“ಕಾರ್ಯಕ್ಕೆ ನಡೆಸುವ ವಿಶಾಲವಾದ ದ್ವಾರವನ್ನು” ನೀವು ಪ್ರವೇಶಿಸಬಲ್ಲಿರೋ?
1. “ಕಾರ್ಯಕ್ಕೆ ನಡೆಸುವ” ಯಾವ “ವಿಶಾಲವಾದ ದ್ವಾರ” ನಮಗೆ ತೆರೆದಿದೆ?
1 “ಕಾರ್ಯಕ್ಕೆ ನಡೆಸುವ ವಿಶಾಲವಾದ ದ್ವಾರ” ಅಪೊಸ್ತಲ ಪೌಲನಿಗೆ ತೆರೆದಾಗ, ಅವನು ಸಿಕ್ಕಿದ ಅವಕಾಶವನ್ನು ಅತ್ಯಾಸಕ್ತಿಯಿಂದ ರಾಜ್ಯಾಭಿರುಚಿಗಳ ವರ್ಧನೆಗಾಗಿ ಉಪಯೋಗಿಸಿಕೊಂಡನು. ಅನೇಕ ವಿರೋಧಿಗಳಿದ್ದಾಗ್ಯೂ ಅವನದನ್ನು ಮಾಡಿದನು. (1 ಕೊರಿಂ. 16:9, NW) ಇಂದು ಲೋಕವ್ಯಾಪಕವಾಗಿ ಸುಮಾರು 6,42,000 ರಾಜ್ಯ ಪ್ರಚಾರಕರು ಕ್ರಮದ ಪಯನೀಯರರಾಗುವ ಮೂಲಕ ಕಾರ್ಯದ ಒಂದು ವಿಶಾಲ ದ್ವಾರವನ್ನು ಪ್ರವೇಶಿಸಿದ್ದಾರೆ.
2. ನಮ್ಮ ಸನ್ನಿವೇಶವನ್ನು ಆಗಿಂದಾಗ್ಗೆ ತೂಗಿನೋಡುವುದು ಏಕೆ ಒಳ್ಳೆಯದು?
2 ಸನ್ನಿವೇಶಗಳು ಬದಲಾಗುತ್ತವೆ: ನಮ್ಮ ಚಟುವಟಿಕೆಯನ್ನು ಪ್ರಸ್ತುತ ಸನ್ನಿವೇಶಗಳು ಸೀಮಿತಗೊಳಿಸಬಹುದಾದರೂ, ಅವು ಬದಲಾಗುತ್ತವೆ. ಆದುದರಿಂದ ಅತ್ಯುತ್ತಮ ಪರಿಸ್ಥಿತಿಗಳಿಗಾಗಿ ಕಾದುಕೊಂಡಿರದೆ ನಮ್ಮ ಸ್ವಂತ ಸನ್ನಿವೇಶವನ್ನು ಆಗಿಂದಾಗ್ಗೆ ತೂಗಿನೋಡುವುದು ವಿವೇಕಪ್ರದ. (ಪ್ರಸಂ. 11:4) ಪ್ರೌಢಶಾಲೆಯನ್ನು ಇನ್ನೇನು ಮುಗಿಸಲಿರುವ ಯುವಕರು ನೀವಾಗಿದ್ದೀರೊ? ನಿಮ್ಮ ಮಕ್ಕಳನ್ನು ಸ್ಪಲ್ಪ ಸಮಯದಲ್ಲೇ ಶಾಲೆಗೆ ಸೇರಿಸಲಿರುವ ಹೆತ್ತವರು ನೀವಾಗಿದ್ದೀರೊ? ನಿಮ್ಮ ಐಹಿಕ ಕೆಲಸದಿಂದ ನೀವು ಇನ್ನೇನು ಸ್ವಲ್ಪದರಲ್ಲೇ ನಿವೃತ್ತಿಯಾಗಲಿರುವಿರೊ? ಇಂಥ ಬದಲಾವಣೆಗಳು ನಿಮಗೆ ಹೆಚ್ಚಿನ ಸಮಯವನ್ನು ದೊರಕಿಸಿಕೊಟ್ಟು ಕ್ರಮದ ಪಯನೀಯರ್ ಸೇವೆಯನ್ನು ಪ್ರವೇಶಿಸಲು ದಾರಿಮಾಡಬಲ್ಲವು. ಹಿಂದೆ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಒಬ್ಬ ಸಹೋದರಿಯು ತನ್ನ 89ನೇ ಪ್ರಾಯದಲ್ಲಿ ಪಯನೀಯರ್ ಸೇವೆ ಮಾಡಲು ನಿರ್ಧರಿಸಿದಳು. ಏಕೆ? ಒಂದು ವರ್ಷದಿಂದ ಅವಳು ಆಸ್ಪತ್ರೆಯಲ್ಲಿ ದಾಖಲಾಗದಿದ್ದ ಕಾರಣ ಪಯನೀಯರ್ ಸೇವೆಯನ್ನು ಮಾಡುವಂತೆ ತನ್ನ ಆರೋಗ್ಯವು ಅನುಮತಿಸಬಹುದೆಂದು ಅವಳಿಗನಿಸಿತು.
