ಬೈಬಲ್ ಅಧ್ಯಯನ ಹೇಗೆ ನಡೆಸುತ್ತೇವೆಂದು ತೋರಿಸಿಕೊಟ್ಟಿದ್ದೀರೋ?
ನಾವು ಮನೆಯವರಿಗೆ ಬೈಬಲ್ ಅಧ್ಯಯನದ ಏರ್ಪಾಡಿನ ಬಗ್ಗೆ ತಿಳಿಸುವಾಗ, ಕೆಲವರು ತಮಗೆ ಆಸಕ್ತಿಯಿಲ್ಲವೆಂದೋ ಚರ್ಚಿನಲ್ಲಿ ನಡೆಯುತ್ತಿರುವ ಬೈಬಲ್ ಕ್ಲಾಸ್ಗೆ ತಾವು ಸೇರಿದ್ದೇವೆಂದೋ ಹೇಳುತ್ತಾರೆ. ನಾವು ಬೈಬಲ್ ಅಧ್ಯಯನ ಮಾಡುವ ರೀತಿ ಬೇರೆ ಗುಂಪುಗಳಿಗಿಂತ ಭಿನ್ನವಾಗಿದೆಯೆಂದು ಅವರಿಗೆ ತಿಳಿದಿಲ್ಲ. ಆದಕಾರಣ ಬೈಬಲ್ ಅಧ್ಯಯನದಿಂದ ಪಡೆಯಬಲ್ಲ ಜ್ಞಾನ ಮತ್ತು ಆನಂದದ ಬಗ್ಗೆ ಅವರು ಅರಿಯರು. ಹೀಗಿರುವುದರಿಂದ, ಅವರೊಂದಿಗೆ ಬೈಬಲ್ ಅಧ್ಯಯನದ ಏರ್ಪಾಡಿನ ಬಗ್ಗೆ ಬರೀ ಹೇಳುವುದರ ಬದಲು ಅದನ್ನು ಹೇಗೆ ಮಾಡುತ್ತೇವೆಂದು ಒಂದೆರಡು ನಿಮಿಷಗಳಲ್ಲಿ ತೋರಿಸಿಕೊಡಬಹುದಲ್ಲವೇ? ಇದನ್ನು ಹೀಗೆ ದೃಷ್ಟಾಂತಿಸಬಹುದು: ನೀವು ಒಳ್ಳೇ ಅಡುಗೆಮಾಡುತ್ತೀರೆಂದೂ ಒಂದು ದಿನ ರುಚಿಕರ ಊಟವನ್ನು ತಯಾರಿಸಿ ಕೊಡುವಿರೆಂದೂ ಹೇಳದೆ, ಆವಾಗಲೇ ಅವರಿಗೆ ನಿಮ್ಮ ಅಡುಗೆಯ ರುಚಿ ತೋರಿಸಿ. ಬೈಬಲ್ ಅಧ್ಯಯನವನ್ನು ಕೆಲವೇ ನಿಮಿಷಗಳಲ್ಲಿ ಹೇಗೆ ಪ್ರತ್ಯಕ್ಷಾಭಿನಯಿಸಬಹುದೆಂದು ಇಲ್ಲಿ ಸೂಚಿಸಲಾಗಿದೆ. ಇದು 2006ರ ಜನವರಿ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 6ರಲ್ಲಿರುವ ಸಲಹೆಯ ಮೇಲೆ ಆಧರಿತ:
ವ್ಯಕ್ತಿಗೆ ಸಂದೇಶದಲ್ಲಿ ನಿಜವಾಗಿಯೂ ಆಸಕ್ತಿ ಇದೆಯೆಂದು ಖಚಿತಪಡಿಸಿದ ಬಳಿಕ ನೀವು ಹೀಗನ್ನಬಹುದು: “ಈ ಮಾತುಗಳು ನಿಜವಾಗುವ ದಿನ ಬರಬಹುದೆಂದು ನೆನಸುತ್ತೀರಾ? [ಯೆಶಾಯ 33:24 ಓದಿ, ಪ್ರತಿಕ್ರಿಯೆಗೆ ಅವಕಾಶಕೊಡಿ.] ಇದರ ಬಗ್ಗೆ ನಿಮಗೊಂದು ಆಸಕ್ತಿಕರ ವಿಷಯ ತೋರಿಸಲಿಚ್ಛಿಸುತ್ತೇನೆ.” ಮನೆಯವನಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕ ಕೊಡಿ. ಅವನಿಗೆ ಪುಟ 36ರಲ್ಲಿರುವ ಪ್ಯಾರ 22ನ್ನು ನೋಡುವಂತೆ ಹೇಳಿ. ಪುಟದ ಕೆಳಭಾಗದಲ್ಲಿರುವ ಪ್ರಶ್ನೆ ಓದಿರಿ. ನಂತರ ನೀವು ಪ್ಯಾರವನ್ನು ಗಟ್ಟಿಯಾಗಿ ಓದುತ್ತಿರುವಾಗ ಆ ಪ್ರಶ್ನೆಗೆ ಉತ್ತರ ಹುಡುಕುವಂತೆ ಮನೆಯವನಿಗೆ ಹೇಳಿ. ಬಳಿಕ ಆ ಪ್ರಶ್ನೆಯನ್ನು ಪುನಃ ಓದಿ, ಮನೆಯವನು ಹೇಳುವ ಉತ್ತರಕ್ಕೆ ಗಮನಕೊಡಿ. ಪ್ಯಾರದಲ್ಲಿರುವ ಇನ್ನೊಂದು ವಚನ ಓದಿ. ಒಂದು ಪ್ರಶ್ನೆಯನ್ನು ಕೇಳಿ ಅದನ್ನು ಮುಂದಿನ ಭೇಟಿಯಲ್ಲಿ ಉತ್ತರಿಸುವಿರೆಂದು ಹೇಳಿ. ಮುಂದಿನ ಭೇಟಿಗಾಗಿ ಪಕ್ಕಾ ಏರ್ಪಾಡುಗಳನ್ನು ಮಾಡಿ. ನೋಡಿ, ಒಂದು ಬೈಬಲ್ ಅಧ್ಯಯನ ಆರಂಭವಾಯಿತು!