ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/10 ಪು. 2
  • ಪರಮ ಪ್ರಧಾನ ಕೆಲಸ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಮ ಪ್ರಧಾನ ಕೆಲಸ
  • 2010 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಿಮ್ಮಿಂದ ಬೈಬಲ್‌ ಕಲಿಸೋಕೆ ಆಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಯೇಸು ತರ ಹುರುಪಿಂದ ಸಾರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಶುಶ್ರೂಷೆಗಾಗಿ ನಮ್ಮ ಹುರುಪನ್ನು ಕಾಪಾಡಿಕೊಳ್ಳಬೇಕು
    2007 ನಮ್ಮ ರಾಜ್ಯದ ಸೇವೆ
  • ದೈವಿಕ ನಾಮವನ್ನು ಪ್ರಕಟಪಡಿಸುವುದು
    2003 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2010 ನಮ್ಮ ರಾಜ್ಯದ ಸೇವೆ
km 3/10 ಪು. 2

ಪರಮ ಪ್ರಧಾನ ಕೆಲಸ

1. ಶುಶ್ರೂಷೆಗಾಗಿ ನಮ್ಮ ಆಳವಾದ ಗಣ್ಯತೆಯು ಯಾವ ತ್ಯಾಗಗಳನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ?

1 ನಾವು ಶುಶ್ರೂಷೆಗಾಗಿ ನಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಮೀಸಲಾಗಿ ಇಡುವಂತೆ ಸದಾ ಉತ್ತೇಜಿಸಲ್ಪಡುತ್ತಿರುವುದು ಏಕೆ? ಏಕೆಂದರೆ ಅದಕ್ಕಿಂತ ಹೆಚ್ಚು ಪ್ರಾಮುಖ್ಯವಾದ ಕೆಲಸವು ಬೇರೊಂದಿಲ್ಲ. ಅದರಿಂದ ಸಾಧಿಸಲಾಗುವ ಫಲಿತಾಂಶಗಳನ್ನು ನಾವು ಪರ್ಯಾಲೋಚಿಸುವಲ್ಲಿ ಎಂದೂ ಪುನರಾವರ್ತಿಸಲ್ಪಡದ ಈ ಕೆಲಸದಲ್ಲಿ ಭಾಗವಹಿಸುವ ನಮ್ಮ ಅಪೇಕ್ಷೆಯು ಇನ್ನಷ್ಟು ಹೆಚ್ಚಾಗುವುದು.—ಅ. ಕಾ. 20:24.

2. ನಮ್ಮ ಸಾರುವ ಕೆಲಸವು ಯೆಹೋವನ ಮಹಾ ನಾಮವನ್ನು ಪವಿತ್ರೀಕರಿಸಲು ಹೇಗೆ ನೆರವಾಗುತ್ತದೆ?

2 ಯೆಹೋವನ ನಾಮವನ್ನು ಪವಿತ್ರೀಕರಿಸುತ್ತದೆ: ಕ್ರಿಸ್ತ ಯೇಸುವಿನ ಮೂಲಕವಾದ ಯೆಹೋವನ ರಾಜ್ಯವು ಮಾನವ ಸರಕಾರಗಳನ್ನೆಲ್ಲ ಸ್ಥಾನಪಲ್ಲಟಗೊಳಿಸಿ ಮಾನವಕುಲವನ್ನು ಬಾಧಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ತರುವುದೆಂದು ನಮ್ಮ ಸಾರುವ ಕೆಲಸವು ಒತ್ತಿಹೇಳುತ್ತದೆ. (ಮತ್ತಾ. 6:9, 10) ಯೆಹೋವನೊಬ್ಬನೇ ನಮ್ಮನ್ನು ಅನಾರೋಗ್ಯ ಮತ್ತು ಮರಣದಿಂದ ರಕ್ಷಿಸಲು ಶಕ್ತನೆಂಬ ಮಹಿಮೆಯನ್ನು ಅದು ಆತನಿಗೆ ತರುತ್ತದೆ. (ಯೆಶಾ. 25:8; 33:24) ನಾವಾತನ ಹೆಸರಿನಿಂದ ಕರೆಯಲ್ಪಡುವುದರಿಂದ, ನಮ್ಮ ಸುನಡತೆ ಮತ್ತು ಹುರುಪನ್ನು ಅವಲೋಕಿಸುವ ಇತರರು ಆತನನ್ನು ಮಹಿಮೆಪಡಿಸಲು ಪ್ರೇರಿಸಲ್ಪಡಬಹುದು. (1 ಪೇತ್ರ 2:12) ಪರಮಾಧಿಕಾರಿ ಕರ್ತನಾದ ಯೆಹೋವನ ನಾಮವನ್ನು ಲೋಕದಾದ್ಯಂತ ಪ್ರಸಿದ್ಧಪಡಿಸುವುದು ಅದೆಷ್ಟು ಸಂತೃಪ್ತಿಕರ ಕೆಲಸವಾಗಿರುತ್ತದೆ!—ಕೀರ್ತ. 83:18.

