ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನವರಿ-ಮಾರ್ಚ್
“ಒಳ್ಳೆಯವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆಂದು ಅನೇಕರು ನೆನಸುತ್ತಾರೆ. ನೀವೂ ಹಾಗೆ ನಂಬುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಭೂಮಿಗಾಗಿ ದೇವರ ಉದ್ದೇಶವೇನೆಂದು ನೀವು ತಿಳಿಯಲು ಇಚ್ಛಿಸುತ್ತೀರೋ? [ಮನೆಯವನಿಗೆ ಆಸಕ್ತಿಯಿರುವಲ್ಲಿ ಕೀರ್ತನೆ 37:11, 29 ಓದಿ.] ಇದೇ ಭೂಮಿಯಲ್ಲಿ ಮಾನವಕುಲಕ್ಕಿರುವ ಭವಿಷ್ಯತ್ತಿನ ಕುರಿತು ಈ ಲೇಖನ ಚರ್ಚಿಸುತ್ತದೆ.” ಪುಟ 28ರಲ್ಲಿರುವ ಲೇಖನ ತೋರಿಸಿರಿ.
ಎಚ್ಚರ! ಜನವರಿ-ಮಾರ್ಚ್
“ಇಂದು ಕುಟುಂಬಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ನೀವಿದನ್ನು ಒಪ್ಪುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ವಿವಾಹದ ಮೂಲಕರ್ತನು ಕೊಡುವ ವ್ಯಾವಹಾರಿಕ ಸಲಹೆ ಅನೇಕರಿಗೆ ತಿಳಿದಿಲ್ಲ. ಒಂದು ಉದಾಹರಣೆ ತೋರಿಸಲೋ? [ಮನೆಯವನು ಒಪ್ಪುವುದಾದರೆ ಪತ್ರಿಕೆಯಲ್ಲಿರುವ ಒಂದು ವಚನ ಓದಿ.] ಎಚ್ಚರ! ಪತ್ರಿಕೆಯ ಈ ವಿಶೇಷ ಸಂಚಿಕೆಯು, ದೈವಿಕ ವಿವೇಕದ ಮೇಲೆ ಆಧಾರಿತವಾದ ಮೂಲತತ್ತ್ವಗಳು ಕುಟುಂಬಗಳಿಗೆ ಬೇರೆ ಬೇರೆ ಸವಾಲುಗಳನ್ನು ನಿಭಾಯಿಸಲು ಹೇಗೆ ನೆರವಾಗುತ್ತವೆಂದು ತೋರಿಸುತ್ತದೆ.”