ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನವರಿ-ಮಾರ್ಚ್
“ಇಂದು ಅನೇಕ ಜನರು ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ದಬ್ಬಾಳಿಕೆ, ಅನ್ಯಾಯ ಯಾವತ್ತಾದರೂ ಇಲ್ಲವಾಗುವವೆಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ದೇವರು ಕ್ರಮ ಕೈಗೊಂಡು, ಅನ್ಯಾಯವಾಗಿ ದಬ್ಬಾಳಿಕೆಗೆ ಒಳಗಾದವರಿಗೆ ಸಹಾಯಮಾಡುವುದಾಗಿ ಕೊಟ್ಟಿರುವ ವಚನವನ್ನು ನಿಮಗೆ ತೋರಿಸಲಾ? [ಮನೆಯವನಿಗೆ ಆಸಕ್ತಿಯಿದ್ದರೆ ಕೀರ್ತನೆ 72:12, 14 ಓದಿ.] ಜನರು ಕೆಟ್ಟ ಕೆಲಸಗಳನ್ನು ಮಾಡುವುದೇಕೆ ಮತ್ತು ಇದೆಲ್ಲ ಹೇಗೆ ಕೊನೆಗೊಳ್ಳುವುದೆಂದು ಈ ಪತ್ರಿಕೆ ವಿವರಿಸುತ್ತದೆ.”
ಎಚ್ಚರ! ಜನವರಿ-ಮಾರ್ಚ್
“ಇತರರೊಂದಿಗೆ ಸಂಪರ್ಕವಿಡಲು ಇರುವ ಸೆಲ್ ಫೋನ್, ಈ-ಮೇಲ್, ಚ್ಯಾಟ್ ರೂಮ್ಗಳು ಹಾಗೂ ಇತರ ಆಧುನಿಕ ಮಾಧ್ಯಮಗಳು ಒಂಟಿಭಾವನೆಯನ್ನು ತೆಗೆದುಹಾಕಿವೆಯೊ, ಹೆಚ್ಚಿಸಿವೆಯೋ? ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಒಂಟಿಭಾವನೆಯನ್ನು ನಿಭಾಯಿಸಲು ನೆರವಾಗುವ ಒಂದು ಸಲಹೆಯನ್ನು ನಿಮಗೆ ಓದಿ ತಿಳಿಸಲೋ? [ಮನೆಯವನು ಒಪ್ಪುವಲ್ಲಿ ಅ. ಕಾರ್ಯಗಳು 20:35 ಓದಿ.] ಈ ವಿಷಯದಲ್ಲಿ ಈ ಪತ್ರಿಕೆ ಹೆಚ್ಚಿನ ವ್ಯಾವಹಾರಿಕ ಸಲಹೆಗಳನ್ನು ನೀಡುತ್ತದೆ.” [“ಯುವಜನರ ಪ್ರಶ್ನೆ—ನನ್ನಲ್ಲಿನ ದುಃಖವನ್ನು ಹೇಗೆ ಹೊಡೆದೋಡಿಸಬಲ್ಲೆ?” ಎಂಬ ಲೇಖನಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ.]
ಕಾವಲಿನಬುರುಜು ಏಪ್ರಿಲ್-ಜೂನ್
“ನಮಗಿರುವ ವೈಯಕ್ತಿಕ ವ್ಯಾಕುಲತೆಗಳು, ಕಷ್ಟಗಳ ಬಗ್ಗೆ ನಮ್ಮ ಸೃಷ್ಟಿಕರ್ತನಿಗೆ ಏನಾದರೂ ಚಿಂತೆ ಇದೆಯೊ ಎಂದು ಅನೇಕರು ಯೋಚಿಸುತ್ತಾರೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ಸಂಬಂಧದಲ್ಲಿ ಪವಿತ್ರ ಶಾಸ್ತ್ರಗಳು ಯಾವ ಆಶ್ವಾಸನೆ ಕೊಡುತ್ತವೆಂದು ನಿಮಗೆ ತೋರಿಸಲೋ? [ಮನೆಯವನು ಒಪ್ಪುವಲ್ಲಿ ಕೀರ್ತನೆ 34:18 ಓದಿ.] ನಿಷ್ಪ್ರಯೋಜಕರೆಂಬ ಅನಿಸಿಕೆ, ವಿಪರೀತ ದುಃಖ ಹಾಗೂ ಅತಿಯಾದ ದೋಷಿಭಾವನೆಯಂಥ ನಕಾರಾತ್ಮಕ ಭಾವನೆಗಳನ್ನು ನಾವು ಹೊಡೆದೋಡಿಸಲು ದೇವರು ಹೇಗೆ ಸಹಾಯ ಮಾಡುತ್ತಾನೆಂದು ಪುಟ 19ರಲ್ಲಿರುವ ಲೇಖನವು ಚರ್ಚಿಸುತ್ತದೆ.”
ಎಚ್ಚರ! ಏಪ್ರಿಲ್-ಜೂನ್
“ದೇವರ ಹೆಸರಿನಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ನೋಡಿ, ಲೋಕದಲ್ಲಿ ಧರ್ಮಗಳೇ ಇಲ್ಲದಿರುತ್ತಿದ್ದರೆ ಒಳ್ಳೇದಿರುತ್ತಿತ್ತೆಂದು ಕೆಲವರಿಗೆ ಅನಿಸುತ್ತದೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಾವು ಸಲ್ಲಿಸುವ ಆರಾಧನೆಯಲ್ಲಿ ಯಾವ ಗುಣವು ದೇವರ ಮೆಚ್ಚಿಕೆ ಹಾಗೂ ಜೊತೆ ಮಾನವರಿಗೆ ಸಂತೋಷ ತರುವುದೆಂದು ನಿಮಗೆ ತೋರಿಸಲೋ? [ಯೋಹಾನ 13:34, 35 ಓದಿ.] ಈ ಪತ್ರಿಕೆಯು ಈ ಅಂಶವನ್ನು ಇನ್ನಷ್ಟು ಪರಿಶೀಲಿಸುತ್ತದೆ.”