3. ರಾಜ್ಯ ಸಂದೇಶಕ್ಕೆ ಒಳ್ಳೆಯ ಪ್ರತಿಕ್ರಿಯೆ ತೋರಿಸುವವರಿಗೆ ಯಾವ ಆಶೀರ್ವಾದಗಳು ಲಭಿಸುವುವು?

3 ಜೀವರಕ್ಷಣೆ ಮಾಡುತ್ತದೆ: ಯೆಹೋವನು ‘ಯಾವನಾದರೂ ನಾಶವಾಗುವುದನ್ನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುತ್ತಾನೆ.’ (2 ಪೇತ್ರ 3:9) ಆದರೂ ಯೆಹೋವನ ದೃಷ್ಟಿಯಲ್ಲಿ ಯಾವುದು ಒಳ್ಳೇ ನಡತೆ ಯಾವುದು ಕೆಟ್ಟ ನಡತೆ ಎಂದು ಜನರಿಗೆ ಕಲಿಸಲು ಯಾರಾದರೂ ಇಲ್ಲದಿದ್ದರೆ ಅದು ಅವರಿಗೆ ತಿಳಿಯುವುದಾದರೂ ಹೇಗೆ? (ಯೋನ 4:11; ರೋಮ. 10:13-15) ಜನರು ವ್ಯಕ್ತಿಶಃ ಸುವಾರ್ತೆಗೆ ಒಳ್ಳೇ ಪ್ರತಿಕ್ರಿಯೆ ತೋರಿಸಿ ತಮ್ಮ ಹಾನಿಕರ ಪ್ರವೃತ್ತಿಗಳನ್ನು ವರ್ಜಿಸುವಾಗ ಅವರ ಜೀವನದ ಗುಣಮಟ್ಟವು ಸುಧಾರಿಸುತ್ತದೆ. (ಮೀಕ 4:1-4) ಅದಲ್ಲದೆ ನಿತ್ಯಜೀವದ ಹರ್ಷಕರ ಪ್ರತೀಕ್ಷೆಯು ಅವರಿಗೆ ಲಭಿಸುತ್ತದೆ. ನಮ್ಮ ಕ್ರಿಯಾಸಕ್ತ ಸಾರುವಿಕೆ ಮತ್ತು ಬೋಧಿಸುವಿಕೆಯು ನಮ್ಮನ್ನು ರಕ್ಷಿಸುತ್ತದೆ ಮಾತ್ರವಲ್ಲ ನಮಗೆ ಕಿವಿಗೊಡುವವರನ್ನೂ ರಕ್ಷಿಸುತ್ತದೆ. (1 ತಿಮೊ. 4:16) ಈ ಪರಮ ಪ್ರಧಾನ ಕೆಲಸದಲ್ಲಿ ಎಂಥ ಗೌರವಪೂರ್ಣ ಪಾತ್ರವು ನಮಗಿದೆ!

4. ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಕ್ರಿಯಾಸಕ್ತರಾಗಿ ಒಳಗೂಡಬೇಕು ಏಕೆ?

4 ಶೀಘ್ರದಲ್ಲೇ ಮಹಾ ಸಂಕಟವು ಅನೀತಿ ತುಂಬಿದ ಈ ಲೋಕಕ್ಕೆ ಹಠಾತ್ತನೆ ಅಂತ್ಯವನ್ನು ತರುವುದು. ಆದರೆ ಯೆಹೋವನನ್ನು ಆರಾಧಿಸುವವರೆಲ್ಲರು ಪಾರಾಗಿ ಉಳಿಯುವರು. ಆದ್ದರಿಂದ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವು ಇಂದು ನಡೆಯುತ್ತಿರುವ ಅತಿ ತುರ್ತಿನ, ಮಹತ್ವದ ಹಾಗೂ ಪ್ರಯೋಜನಕರ ಕೆಲಸ. ನಾವದಕ್ಕೆ ನಮ್ಮ ಜೀವನದಲ್ಲಿ ಪರಮ ಪ್ರಧಾನ ಸ್ಥಾನವನ್ನು ಕೊಡೋಣ!—ಮತ್ತಾ. 6:33.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