ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ನೈತಿಕ ಮಟ್ಟಗಳು ಅಧೋಗತಿಗಿಳಿಯುತ್ತಿವೆ ಎಂದು ಲೋಕದ ಅನೇಕ ಭಾಗಗಳಲ್ಲಿರುವ ಜನರು ನೆನಸುತ್ತಾರೆ. ನೀವಿದನ್ನು ಗಮನಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ನಾವಿಂದು ನೋಡುತ್ತಿರುವ ಪರಿಸ್ಥಿತಿಗಳು ಒಂದು ಪುರಾತನ ಪ್ರವಾದನೆಯನ್ನು ನೆರವೇರಿಸುತ್ತಿವೆ. [2 ತಿಮೊಥೆಯ 3:2-4ನ್ನು ಓದಿ.] ಈ ಪತ್ರಿಕೆಯು, ನೈತಿಕ ಕುಸಿತ ಯಾವುದರ ಸೂಚನೆ ಮತ್ತು ಅದು ಮಾನವಕುಲವನ್ನು ಎತ್ತ ನಡೆಸುತ್ತಿದೆ ಎಂಬುದನ್ನು ತಿಳಿಸುತ್ತದೆ.”
ಕಾವಲಿನಬುರುಜು ಆಗ.1
“ಯೇಸು ತಿಳಿಸಿದ ಒಂದು ವಿಷಯದ ಕುರಿತು ನಿಮ್ಮ ಅಭಿಪ್ರಾಯವೇನೆಂದು ತಿಳಿಯಲು ನಾನು ಇಷ್ಟಪಡುತ್ತೇನೆ. [ಮತ್ತಾಯ 5:3ನ್ನು ಓದಿ.] ಸಂತೋಷದಿಂದ ಇರಲು ಆಧ್ಯಾತ್ಮಿಕತೆ ಪ್ರಾಮುಖ್ಯವೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ಪತ್ರಿಕೆಯು, ನಿಜ ಆಧ್ಯಾತ್ಮಿಕತೆ ಕುರಿತು ಮತ್ತು ನಾವು ಅದನ್ನು ಕಂಡುಕೊಳ್ಳುವ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ತೋರಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ಬದುಕಲಿಕ್ಕೆ ನಮ್ಮೆಲ್ಲರಿಗೆ ಹಣ ಬೇಕು. ಆದರೆ ನಾವು ಹಣ ಮಾಡುವ ಚಿಂತೆಯಲ್ಲೇ ಮುಳುಗಿಹೋಗಲು ಸಾಧ್ಯವೆಂದು ನೀವು ನೆನಸುತ್ತೀರಾ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಐಶ್ವರ್ಯವನ್ನು ಬೆನ್ನಟ್ಟುವುದರ ಫಲಿತಾಂಶಗಳ ಬಗ್ಗೆ ಇಲ್ಲಿ ಏನು ಹೇಳುತ್ತದೆ ಎಂಬುದನ್ನು ಗಮನಿಸಿ. [1 ತಿಮೊಥೆಯ 6:10ನ್ನು ಓದಿ.] ಈ ಪತ್ರಿಕೆಯು, ಒಬ್ಬನು ತನ್ನ ಜೀವನವನ್ನು ಹೇಗೆ ಸರಳವಾಗಿಡಬಹುದು ಮತ್ತು ಸ್ವಲ್ಪ ಹಣದಲ್ಲಿ ಹೇಗೆ ಜೀವನವನ್ನು ನಡೆಸಿಕೊಂಡು ಹೋಗಬಹುದೆಂಬುದಕ್ಕೆ ವ್ಯಾವಹಾರಿಕ ಸಲಹೆಗಳನ್ನು ನೀಡುತ್ತದೆ.”
ಕಾವಲಿನಬುರುಜು ಸೆಪ್ಟೆಂ.1
“ಇಲ್ಲಿ ತಿಳಿಸುವ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿದುಕೊಳ್ಳಲು ನಾನು ಬಯಸುತ್ತೇನೆ. [ಇಬ್ರಿಯ 3:4ನ್ನು ಓದಿ.] ಈ ವಿಶ್ವವನ್ನು ಒಬ್ಬ ಬುದ್ಧಿವಂತ ರಚಕನು ಸೃಷ್ಟಿಸಿದನು ಎಂಬುದನ್ನು ನೀವು ಒಪ್ಪುತ್ತೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಈ ಪತ್ರಿಕೆಯು ಸೃಷ್ಟಿಕರ್ತನೊಬ್ಬನಲ್ಲಿ ನಂಬಿಕೆಯಿಡುವುದು ನಿಜ ವಿಜ್ಞಾನದೊಂದಿಗೆ ಸಹಮತದಲ್ಲಿದೆಯೋ ಎಂಬುದನ್ನು ಪರಿಶೀಲಿಸುತ್ತದೆ.”