ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಹಿಂದಿನ ಕಾಲದ ಜನರು ಪಾಪದ ಕುರಿತು ಮಾತಾಡುತ್ತಿದ್ದರು. ಆದರೆ ಇಂದು ಹೆಚ್ಚಿನವರು ಇದರ ಕುರಿತು ಮಾತನ್ನೇ ಎತ್ತುವುದಿಲ್ಲ. ಪಾಪ ಎಂಬುದು ಓಬೀರಾಯನ ಕಾಲದ ಕಲ್ಪನೆ ಎಂದು ನೆನಸುತ್ತೀರೋ ಅಥವಾ ಅದು ನಾವೆಲ್ಲರೂ ಚಿಂತಿಸಬೇಕಾದ ವಿಷಯವೊ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಮನೆಯವರು ಒಪ್ಪುವಲ್ಲಿ ರೋಮನ್ನರಿಗೆ 5:12 ಓದಿ.] ಪಾಪದ ಕುರಿತು ಬೈಬಲ್ ಏನು ಹೇಳುತ್ತದೆಂದು ಈ ಪತ್ರಿಕೆ ತಿಳಿಸುತ್ತದೆ.”
ಎಚ್ಚರ! ಅಕ್ಟೋಬರ್-ಡಿಸೆಂಬರ್
“ಇಂದಿನ ಆರ್ಥಿಕತೆ ಜನರನ್ನು ಆತಂಕದಲ್ಲಿ ಮುಳುಗಿಸಿದೆ. ಕೆಲಸ ಕಳೆದುಕೊಂಡವರಿಗೆ ಜೀವನ ನಡೆಸುವುದು ಹೇಗೆಂಬ ಒತ್ತಡವಿದೆ. ಕೆಲಸದಲ್ಲಿರುವವರಿಗೆ ಕೆಲಸ ಕಳೆದುಕೊಳ್ಳುವ ಭಯವಿದೆ. ನಿಮಗೆ ಪ್ರಾಚೀನ ಕಾಲದ ಒಂದು ಚಿಕ್ಕ ಸಲಹೆಯನ್ನು ಓದಿ ಹೇಳಲಾ? [ಮನೆಯವರು ಒಪ್ಪುವಲ್ಲಿ ಮತ್ತಾಯ 6:34 ಓದಿ.] ನಮ್ಮಲ್ಲಿರುವ ಹಣವನ್ನು ಹೇಗೆ ಉಪಯೋಗಿಸುವುದು ಮತ್ತು ನಮ್ಮ ಭಾವನೆಗಳನ್ನು ಹೇಗೆ ಸ್ವಾಧೀನದಲ್ಲಿಡುವುದು ಎಂಬುದರ ಕುರಿತ ಪ್ರಾಯೋಗಿಕ ಸಲಹೆಗಳು ಈ ಪತ್ರಿಕೆಯಲ್ಲಿವೆ.”