ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಜುಲೈ1
“ಇಂದು ನಾವು ನಿಜವಾಗಿಯೂ ಸಂತೋಷವಾಗಿರಲು ಸಾಧ್ಯವೇ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ನಂತರ ಪುಟ 8ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು, ನಾವಿಂದು ನಿಜ ಸಂತೋಷವನ್ನು ಪಡೆದುಕೊಳ್ಳಲು ಸಹಾಯಮಾಡುವಂತಹ ಕೆಲವು ಸಲಹೆಗಳ ಕುರಿತು ಚರ್ಚಿಸುತ್ತದೆ.” ಕೀರ್ತನೆ 40:4ನ್ನು ಓದಿರಿ.
ಎಚ್ಚರ! ಜುಲೈ - ಸೆಪ್ಟೆಂ.
“ಈ ಲೋಕದಲ್ಲಿ ಯಶಸ್ಸು ಪಡೆಯಬೇಕಾದರೆ, ನಾವು ಆಕ್ರಮಣಶೀಲ ಸ್ವಭಾವದವರಾಗಿರಬೇಕು ಎಂದು ಕೆಲವು ಜನರು ನಂಬುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯೇಸು ಯಾವ ಸಲಹೆ ನೀಡಿದ್ದಾನೆಂದು ಗಮನಿಸಿರಿ. [ಮತ್ತಾಯ 5:5, 9ನ್ನು ಓದಿರಿ.] ನೀವು ಈ ಮಾತುಗಳನ್ನು ಒಪ್ಪುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು ಸಮಾಧಾನಪಡಿಸುವವರಾಗಿರುವ ಮೂಲಕ ಬರುವ ಮೂರು ಪ್ರಯೋಜನಗಳನ್ನು ಎತ್ತಿತೋರಿಸುತ್ತದೆ.” ಪುಟ 28ರಲ್ಲಿರುವ ಲೇಖನವನ್ನು ತೋರಿಸಿರಿ.
ಕಾವಲಿನಬುರುಜು ಆಗ.1
“ಹತಾಶಭಾವವನ್ನು ನಾವು ಹೇಗೆ ನಿಭಾಯಿಸಬಲ್ಲೆವು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ನಂತರ ಪುಟ 17ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಪತ್ರಿಕೆಯು ನಕರಾತ್ಮಕ ಭಾವನೆಗಳನ್ನು ನಿಭಾಯಿಸಿ ಜಯಿಸಲು ನಮಗೆ ಸಹಾಯಮಾಡುವ ಪ್ರಾಯೋಗಿಕ ಸಲಹೆಗಳನ್ನು ಚರ್ಚಿಸುತ್ತದೆ.” 1 ಪೇತ್ರ 5:6, 7ನ್ನು ಓದಿರಿ.
ಎಚ್ಚರ! ಜುಲೈ - ಸೆಪ್ಟೆಂ.
“ಓದುವುದು ಒಂದು ಪ್ರಾಮುಖ್ಯ ಕೌಶಲ್ಯವಾಗಿದ್ದರೂ, ಅನೇಕ ಯುವಜನರು ಓದುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತಾರೆ. ಓದುವುದನ್ನು ಆಸಕ್ತಿಕರವಾಗಿ ಮಾಡಲು ಅವರಿಗೆ ಯಾವುದು ಸಹಾಯಮಾಡಬಲ್ಲದು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ, ನಂತರ ಪುಟ 21ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು, ಓದುವುದರ ಮಹತ್ವದ ಕುರಿತು ಮತ್ತು ಓದುವುದನ್ನು ಕಷ್ಟಕರವಾಗಿ ಕಂಡುಕೊಳ್ಳುವ ಸವಾಲನ್ನು ಹೇಗೆ ಎದುರಿಸಬಹುದು ಎಂಬುದರ ಕುರಿತು ಕೆಲವು ಉತ್ತಮ ಸಲಹೆಗಳನ್ನು ಚರ್ಚಿಸುತ್ತದೆ.”