ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನವರಿ-ಮಾರ್ಚ್
“ಗಂಭೀರ, ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಮಿತ್ರನಿಗೆ ಏನು ಹೇಳಬೇಕೆಂದು ನಮ್ಮಲ್ಲಿ ಹಲವರಿಗೆ ತೋಚುವುದಿಲ್ಲ. ಈ ಒಂದು ಸಲಹೆ ಬಗ್ಗೆ ನೀವೇನು ಹೇಳುತ್ತೀರಿ? [ಯಾಕೋಬ 1:19 ಓದಿ. ಬಳಿಕ ಪ್ರತಿಕ್ರಿಯೆಗೆ ಅವಕಾಶಕೊಡಿ.] ಬೈಬಲ್ ತತ್ವಗಳನ್ನು ಆಧರಿಸಿ ಹಲವಾರು ವ್ಯಾವಹಾರಿಕ ಸಲಹೆಗಳು ಈ ಲೇಖನದಲ್ಲಿವೆ.” ಪುಟ 10ರ ಲೇಖನ ತೋರಿಸಿ.
ಎಚ್ಚರ! ಜನವರಿ-ಮಾರ್ಚ್
“ಜನರಲ್ಲಿ ಇಂದು ತಕ್ಷಣ ಸೇಡುತೀರಿಸುವ ಪ್ರವೃತ್ತಿ ಹೆಚ್ಚಾಗಿದೆ. ನೀವೇನು ಹೇಳುತ್ತೀರಿ, ಯಾರಾದರೂ ನಮ್ಮನ್ನು ಸಿಟ್ಟಿಗೆಬ್ಬಿಸಿದಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಮ್ಮ ಪ್ರತಿಕ್ರಿಯೆ ಏನಾಗಿರಬೇಕೆಂದು ದೇವರು ಹೇಳುತ್ತಾನೆ? ಅದನ್ನು ಶಾಸ್ತ್ರಗಳಿಂದ ತೋರಿಸಲೋ? [ಮನೆಯವನು ಒಪ್ಪುವಲ್ಲಿ ರೋಮನ್ನರಿಗೆ 12:21 ಓದಿ.] ಆತ್ಮರಕ್ಷಣೆ ಮತ್ತು ಕಾನೂನಿನ ನೆರವು ಕೋರುವುದರ ಬಗ್ಗೆ ಶಾಸ್ತ್ರಗ್ರಂಥ ಏನು ಹೇಳುತ್ತದೆಂದು ಈ ಲೇಖನ ತಿಳಿಸುತ್ತದೆ.” ಪುಟ 18ರ ಲೇಖನ ತೋರಿಸಿ.