3. ಕ್ರಮದ ಪಯನೀಯರ್ ಸೇವೆ ಮಾಡಲು ಕೆಲವರು ಯಾವ ಹೊಂದಾಣಿಕೆಗಳನ್ನು ಮಾಡಿದ್ದಾರೆ?
3 ಪೌಲನ ವಿಷಯದಲ್ಲಿ ನೋಡುವುದಾದರೆ, ಕೊರಿಂಥದಲ್ಲಿದ್ದ ತನ್ನ ಸಹೋದರರನ್ನು ಭೇಟಿಮಾಡಬೇಕೆಂದು ಅವನು ಮೂಲತಃ ಯೋಚಿಸಿದ್ದನು. ಆದರೂ ತನ್ನ ಯೋಜನೆಗಳನ್ನು ಸುವಾರ್ತೆಗೋಸ್ಕರ ಅವನು ಹೊಂದಿಸಿಕೊಂಡನು. ಇಂದು ಕ್ರಮದ ಪಯನೀಯರರಾಗಿರುವ ಹೆಚ್ಚಿನವರಿಗೆ ಪಯನೀಯರ್ ಸೇವೆಯನ್ನು ಮಾಡಲು ಅನೇಕ ಹೊಂದಾಣಿಕೆಗಳನ್ನು ಮಾಡಬೇಕಾಗಿತ್ತು. ಕೆಲವರು ತಮ್ಮ ಬದುಕನ್ನು ಎಷ್ಟರ ಮಟ್ಟಿಗೆ ಸರಳೀಕರಿಸಿದ್ದಾರೆಂದರೆ, ಮಿತಗೊಳಿಸಲ್ಪಟ್ಟ ತಮ್ಮ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲು ಒಂದು ಪಾರ್ಟ್ಟೈಮ್ ಕೆಲಸವಷ್ಟೇ ಅವರಿಗೆ ಸಾಕು. ಅಂಥವರು ತಮ್ಮ ಸೇವಾ ಸುಯೋಗದಲ್ಲಿ ಸಂತೋಷವನ್ನು ಕಂಡುಕೊಂಡಿದ್ದಾರೆ. (1 ತಿಮೊ. 6:6-8) ಕೆಲವು ದಂಪತಿಗಳು, ಗಂಡನೊಬ್ಬನ ಸಂಬಳದಿಂದಲೇ ತಮ್ಮ ಮನೆಯ ಖರ್ಚನ್ನು ನಡೆಸಿಕೊಂಡು ಹೋಗುವಂತೆ ಹೊಂದಾಣಿಕೆಗಳನ್ನು ಮಾಡಿದ್ದಾರೆ. ಇದರಿಂದ ಹೆಂಡತಿಗೆ ಪಯನೀಯರ್ ಸೇವೆ ಮಾಡಲು ದ್ವಾರ ತೆರೆದಿದೆ.
4. ತಾಸುಗಳನ್ನು ಪೂರ್ತಿ ಮಾಡಬಹುದೊ ಇಲ್ಲವೊ ಎಂಬ ಅನಿಶ್ಚಿತತೆ ಇರುವಲ್ಲಿ ನಾವೇನು ಮಾಡಬಹುದು?
