ನಮ್ಮ ಕ್ರೈಸ್ತ ಜೀವನ
ನಿಮ್ಮ ಸಮಯ, ಶಕ್ತಿಯನ್ನು ಕಾಣಿಕೆಯಾಗಿ ನೀಡಿ
ಯೆಶಾಯ ಹೇಳಿದಂತೆ ಇಂದು ಯೆಹೋವನ ಸಂಘಟನೆ ದಿನದಿಂದ ದಿನಕ್ಕೆ ಬೆಳಿತಾ ಹೋಗ್ತಿದೆ. (ಯೆಶಾ 54:2) ಹೊಸ ಹೊಸ ರಾಜ್ಯ ಸಭಾಗೃಹ, ಅಧಿವೇಶನ ಹಾಲ್ ಮತ್ತು ಬ್ರಾಂಚ್ ಕಟ್ಟಡಗಳ ಅಗತ್ಯ ಜಾಸ್ತಿ ಆಗ್ತಿದೆ. ಅಷ್ಟೇ ಅಲ್ಲ ಇವುಗಳನ್ನು ಕಟ್ಟಿ ಮುಗಿಸಿದ ಮೇಲೂ ಮೇನ್‌ಟೇನ್ ಮಾಡೋದು ತುಂಬ ಅಗತ್ಯ. ಹಾಗಾಗಿ ನಮ್ಮ ಸಮಯ ಶಕ್ತಿಯನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅದಕ್ಕೆ ಯಾವೆಲ್ಲ ಅವಕಾಶ ಇದೆ?
ನಮ್ಮ ಕ್ಷೇತ್ರಸೇವಾ ಗುಂಪಿಗೆ ರಾಜ್ಯ ಸಭಾಗೃಹ ಕ್ಲೀನಿಂಗ್ ಸರದಿ ಬಂದಾಗ ಕೈಜೋಡಿಸಬಹುದು
ರಾಜ್ಯ ಸಭಾಗೃಹ ಮೇನ್‌ಟೇನ್ ಮಾಡೋ ತರಬೇತಿ ಪಡೆಯಲು ಮುಂದೆ ಬರಬಹುದು
ಹತ್ತಿರವಿರೋ ನಿರ್ಮಾಣ ಕೆಲಸ ಅಥವಾ ಮೇನ್‌ಟೇನ್ ಮಾಡೋ ಕೆಲಸಕ್ಕೆ ಆಗಾಗ ಹೋಗಿ ಸಹಾಯ ಮಾಡೋ ಇಷ್ಟ ಇರೋದಾದ್ರೆ ಲೋಕಲ್ ಡಿಸೈನ್/ಕನ್‌ಸ್ಟ್ರಕ್ಷನ್ ವಾಲಂಟಿಯರ್ ಅಪ್ಲಿಕೇಷನ್ (DC-50) ಭರ್ತಿ ಮಾಡಬಹುದು
ಒಂದು ವಾರ ಅಥ್ವಾ ಅದಕ್ಕಿಂತ ಜಾಸ್ತಿ ದಿನ ವಾಲಂಟಿಯರ್ ಆಗಿ ಬೆತೆಲಿನಲ್ಲಿ ಅಥವಾ ಬೆತೆಲಿಗೆ ಸಂಬಂಧಿಸಿದ ಬೇರೆ ಕೆಲಸ ಮಾಡಲು ಅಪ್ಲಿಕೇಷನ್ ಆಫ್ ವಾಲಂಟಿಯರ್ ಪ್ರೋಗ್ರಾಮ್ (A-19) ಫಾರ್ಮ್ ಭರ್ತಿ ಮಾಡಬಹುದು
ಹೊಸ ನಿರ್ಮಾಣಕಾರ್ಯದ ಪ್ರಾಜೆಕ್ಟ್ ಪ್ಲಾನ್—ತುಣುಕು ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಇಸವಿ 2014 ರಿಂದ ವಿಡಿಯೋಗಳ ಬಳಕೆ ಹೇಗೆ ಹೆಚ್ಚಾಗುತ್ತಾ ಬಂದಿದೆ?
ವಿಡಿಯೋಗಳನ್ನ ತಯಾರಿಸಲು ಯಾವ ಪ್ರಾಜೆಕ್ಟ್ ಪ್ಲಾನ್ ಮಾಡಲಾಗಿದೆ? ಮತ್ತು ಈ ಪ್ರಾಜೆಕ್ಟ್ ಯಾವಾಗ ಆರಂಭ ಆಗಿ, ಯಾವಾಗ ಕೊನೆಗೊಳ್ಳುತ್ತೆ?
ಈ ಪ್ರಾಜೆಕ್ಟ್‌ಗೆ ಸ್ವಯಂಸೇವಕರು ಹೇಗೆ ಸಹಾಯ ಮಾಡಬಹುದು?
ರಾಮಾಪೊ ನಿರ್ಮಾಣ ಕಾರ್ಯದಲ್ಲಿ ಸಹಾಯ ಮಾಡಲು ಇಷ್ಟಪಡೋರು ಅಪ್ಲಿಕೇಷನ್ (DC-50) ಹಾಕಿ ಹತ್ತಿರ ಇರೋ ನಿರ್ಮಾಣ ಕೆಲಸಗಳಲ್ಲಿ ಭಾಗವಹಿಸಿರಬೇಕು ಯಾಕೆ?
ಈ ಪ್ರಾಜೆಕ್ಟನ್ನು ಯೆಹೋವನು ಮಾರ್ಗದರ್ಶಿಸಿ ಮುನ್ನೆಡೆಸುತ್ತಿದ್ದಾನೆ ಅಂತ ನಾವು ಹೇಗೆ ಹೇಳಬಹುದು?
ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಲು ಆಗದಿದ್ರೂ ನಾವು ಈ ಪ್ರಾಜೆಕ್ಟನ್ನ ಹೇಗೆ ಬೆಂಬಲಿಸಬಹುದು?