ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿಲ್-ಜೂನ್
ಈ ಪತ್ರಿಕೆಯನ್ನು ಯೇಸುವಿನ ಬಗ್ಗೆ ಗೌರವವಿರುವವರಿಗೆ ಮಾತ್ರ ನೀಡಿ. “ಮಕ್ಕಳಿಗೆ ಹೆಚ್ಚಾಗಿ ಹೆತ್ತವರ ಮಾತುಕೇಳುವುದು ಕಷ್ಟಕರವಾಗುತ್ತದೆ. ಈ ವಿಷಯದಲ್ಲಿ ಯೇಸುವಿನ ಮಾದರಿ ಅವರಿಗೆ ಸಹಾಯ ಮಾಡಬಲ್ಲದೆಂದು ನೆನಸುತ್ತೀರೊ? [ಉತ್ತರಿಸಲು ಅವಕಾಶಕೊಡಿ, ನಂತರ ಲೂಕ 2:51 ಓದಿ.] ಭೂಮಿಯ ಮೇಲಿದ್ದಾಗ ಯೇಸು ಇಟ್ಟ ಮಾದರಿಯಿಂದ ನಾವು ಹೇಗೆ ವಿಧೇಯತೆಯನ್ನು ಕಲಿಯಬಹುದೆಂದು ಈ ಲೇಖನ ವಿವರಿಸುತ್ತದೆ.” ಪುಟ 30ರಲ್ಲಿರುವ ಲೇಖನ ತೋರಿಸಿ.
ಎಚ್ಚರ! ಏಪ್ರಿಲ್-ಜೂನ್
“ತಂತ್ರಜ್ಞಾನದ ಸಾಧನಗಳು ಮಕ್ಕಳಿಗೆ ಪೂರಕವೋ ಮಾರಕವೋ? ನೀವೇನು ನೆನಸುತ್ತೀರಿ? ಅವುಗಳನ್ನು ವಿವೇಕಯುತವಾಗಿ ಬಳಸುವ ಆಯ್ಕೆಯನ್ನು ಯಾವಾಗಲೂ ಸ್ವತಃ ಮಕ್ಕಳೇ ಮಾಡಬಲ್ಲರೆಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಮ್ಮ ಸೃಷ್ಟಿಕರ್ತನು ಈ ವಿಷಯದ ಬಗ್ಗೆ ಏನು ಹೇಳುತ್ತಾನೆ ಎಂಬುದನ್ನು ನಿಮಗೆ ಓದಿಹೇಳಲಾ? [ಮನೆಯವನಿಗೆ ಆಸಕ್ತಿಯಿರುವಲ್ಲಿ ಜ್ಞಾನೋಕ್ತಿ 22:15 ಓದಿ.] ಈ ವಿಷಯದಲ್ಲಿ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದೆಂದು ಈ ಲೇಖನ ವಿವರಿಸುತ್ತದೆ.” ಪುಟ 14ರಲ್ಲಿರುವ ಲೇಖನ ತೋರಿಸಿ.
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಲೋಕದಲ್ಲಿರುವ ಎಲ್ಲ ಕಷ್ಟನೋವುಗಳು ಒಂದು ದಿನ ಕೊನೆಗೊಳ್ಳಬಹುದು ಎಂದು ನಿಮಗೆ ಅನಿಸುತ್ತದಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ವಿಷಯದಲ್ಲಿ ನಮಗೆ ನಿರೀಕ್ಷೆಯನ್ನು ಕೊಡುವ ದೇವರ ವಾಗ್ದಾನವನ್ನು ನಾನು ನಿಮಗೆ ತೋರಿಸಬಹುದಾ? [ಮನೆಯವನಿಗೆ ಆಸಕ್ತಿಯಿದೆ ಎಂದು ನಿಮಗೆ ಗೊತ್ತಾಗುವಲ್ಲಿ ಪುಟ 7ರ ಚೌಕದಲ್ಲಿ ಕೊಡಲಾಗಿರುವ ವಚನಗಳಲ್ಲಿ ಒಂದನ್ನು ಓದಿ.] ಎಲ್ಲ ಕಷ್ಟನೋವುಗಳನ್ನು ದೇವರು ಯಾವಾಗ ಹಾಗೂ ಹೇಗೆ ಕೊನೆಗೊಳಿಸುವನು ಎಂಬುದನ್ನು ತಿಳಿದುಕೊಳ್ಳಲು ಈ ಪತ್ರಿಕೆ ನಮಗೆ ಸಹಾಯಮಾಡುತ್ತದೆ.”
ಎಚ್ಚರ! ಜುಲೈ-ಸೆಪ್ಟೆಂಬರ್
“ವಿವಾಹ ವಿಚ್ಛೇದನ ಇಂದು ಸರ್ವೇಸಾಮಾನ್ಯ. ಈ ನಿರ್ಣಯ ಮಾಡುವ ಮುಂಚೆ ಹೆಚ್ಚಿನ ದಂಪತಿಗಳು ಅದಕ್ಕೆ ಸಂಬಂಧಪಟ್ಟ ಎಲ್ಲ ಅಂಶಗಳನ್ನು ಪರಿಗಣಿಸುತ್ತಾರೆಂದು ನಿಮಗನಿಸುತ್ತದಾ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಒಂದು ವಚನ ಓದಬಹುದೊ ಎಂದು ಕೇಳಿ, ಅವರು ಒಪ್ಪುವಲ್ಲಿ ಜ್ಞಾನೋಕ್ತಿ 14:15 ಓದಿ.] ವಿಚ್ಛೇದನದ ಬಗ್ಗೆ ಯೋಚಿಸುತ್ತಿರುವ ದಂಪತಿಗಳು ಗಂಭೀರವಾಗಿ ಪರಿಗಣಿಸಬೇಕಾದ ನಾಲ್ಕು ವಿಷಯಗಳನ್ನು ಈ ಪತ್ರಿಕೆ ತಿಳಿಸುತ್ತದೆ.”