ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಬದುಕಲಿಕ್ಕೆ ನಮ್ಮೆಲ್ಲರಿಗೆ ಹಣ ಬೇಕು. ಆದರೆ ನಾವು ಹಣ ಮಾಡುವ ಚಿಂತೆಯಲ್ಲೇ ಮುಳುಗಿಹೋಗಲು ಸಾಧ್ಯವೆಂದು ನೀವು ನೆನಸುತ್ತೀರಾ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಐಶ್ವರ್ಯವನ್ನು ಬೆನ್ನಟ್ಟುವುದರ ಫಲಿತಾಂಶಗಳ ಬಗ್ಗೆ ಇಲ್ಲಿ ಏನು ಹೇಳುತ್ತದೆ ಎಂಬುದನ್ನು ಗಮನಿಸಿ. [1 ತಿಮೊಥೆಯ 6:10ನ್ನು ಓದಿ.] ಈ ಪತ್ರಿಕೆಯು, ಒಬ್ಬನು ತನ್ನ ಜೀವನವನ್ನು ಹೇಗೆ ಸರಳವಾಗಿಡಬಹುದು ಮತ್ತು ಸ್ವಲ್ಪ ಹಣದಲ್ಲಿ ಹೇಗೆ ಜೀವನವನ್ನು ನಡೆಸಿಕೊಂಡು ಹೋಗಬಹುದೆಂಬುದಕ್ಕೆ ವ್ಯಾವಹಾರಿಕ ಸಲಹೆಗಳನ್ನು ನೀಡುತ್ತದೆ.”
ಕಾವಲಿನಬುರುಜು ಜುಲೈ1
“ಭಿನ್ನವಾದ ಹಿನ್ನೆಲೆಗಳು ಹಾಗೂ ಭಾಷೆಗಳ ಜನರ ಮಧ್ಯೆ ಸಾಮರಸ್ಯ ಸಾಧ್ಯವೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ವಿಷಯದ ಬಗ್ಗೆ ದೇವರಿಗಿರುವ ದೃಷ್ಟಿಕೋನವನ್ನು ತಿಳಿಸುವ ಒಂದು ಪುರಾತನ ಹೇಳಿಕೆಯನ್ನು ನಾನು ನಿಮಗೆ ತೋರಿಸುತ್ತೇನೆ. [ಅ. ಕೃತ್ಯಗಳು 10:34, 35ನ್ನು ಓದಿ, ಬಳಿಕ ಪುಟ 3ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು, ಅಂಥ ಒಂದು ಐಕ್ಯವನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ವಿವಾಹಗಳು ಮುರಿದುಹೋಗುತ್ತಿರುವುದು ದಿನೇ ದಿನೇ ಹೆಚ್ಚುತ್ತಿರುವುದರಿಂದ ತಮ್ಮ ವಿವಾಹ ಸಂಗಾತಿಯನ್ನು ವಿವೇಚನೆಯಿಂದ ಆಯ್ದುಕೊಳ್ಳುವುದು ತುಂಬ ಪ್ರಾಮುಖ್ಯ. ಈ ವಿಷಯದಲ್ಲಿ ಸರಿಯಾದ ನಿರ್ಣಯವನ್ನು ಮಾಡಲು ನಮಗೆ ಯಾವುದು ಸಹಾಯ ಮಾಡುವುದು? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ಹಳೆಯ ನಾಣ್ಣುಡಿ ಅನೇಕರಿಗೆ ಸಹಾಯಕರವಾಗಿದೆ. [ಜ್ಞಾನೋಕ್ತಿ 22:3ನ್ನು ಓದಿ, ಬಳಿಕ ಪುಟ 16ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನವು, ಜನರು ಸರಿಯಾದ ನಿರ್ಣಯವನ್ನು ಮಾಡಲಿಕ್ಕಾಗಿ ಗಂಭೀರವಾಗಿ ಯೋಚಿಸುವಂತೆ ಮಾಡುವ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ.”
ಕಾವಲಿನಬುರುಜು ಆಗ.1
“ಯೇಸು ತಿಳಿಸಿದ ಒಂದು ವಿಷಯದ ಕುರಿತು ನಿಮ್ಮ ಅಭಿಪ್ರಾಯವೇನೆಂದು ತಿಳಿಯಲು ನಾನು ಇಷ್ಟಪಡುತ್ತೇನೆ. [ಮತ್ತಾಯ 5:3ನ್ನು ಓದಿ.] ಸಂತೋಷದಿಂದ ಇರಲು ಆಧ್ಯಾತ್ಮಿಕತೆ ಪ್ರಾಮುಖ್ಯವೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ಪತ್ರಿಕೆಯು, ನಿಜ ಆಧ್ಯಾತ್ಮಿಕತೆ ಕುರಿತು ಮತ್ತು ನಾವು ಅದನ್ನು ಕಂಡುಕೊಳ್ಳುವ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ತೋರಿಸುತ್ತದೆ.”