ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
ಇಸವಿ 2010, ಡಿಸೆಂಬರ್ 27ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2010ರ ನವೆಂಬರ್ 1ರಿಂದ ಡಿಸೆಂಬರ್ 27ರ ತನಕದ ವಾರಗಳ ನೇಮಕಗಳಲ್ಲಿ ಆವರಿಸಲಾದ ವಿಷಯಗಳ ಮೇಲೆ ಇವು ಆಧಾರಿತ. 20 ನಿಮಿಷಗಳ ಈ ಪುನರವಲೋಕನವನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
1. ಒಂದನೇ ಪೂರ್ವಕಾಲವೃತ್ತಾಂತ 16:34ರಲ್ಲಿ ಲೇವ್ಯ ಸಂಗೀತಕಾರರು ಸ್ತುತಿಯ ಅಭಿವ್ಯಕ್ತಿಗಳನ್ನು ಬಳಸಿರುವ ಸಂಗತಿಯಿಂದ ನಾವೇನು ಕಲಿಯಬಲ್ಲೆವು? [w02 1/15 ಪು. 11 ಪ್ಯಾರ. 6-7]
2. ಒಂದನೇ ಪೂರ್ವಕಾಲವೃತ್ತಾಂತ 22:5, 9ಕ್ಕನುಸಾರ ದಾವೀದನಿಂದ ನಾವು ಯಾವ ಪಾಠ ಕಲಿಯಬಲ್ಲೆವು? [w05 10/1 ಪು. 11 ಪ್ಯಾರ. 7]
3. ತನ್ನ ಮಗನಾದ ಸೊಲೊಮೋನನಿಗೆ ದೇವರ ಬಗ್ಗೆ ಯಾವ ಭಾವನೆಯಿರಬೇಕೆಂದು ದಾವೀದನು ಬಯಸಿದನು? (1 ಪೂರ್ವ. 28:9) [w08 10/15 ಪು. 6 ಪ್ಯಾರ. 18]
4. ಸಮುದ್ರವೆನಿಸಿಕೊಳ್ಳುವ ಎರಕದ ಪಾತ್ರೆಯ ತಳದ ನಿರ್ಮಾಣದಲ್ಲಿ ಹೋರಿಗಳ ಪ್ರತಿರೂಪಗಳನ್ನು ಉಪಯೋಗಿಸಿದ್ದು ಏಕೆ ಸೂಕ್ತವಾಗಿತ್ತು? (2 ಪೂರ್ವ. 4:2-4) [w05 12/1 ಪು. 19 ಪ್ಯಾರ. 3; w98 6/15 ಪು. 16 ಪ್ಯಾರ. 17]
5. ಒಡಂಬಡಿಕೆಯ ಮಂಜೂಷದಲ್ಲಿ ಇದ್ದದ್ದು ಎರಡು ಕಲ್ಲಿನ ಹಲಿಗೆಗಳು ಮಾತ್ರವೊ ಅಥವಾ ಬೇರೆ ವಸ್ತುಗಳೂ ಅದರಲ್ಲಿದ್ದವೊ? (2 ಪೂರ್ವ. 5:10) [w06 1/15 ಪು. 31]
6. ಎರಡನೇ ಪೂರ್ವಕಾಲವೃತ್ತಾಂತ 6:18-21ರಲ್ಲಿ ದಾಖಲಾಗಿರುವ ಸೊಲೊಮೋನನ ಪ್ರಾರ್ಥನೆಯಿಂದ ನಾವೇನು ಕಲಿಯಬಲ್ಲೆವು? [w05 12/1 ಪು. 19 ಪ್ಯಾರ. 8]
7. ಎರಡನೇ ಪೂರ್ವಕಾಲವೃತ್ತಾಂತ 13:5ರಲ್ಲಿರುವ “ಉಪ್ಪಿನ ಒಡಂಬಡಿಕೆ” ಎಂಬ ಅಭಿವ್ಯಕ್ತಿಯ ಅರ್ಥವೇನು? [w05 12/1 ಪು. 20 ಪ್ಯಾರ. 2]
8. ಎರಡನೇ ಪೂರ್ವಕಾಲವೃತ್ತಾಂತ 17:9, 10ರಲ್ಲಿರುವ ತತ್ವವನ್ನು ನಮ್ಮ ಶುಶ್ರೂಷೆಗೆ ಹೇಗೆ ಅನ್ವಯಿಸಬಹುದು? [w09 6/15 ಪು. 12 ಪ್ಯಾರ. 7]
9. ಇಂದು ದೇವಜನರು 2 ಪೂರ್ವಕಾಲವೃತ್ತಾಂತ 20:17ನ್ನು ಹೇಗೆ ಅನ್ವಯಿಸಿಕೊಳ್ಳಬಹುದು? [w03 6/1 ಪು. 21-22 ಪ್ಯಾರ. 14-17]
10. ರಾಜ ಉಜ್ಜೀಯನ ಅಹಂಕಾರದ ಕೃತ್ಯದಿಂದ ನಾವು ಯಾವ ಪಾಠ ಕಲಿಯಬಲ್ಲೆವು? (2 ಪೂರ್ವ. 26:15-21) [w99 12/1 ಪು. 26 ಪ್ಯಾರ. 1-2]