ಪ್ರಶ್ನಾ ಚೌಕ
◼ ಮನೆಬಾಗಿಲಲ್ಲಿ ನಡೆಸುವ ಬೈಬಲ್ ಅಧ್ಯಯನದಲ್ಲಿ ಪ್ರಾರ್ಥನೆ ಮಾಡಬೇಕೊ?
ಬೈಬಲ್ ಅಧ್ಯಯನವನ್ನು ಆರಂಭಿಸುವಾಗ ಮತ್ತು ಕೊನೆಗೊಳಿಸುವಾಗ ಪ್ರಾರ್ಥನೆ ಮಾಡುವುದರಲ್ಲಿ ಅನೇಕ ಪ್ರಯೋಜನಗಳಿವೆ. ಪ್ರಾರ್ಥನೆಯ ಮೂಲಕ ನಮ್ಮ ಚರ್ಚೆಯ ಮೇಲೆ ಯೆಹೋವನ ಪವಿತ್ರಾತ್ಮಕ್ಕಾಗಿ ಕೋರುತ್ತೇವೆ. (ಲೂಕ 11:13) ಪ್ರಾರ್ಥನೆಯು ವಿದ್ಯಾರ್ಥಿಗೆ ಈ ಬೈಬಲ್ ಅಧ್ಯಯನ ಗಂಭೀರ ವಿಷಯವೆಂದೂ ಮನದಟ್ಟು ಮಾಡಿಸುತ್ತದೆ. ಅಲ್ಲದೆ ಪ್ರಾರ್ಥನೆ ಮಾಡುವುದು ಹೇಗೆಂದು ವಿದ್ಯಾರ್ಥಿಗೂ ತಿಳಿಯುತ್ತದೆ. (ಲೂಕ 6:40) ಆದ್ದರಿಂದ, ಸಾಧ್ಯವಾದಷ್ಟು ಬೇಗನೆ ಪ್ರಾರ್ಥನೆ ಮಾಡಲಾರಂಭಿಸುವುದು ಒಳ್ಳೇದು. ಆದರೆ ಪರಿಸ್ಥಿತಿಗಳು ಭಿನ್ನಭಿನ್ನವಾಗಿರುವುದರಿಂದ, ಮನೆಬಾಗಲಲ್ಲಿ ಪ್ರಾರ್ಥನೆ ಮಾಡಬೇಕೊ ಇಲ್ಲವೊ ಎಂಬದನ್ನು ನಿರ್ಣಯಿಸಲು ಅಧ್ಯಯನ ನಡೆಸುವವನು ವಿವೇಚನೆ ಬಳಸಬೇಕು.
ಪರಿಗಣಿಸತಕ್ಕ ಒಂದು ಪ್ರಮುಖ ಅಂಶವು ಅಧ್ಯಯನವನ್ನು ನಡೆಸಲಾಗುತ್ತಿರುವ ಸುತ್ತಮುತ್ತಲಿನ ಸನ್ನಿವೇಶ ಆಗಿದೆ. ಮನೆಬಾಗಲಲ್ಲಿ ಅಧ್ಯಯನ ನಿಯಮಿತವಾಗಿ ನಡೆಯುತ್ತಿದ್ದು, ಅಲ್ಲಿ ಸ್ವಲ್ಪ ಏಕಾಂತತೆ ಇದ್ದರೆ ಅಧ್ಯಯನದ ಆರಂಭ ಹಾಗೂ ಕೊನೆಯಲ್ಲಿ ಒಂದು ಚಿಕ್ಕ ಪ್ರಾರ್ಥನೆಯನ್ನು ಗಮನಸೆಳೆಯದ ರೀತಿಯಲ್ಲಿ ಮಾಡಬಹುದು. ಆದರೆ ಇದು ಹಾದುಹೋಗುವವರ ಗಮನ ಸೆಳೆಯುವಲ್ಲಿ ಇಲ್ಲವೆ ವಿದ್ಯಾರ್ಥಿಗೆ ಮುಜುಗರವಾಗುತ್ತಿರುವಲ್ಲಿ, ಆ ಅಧ್ಯಯನವನ್ನು ಹೆಚ್ಚು ಏಕಾಂತವಿರುವ ಸ್ಥಳದಲ್ಲಿ ನಡೆಸಲು ಸಾಧ್ಯವಾಗುವ ತನಕ ಕಾಯುವುದು ಒಳ್ಳೇದು. ಅಧ್ಯಯನ ಎಲ್ಲಿಯೇ ನಡೆಯುತ್ತಿರಲಿ, ಪ್ರಾರ್ಥನೆ ಮಾಡುವುದನ್ನು ಯಾವಾಗ ಆರಂಭಿಸಬೇಕೆಂದು ತೀರ್ಮಾನಿಸಲು ವಿವೇಚನೆಯನ್ನು ಬಳಸತಕ್ಕದ್ದು.—2005ರ ಮಾರ್ಚ್ ನಮ್ಮ ರಾಜ್ಯ ಸೇವೆಯ ಪುಟ 8ನ್ನು ನೋಡಿ.