ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಮಹತ್ವಾಕಾಂಕ್ಷೆ ಉಳ್ಳವರಾಗಿರುವುದು ತಪ್ಪೆಂದು ನೀವು ಭಾವಿಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನೇಕರು ನೆನಸುವುದಕ್ಕೆ ವ್ಯತಿರಿಕ್ತವಾಗಿ ಬೈಬಲ್ ಮಹತ್ವಾಕಾಂಕ್ಷೆಯನ್ನು ಉತ್ತೇಜಿಸುವುದಿಲ್ಲ. ಬದಲಾಗಿ ಅದು ದೀನತೆಯನ್ನು ಉತ್ತೇಜಿಸುತ್ತದೆ. [ಯಾಕೋಬ 4:6ನ್ನು ಓದಿ, ನಂತರ ಪುಟ 16ರಲ್ಲಿರುವ ಲೇಖನವನ್ನು ತೋರಿಸಿ.] ಮಹತ್ವಾಕಾಂಕ್ಷೆಯ ಕುರಿತು ಬೈಬಲಿನ ದೃಷ್ಟಿಕೋನ ಏನಾಗಿದೆ ಮತ್ತು ಅದನ್ನು ನಾವು ಹೇಗೆ ವೀಕ್ಷಿಸಬೇಕು ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ.”
ಕಾವಲಿನಬುರುಜು ಜುಲೈ15
“ಮಾನವ ಇತಿಹಾಸದ ಸಾವಿರಾರು ವರುಷಗಳಲ್ಲಿ, ಮಾನವಕುಲವು ವಿವಿಧ ನಂಬಿಕೆಗಳನ್ನು ಬೆಳೆಸಿಕೊಂಡಿದೆ. ಇವುಗಳಲ್ಲಿ ಯಾವ ನಂಬಿಕೆಗಳು ಸತ್ಯವಾದವುಗಳು ಮತ್ತು ಯಾವುವು ಸುಳ್ಳಾದವುಗಳು ಎಂಬುದನ್ನು ಕಂಡುಹಿಡಿಯುವುದು ಸಾಧ್ಯವೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರನ್ನು ಮೆಚ್ಚಿಸುವಂಥ ಸತ್ಯ ಬೋಧನೆಗಳನ್ನು ನೀವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂಬುದನ್ನು ಈ ಪತ್ರಿಕೆಯು ಪರಿಗಣಿಸುತ್ತದೆ.” 2 ತಿಮೊಥೆಯ 3:16ನ್ನು ಓದಿ.
ಎಚ್ಚರ! ಜುಲೈ - ಸೆಪ್ಟೆಂ.
“ನಾವು ತೀರ ಕಾರ್ಯಮಗ್ನರಾಗಿರುವ ಮತ್ತು ಇತರ ಅನೇಕ ವಿಷಯಗಳು ನಮ್ಮ ಸಮಯವನ್ನು ಕೇಳಿಕೊಳ್ಳುವ ಕಾರಣ, ನಮ್ಮ ಮನೆಯನ್ನು ಶುದ್ಧವಾಗಿಡುವುದು ಅನೇಕವೇಳೆ ಒಂದು ಪಂಥಾಹ್ವಾನವಾಗಿರುತ್ತದೆ. ಹಾಗಿದ್ದರೂ ಶುದ್ಧತೆಯನ್ನು ಕಾಪಾಡಲು ನಾವು ನಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸುವಂತೆ ಶಾಸ್ತ್ರವಚನಗಳು ಉತ್ತೇಜಿಸುತ್ತವೆ. [ಯೆಶಾಯ 1:16ನ್ನು ಓದಿ.] ನಮ್ಮ ಮನೆಗಳನ್ನು ಶುದ್ಧವಾಗಿಡಲು ನಾವು ಏನನ್ನು ಮಾಡಬಲ್ಲೆವು ಎಂಬ ವಿಷಯದಲ್ಲಿ ಕೆಲವು ವ್ಯಾವಹಾರಿಕ ಸಲಹೆಗಳನ್ನು ಪಡೆದುಕೊಳ್ಳಲು ನೀವು ಬಯಸುತ್ತೀರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ, ಅನಂತರ ಪುಟ 21ರಲ್ಲಿರುವ ಲೇಖನವನ್ನು ತೋರಿಸಿರಿ ಮತ್ತು ‘ಮನೆಯನ್ನು ಶುಚಿಗೊಳಿಸುವ ವ್ಯಾವಹಾರಿಕ ಕಾರ್ಯಕ್ರಮ’ ಎಂಬ ಚೌಕದ ಕಡೆಗೆ ಮನೆಯವರ ಗಮನವನ್ನು ತಿರುಗಿಸಿರಿ.
ಕಾವಲಿನಬುರುಜು ಆಗ.1
“ಅನೇಕರು ಇಂದು ತಾವು ಅನರ್ಹರು ಎಂಬ ಭಾವನೆಯೊಂದಿಗೆ ಹೆಣಗಾಡುತ್ತಿದ್ದಾರೆ. ಅಂಥ ಜನರಿಗೆ ಹೇಗೆ ಸಹಾಯಮಾಡಸಾಧ್ಯವಿದೆ ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅಂಥ ಜನರು ನಿಜ ಆನಂದವನ್ನು ಕಂಡುಕೊಳ್ಳಲು ಬೈಬಲ್ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ.” “ನೀವು ಆನಂದವನ್ನು ಪಡೆಯುವಂತೆ ಬೈಬಲ್ ಸಹಾಯಮಾಡಬಲ್ಲದು” ಎಂಬ ಲೇಖನದಲ್ಲಿ ದಪ್ಪ ಓರೆಅಕ್ಷರಗಳಲ್ಲಿರುವ ವಚನಗಳನ್ನು ಎತ್ತಿತೋರಿಸಿರಿ.