4 ತಾಸುಗಳನ್ನು ಪೂರ್ತಿ ಮಾಡಲು ಆಗುವುದಿಲ್ಲ ಎಂಬ ಭಯದಿಂದ ಪಯನೀಯರ್ ಸೇವೆ ಮಾಡುವ ನಿಮ್ಮ ಯೋಚನೆಯನ್ನು ಒಡನೆಯೇ ತಳ್ಳಿಹಾಕಬೇಡಿರಿ. ಒಂದು ದಿನಕ್ಕೆ ಎರಡು ತಾಸಿಗಿಂತ ಸ್ಪಲ್ಪ ಹೆಚ್ಚು ಸಮಯ ಬೇಕಾಗಿದೆ ಅಷ್ಟೇ. ನಿಮ್ಮಿಂದ ಅದಾಗುವುದೊ ಇಲ್ಲವೊ ಎಂಬ ಅನಿಶ್ಚಿತತೆ ನಿಮಗಿರುವಲ್ಲಿ, ಒಂದೆರಡು ತಿಂಗಳುಗಳಿಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡ ಪ್ರಯತ್ನಿಸಿರಿ ಮತ್ತು ಆಗ 70 ತಾಸುಗಳನ್ನು ಮುಟ್ಟುವ ವೈಯಕ್ತಿಕ ಗುರಿಯನ್ನಿಡಿರಿ. ಇದು ಪಯನೀಯರ್ ಸೇವೆಯ ಆನಂದಗಳನ್ನು ಸವಿದುನೋಡುವ ಅವಕಾಶವನ್ನು ನಿಮಗೆ ಕೊಡುತ್ತದೆ. (ಕೀರ್ತ. 34:8) ಈಗ ಪಯನೀಯರ್ ಸೇವೆಯನ್ನು ಮಾಡುತ್ತಿರುವವರೊಂದಿಗೆ ಮಾತಾಡಿರಿ. ನಿಮಗೆ ಇರುವಂಥದ್ದೇ ಪಂಥಾಹ್ವಾನಗಳನ್ನು ಅವರು ಸಹ ಜಯಿಸಿದ್ದಿರಬಹುದು. (ಜ್ಞಾನೋ. 15:22) ಶುಶ್ರೂಷೆಯನ್ನು ವಿಸ್ತರಿಸಲು ನೀವು ಮಾಡುವ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದಕ್ಕಾಗಿ ಬೇಡಿರಿ.—1 ಯೋಹಾ. 5:14.
5. ಕ್ರಮದ ಪಯನೀಯರ್ ಸೇವೆಯು ಬೆನ್ನಟ್ಟಲು ತಕ್ಕದಾದ ಗುರಿಯಾಗಿರುವುದು ಏಕೆ?
5 ಬೆನ್ನಟ್ಟಲು ತಕ್ಕದಾದ ಗುರಿ: ಕ್ರಮದ ಪಯನೀಯರರಾಗಿ ಸೇವೆ ಮಾಡುವುದು ಹೇರಳ ಆಶೀರ್ವಾದಗಳನ್ನು ತರುತ್ತದೆ. ಹೆಚ್ಚಾಗಿ ಕೊಡುವುದರಿಂದ ಬರುವ ಹೆಚ್ಚಿನ ಸಂತೋಷವನ್ನು ನೀವು ಅನುಭವಿಸಲು ಅದು ಅವಕಾಶಮಾಡಿಕೊಡುತ್ತದೆ. (ಅ. ಕೃ. 20:35) ಪಯನೀಯರ್ ಸೇವೆಯು ದೇವರ ವಾಕ್ಯವನ್ನು ಸರಿಯಾಗಿ ಉಪಯೋಗಿಸುವ ನಿಮ್ಮ ಸಾಮರ್ಥ್ಯವನ್ನು ಹರಿತಗೊಳಿಸುತ್ತದೆ. (2 ತಿಮೊ. 2:15) ಯೆಹೋವನ ಹಸ್ತವು ನಿಮ್ಮ ಪರವಾಗಿ ಕಾರ್ಯನಡಿಸುವುದನ್ನು ನೋಡುವ ಹೆಚ್ಚಿನ ಸಂದರ್ಭಗಳು ನಿಮಗೆ ಸಿಗುತ್ತವೆ. (ಅ. ಕೃ. 11:21; ಫಿಲಿ. 4:11-13) ಪಯನೀಯರ್ ಸೇವೆಯು ಸೈರಣೆಯಂಥ ಆಧ್ಯಾತ್ಮಿಕ ಗುಣಗಳನ್ನು ಸಹ ಬೆಳೆಸಿಕೊಳ್ಳಲು ಹಾಗೂ ಮತ್ತಷ್ಟು ಯೆಹೋವನ ಸಮೀಪಕ್ಕೆ ಬರಲು ನಿಮಗೆ ಸಾಧ್ಯಗೊಳಿಸುತ್ತದೆ. (ಯಾಕೋ. 4:8) ಒಬ್ಬ ಕ್ರಮದ ಪಯನೀಯರರಾಗುವ ಮೂಲಕ ಕಾರ್ಯದ ಈ ವಿಶಾಲವಾದ ದ್ವಾರವನ್ನು ನೀವು ಪ್ರವೇಶಿಸಬಲ್ಲಿರೋ?