ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನ. - ಮಾರ್ಚ್
“ಕುಟುಂಬದಲ್ಲಿ ಮನನೋಯಿಸುವ ಮಾತುಗಳನ್ನಾಡದಿರುವ ಬಗ್ಗೆ ನಾವು ನಮ್ಮ ನೆರೆಯವರೊಂದಿಗೆ ಮಾತಾಡುತ್ತಿದ್ದೇವೆ. ಈ ವಿಷಯದ ಕುರಿತು ಕೆಲವು ಪ್ರಾಯೋಗಿಕ ಸಲಹೆಗಳನ್ನು ಚರ್ಚಿಸಲು ನಿಮಗೆ ಇಷ್ಟವಿದೆಯೋ? [ಮನೆಯವನು ಇಷ್ಟಪಟ್ಟರೆ, ಈ ವಿಷಯದಲ್ಲಿ ಮಾನವರಿಗಿರುವ ಬಲಹೀನತೆಯ ಕುರಿತು ದೇವರು ಏನು ಹೇಳುತ್ತಾನೆಂದು ಓದಿತೋರಿಸಬಹುದೋ ಎಂದು ಕೇಳಿ. ಅವನು ಒಪ್ಪುವಲ್ಲಿ ಯಾಕೋಬ 3:2ನ್ನು ಓದಿರಿ.] ಈ ಲೇಖನವು, ನಮ್ಮ ಮಾತಿನಿಂದ ಕುಟುಂಬ ಸದಸ್ಯರ ಮನನೋಯಿಸುವುದನ್ನು ತಡೆಯಲು ಕೆಲವು ವ್ಯಾವಹಾರಿಕ ಸಲಹೆಗಳನ್ನು ನೀಡುತ್ತದೆ.” ಪುಟ 10 ರಿಂದ ಆರಂಭವಾಗುವ ಲೇಖನವನ್ನು ತೋರಿಸಿ.
ಎಚ್ಚರ! ಜನ. - ಮಾರ್ಚ್
“ಇಂದು ಇಲೆಕ್ಟ್ರಾನಿಕ್ ಗೇಮ್ಸ್ ಎಲ್ಲೆಡೆಯೂ ಲಭ್ಯವಿವೆ. ಕೆಲವು ಗೇಮ್ಗಳಲ್ಲಿ ಅಹಿತಕರವಾದ ವಿಷಯಗಳು ಕೂಡ ಇರುತ್ತವೆ. ಎಳೆಯರು ಈ ಅಪಾಯಗಳನ್ನು ಗುರುತಿಸಿ, ಅವುಗಳಿಂದ ತಪ್ಪಿಸಿಕೊಳ್ಳುವಂತೆ ನಾವು ಹೇಗೆ ಸಹಾಯ ನೀಡಬಲ್ಲೆವು? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಕೆಲವೊಂದು ಪ್ರಾಯೋಗಿಕ ಸಲಹೆಗಳನ್ನು ನೀವು ತಿಳಿಯಲು ಬಯಸುವಿರೋ? [ಮನೆಯವನು ಒಪ್ಪುವಲ್ಲಿ, ಪುಟ 21ರ ಚೌಕವನ್ನು ತೋರಿಸಿರಿ. ಆ ವ್ಯಕ್ತಿಯು ಸಂಭಾಷಣೆಯನ್ನು ಮುಂದುವರಿಸಲು ಬಯಸುವಲ್ಲಿ, ಅವನಿಗೆ ನೀವು ಕೊಲೊಸ್ಸೆ 3:8ನ್ನು ತೋರಿಸಬಹುದು.] ಇನ್ನೂ ಹೆಚ್ಚಿನ ಸಹಾಯಕರ ಮಾಹಿತಿಯನ್ನು ನೀವು ಈ ಲೇಖನದಲ್ಲಿ ಕಂಡುಕೊಳ್ಳುವಿರಿ.”
ಕಾವಲಿನಬುರುಜು ಏಪ್ರಿ. - ಜೂನ್
“ಇಂದು ಇಷ್ಟೆಲ್ಲ ಸಮಸ್ಯೆಗಳಿರುವಾಗ, ನಿಜ ನೆಮ್ಮದಿ ಸಿಗಲು ಸಾಧ್ಯವೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಈ ಪತ್ರಿಕೆಯಿಂದ ಒಂದು ವಿಷಯವನ್ನು ನಿಮಗೆ ಓದಿ ಹೇಳಬಹುದೋ? [ಮನೆಯವನು ಒಪ್ಪುವಲ್ಲಿ, 8-9ನೇ ಪುಟಗಳಲ್ಲಿರುವ ಯಾವುದಾದರೊಂದು ವಚನ ಓದಿ.] ನಾವು ಅಸ್ತಿತ್ವಕ್ಕೆ ಬಂದದ್ದು ಹೇಗೆ? ಜೀವನದ ಉದ್ದೇಶ ಏನು? ಭವಿಷ್ಯತ್ತು ನಮಗಾಗಿ ಏನನ್ನು ಕಾದಿರಿಸಿದೆ? ಎಂಬ ವಿಷಯಗಳನ್ನು ಈ ಪತ್ರಿಕೆ ಚರ್ಚಿಸುತ್ತದೆ.”
ಎಚ್ಚರ! ಏಪ್ರಿ. - ಜೂನ್
“ಇಂದು ಅಪರಾಧಗಳು ಹೆಚ್ಚಾಗುತ್ತಿರುವುದರಿಂದ ಜನರಿಗೆ ತಾವು ಸುರಕ್ಷಿತರು ಎಂದೆನಿಸುವುದಿಲ್ಲ. ಪರಿಸ್ಥಿತಿಯು ಎಂದಾದರೂ ಸುಧಾರಿಸುವುದೆಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಇದರ ಕುರಿತು ಮಾತಾಡುವಂತೆ ನೀವು ಅನುಮತಿಸುವಲ್ಲಿ, ದೇವರು ನಮ್ಮ ಮುಂದಿಟ್ಟಿರುವ ನಿರೀಕ್ಷೆಯನ್ನು ಓದಿ ಹೇಳಲು ಬಯಸುತ್ತೇನೆ. [ಮನೆಯವನು ಒಪ್ಪುವಲ್ಲಿ ಕೀರ್ತನೆ 37:10 ಓದಿ.] ಅಪರಾಧಗಳಿಗೆ ಕಾರಣ ಮತ್ತು ಪರಿಹಾರ ಏನು ಎಂಬುದರ ಕುರಿತು ಈ ಪತ್ರಿಕೆ ಮಾತಾಡುತ್ತದೆ.”