ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಮಾಚ್ 1
“ಅನೇಕರು ಇಂದು ಕುಟುಂಬ ಜೀವನದಲ್ಲಿ ಸಂತೋಷವನ್ನೇ ಕಂಡುಕೊಳ್ಳುತ್ತಿಲ್ಲ. ವೈವಾಹಿಕ ಜೀವನದಲ್ಲಿ ಯಶಸ್ಸನ್ನು ಪಡೆಯಲು ದಂಪತಿಗೆ ಯಾವುದು ಸಹಾಯ ಮಾಡಬಲ್ಲದು? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಎಫೆಸ 5:33ನ್ನು ಓದಿ. ಬಳಿಕ ಪುಟ 9ರಲ್ಲಿರುವ ಲೇಖನವನ್ನು ತೋರಿಸಿರಿ.] ಈ ಲೇಖನಮಾಲೆ ಗಂಡಹೆಂಡತಿಯ ಪಾತ್ರವನ್ನು ವಿವರಿಸುತ್ತದೆ. ಮಾತ್ರವಲ್ಲ, ಅವರು ಕುಟುಂಬ ಜೀವನದಲ್ಲಿ ಹೇಗೆ ಸಂತೋಷವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದಕ್ಕೆ ವ್ಯಾವಹಾರಿಕ ಸಲಹೆಗಳನ್ನು ಕೊಡುತ್ತದೆ.”
ಎಚ್ಚರ! ಜನ. - ಮಾರ್ಚ್
“ಈಗ ನಡೆಯುತ್ತಿರುವ ಎಲ್ಲಾ ವಿಷಯಗಳಿಗೆ ದೇವರೇ ಹೊಣೆಗಾರನೆಂದು ಕೆಲವರು ನೆನಸುತ್ತಾರೆ. ಯಾವುದಾದರೂ ದುರಂತವು ಸಂಭವಿಸುವಲ್ಲಿ, ಅದರ ಹಿಂದೆ ದೇವರಿಗೆ ಏನೋ ಒಂದು ಒಳ್ಳೇ ಕಾರಣವಿದ್ದಿರಬೇಕೆಂದು ಅವರು ಹೇಳುತ್ತಾರೆ. ಇದರ ಬಗ್ಗೆ ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ನಂತರ ಯಾಕೋಬ 1:13ನ್ನು ಓದಿ.] ಕಷ್ಟಸಂಕಟಕ್ಕಿರುವ ಕಾರಣದ ಕುರಿತು ಬೈಬಲ್ ಏನು ಹೇಳುತ್ತದೆ ಮತ್ತು ದೇವರು ಈಗಿರುವ ಎಲ್ಲ ಕಷ್ಟಸಂಕಟವನ್ನು ಹೇಗೆ ಅಂತ್ಯಗೊಳಿಸುವನು ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಕಾವಲಿನಬುರುಜು ಏಪ್ರಿ. 1
“ನಮ್ಮ ಆರೋಗ್ಯ, ನಮ್ಮ ಕುಟುಂಬ ಮತ್ತು ನಮ್ಮ ಉದ್ಯೋಗದ ಬಗ್ಗೆ ನಾವು ಪ್ರತಿ ದಿನ ಒಂದಲ್ಲ ಒಂದು ಪ್ರಶ್ನೆಯನ್ನು ಎದುರಿಸುತ್ತೇವೆ. ಇದರ ಕುರಿತು ಭರವಸಾರ್ಹ ಮತ್ತು ವ್ಯಾವಹಾರಿಕ ಉತ್ತರಗಳನ್ನು ಎಲ್ಲಿ ಕಂಡುಕೊಳ್ಳಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಬೈಬಲ್ 2 ತಿಮೊಥೆಯ 3:16ರಲ್ಲಿ ಏನು ಹೇಳುತ್ತದೆ ಎಂಬುದನ್ನು ಗಮನಿಸಿ. [ಓದಿ.] ಅನೇಕ ಕಾರ್ಯಸಾಧಕ ವಿಧಗಳಲ್ಲಿ ಬೈಬಲ್ ಹೇಗೆ ಸಹಾಯ ಮಾಡಬಲ್ಲದು ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಇದು ಎಂದಾದರೂ ಸತ್ಯವಾಗುವುದು ಎಂದು ನೀವು ನೆನಸುತ್ತೀರೋ? [ಯೆಶಾಯ 33:24ನ್ನು ಓದಿ. ಬಳಿಕ ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ಪತ್ರಿಕೆಯು ವೈದ್ಯಕೀಯ ವಿಜ್ಞಾನ ಏನನ್ನು ಸಾಧಿಸುತ್ತಿದೆ ಮತ್ತು ಬೈಬಲಿನ ಆ ವಾಗ್ದಾನವು ಹೇಗೆ ನೆರವೇರುವುದು ಎಂಬುದನ್ನು ವಿವರಿಸುತ್ತದೆ.”