2011ರ ಕ್ಯಾಲೆಂಡರ್ನ ವೈಶಿಷ್ಟ್ಯ—ಕುಟುಂಬ ಆರಾಧನೆ
2011—ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್ನಲ್ಲಿರುವ ಮುಖ್ಯ ವಿಷಯ ಕುಟುಂಬ ಆರಾಧನೆ ಆಗಿದೆ. ಈ ಕ್ಯಾಲೆಂಡರ್ನಲ್ಲಿ ಆಧುನಿಕ ದಿನದ ಕುಟುಂಬಗಳ ಹಾಗೂ ಹಿಂದೆ ಬೈಬಲ್ ಕಾಲದಲ್ಲಿದ್ದ ಕುಟುಂಬಗಳ ಚಿತ್ರಗಳನ್ನು ಕೊಡಲಾಗಿದೆ. ಅಲ್ಲದೆ ದಂಪತಿಗಳು, ಅವಿವಾಹಿತ ವ್ಯಕ್ತಿಗಳು ದೇವರ ವಾಕ್ಯದ ಅಧ್ಯಯನ ಮಾಡುತ್ತಿರುವ ಚಿತ್ರಗಳೂ ಇವೆ.
ಕ್ಯಾಲೆಂಡರ್ನಲ್ಲಿ ತೋರಿಸಲಾಗಿರುವ ಬೈಬಲ್ ಕಾಲದ ವ್ಯಕ್ತಿಗಳು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಟ್ಟವರು. ಹಾಗಾಗಿ ಅವರು ತಮಗೆದುರಾದ ಅಸಾಮಾನ್ಯ ಸವಾಲುಗಳನ್ನು ನಿಭಾಯಿಸಲು ಶಕ್ತರಾಗಿದ್ದರು. (ಕೀರ್ತ. 1:2, 3) ನಮ್ಮ ಕುಟುಂಬ ದೊಡ್ಡದ್ದಾಗಿರಲಿ ಚಿಕ್ಕದ್ದಾಗಿರಲಿ, ಕುಟುಂಬ ಸದಸ್ಯರೆಲ್ಲರೂ ಕ್ರೈಸ್ತ ಸಭೆಯ ಸದಸ್ಯರಾಗಿರಲಿ ಇಲ್ಲದಿರಲಿ ನಮಗೆ ಕುಟುಂಬ ಆರಾಧನೆ ಮಹತ್ವದ್ದು ಎಂಬದನ್ನು ಕ್ಯಾಲೆಂಡರ್ನ ಒಂದೊಂದು ದೃಶ್ಯವೂ ನಮ್ಮ ಜ್ಞಾಪಕಕ್ಕೆ ತರುವುದು. ಕುಟುಂಬ ಆರಾಧನೆಗಾಗಿ ನೀವು ಬದಿಗಿಟ್ಟಿರುವ ದಿನವನ್ನು ಬರೆದಿಡಲು ಕ್ಯಾಲೆಂಡರ್ನಲ್ಲಿ ಖಾಲಿ ಜಾಗ ಕೊಡಲಾಗಿದೆ. ಅದನ್ನು ತುಂಬಿಸಿದ್ದೀರೊ?