್ತು ಶ್ರಮಶೀಲ ಕೆಲಸವನ್ನು ಒಳಗೂಡಿದೆ. ಆದುದರಿಂದ ನಿರ್ಮಾಣಕಾರ್ಯದ ಯೋಜನೆಗಳಲ್ಲಿ ಸಹಾಯಮಾಡಲಿಕ್ಕಾಗಿ ಆಮಂತ್ರಿಸಲ್ಪಟ್ಟಿರುವವರು ಕೆಲವೊಮ್ಮೆ ತಮ್ಮ ಸಭೆಗಳಿಂದ ದೂರವಿರಬೇಕಾಗಬಹುದು. ಈ ಅತ್ಯಾವಶ್ಯಕ ‘ಕೆಲಸ’ಕ್ಕಾಗಿ ತ್ಯಾಗಗಳನ್ನು ಮಾಡುವಂಥ ಸ್ವಯಂಸೇವಕರನ್ನು ನಾವು ಮನಃಪೂರ್ವಕವಾಗಿ ಶ್ಲಾಘಿಸಬೇಕು ಮತ್ತು ಅವರನ್ನು ಉತ್ತೇಜಿಸಬೇಕಾಗಿದೆ.—ಅ. ಕೃ. 6:3; ರೋಮಾ. 14:19.
5. ನಿರ್ಮಾಣಕಾರ್ಯದಲ್ಲಿ ಭಾಗವಹಿಸುವ ಸ್ವಯಂಸೇವಕರು ಸಮತೂಕಭಾವವನ್ನು ಹೇಗೆ ತೋರಿಸಬಹುದು?
5 ಸಮತೂಕಭಾವದವರಾಗಿರಿ: ನಮಗೆ ನೇಮಿಸಲ್ಪಟ್ಟಿರುವ ಪ್ರಮುಖ ದೇವಪ್ರಭುತ್ವಾತ್ಮಕ ಕೆಲಸವು, ದೇವರ ರಾಜ್ಯದ ಕುರಿತು ಸಾರುವುದೇ ಆಗಿದೆ. (ಮಾರ್ಕ 13:10) ಈ ವಿಷಯವನ್ನು ಮನಸ್ಸಿನಲ್ಲಿಟ್ಟವರಾಗಿ, ಸ್ವಯಂಸೇವಕರು ಅನಗತ್ಯವಾಗಿ ತಮ್ಮ ಸಭೆಗಳಿಂದ ದೂರವಿರದಂತೆ ಯೋಜನೆಗಳನ್ನು ಶೆಡ್ಯೂಲ್ ಮಾಡಲು ನಾವು ಪ್ರಯತ್ನಿಸುತ್ತೇವೆ. ಅದೇ ಸಮಯದಲ್ಲಿ, ನಿರ್ಮಾಣಕಾರ್ಯದಲ್ಲಿ ಭಾಗವಹಿಸುವ ಸ್ವಯಂಸೇವಕರು ಸಹ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ ಸಮತೂಕಭಾವದವರಾಗಿರಲು ಪ್ರಯತ್ನಿಸಬೇಕು. ತಾವು ಸಭೆಯಿಂದ ದೂರವಿರುವಾಗ, ಇತರರು ತಮ್ಮ ಸಭಾ ನೇಮಕಗಳನ್ನು ಪೂರೈಸುವಂತೆ ಏರ್ಪಾಡುಮಾಡಲಾಗಿದೆ ಎಂಬುದನ್ನು ಅವರು ಖಚಿತಪಡಿಸಿಕೊಳ್ಳಲು ಮರೆಯಬಾರದು.
6. ಸತ್ಯಾರಾಧನೆಯನ್ನು ಪ್ರವರ್ಧಿಸುವುದರಲ್ಲಿ ಸಭೆಯಲ್ಲಿರುವವರೆಲ್ಲರೂ ಸಹಕರಿಸುವಾಗ ಏನು ಸಾಧಿಸಲ್ಪಡುತ್ತದೆ?
6 ಅಪೊಸ್ತಲ ಪೌಲನು ಸಭೆಯ ಸದಸ್ಯರನ್ನು “ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು” ಹೊಂದಲಿಕ್ಕಾಗಿ ಒಮ್ಮತದಿಂದ ಕೆಲಸಮಾಡುತ್ತಿರುವವರಾಗಿ ವರ್ಣಿಸಿದನು. (ಎಫೆ. 4:16) ಯೆಹೋವನಿಗಾಗಿ ಹಾಗೂ ಸತ್ಯಾರಾಧನೆಗಾಗಿ ನಮಗಿರುವ ಪ್ರೀತಿಯು, ಸುವಾರ್ತೆಯು ಸಾರಲ್ಪಡುವುದರಲ್ಲಿ ಮತ್ತು ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯವನ್ನು ಬೆಂಬಲಿಸುವುದರಲ್ಲಿ ಸಹಕರಿಸುವಂತೆ ಪ್ರಚೋದಿಸುತ್ತದೆ.