ಮಾದರಿ ನಿರೂಪಣೆಗಳು
ನವೆಂಬರ್ ತಿಂಗಳ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸಲಿಕ್ಕಾಗಿ
“ನಮ್ಮೆಲ್ಲರ ಕುಟುಂಬ ಇಲ್ಲವೆ ಮಿತ್ರಬಳಗದಲ್ಲಿ ಯಾರಾದರೂ ಸತ್ತಿರುತ್ತಾರೆ. ಅವರನ್ನು ನಾವು ಪುನಃ ಎಂದಾದರೂ ನೋಡುವೆವೊ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಪವಿತ್ರ ಶಾಸ್ತ್ರಗಳಲ್ಲಿರುವ ಒಂದು ಸಾಂತ್ವನಕರ ಮಾತನ್ನು ನಿಮಗೆ ತೋರಿಸಲೊ?” ಮನೆಯವನು ಒಪ್ಪಿದರೆ, ಕಾವಲಿನಬುರುಜುವಿನ ಅಕ್ಟೋಬರ್-ಡಿಸೆಂಬರ್ ಸಂಚಿಕೆಯ ಪುಟ 20ರಲ್ಲಿ ಪ್ರಥಮ ಉಪಶೀರ್ಷಿಕೆಯಡಿ ಇರುವ ವಿಷಯವನ್ನು ಮತ್ತು ಒಂದು ವಚನವನ್ನು ಓದಿ, ಚರ್ಚಿಸಿ. ಪತ್ರಿಕೆಗಳನ್ನು ನೀಡಿ. ಮುಂದಿನ ಪ್ರಶ್ನೆಯ ಉತ್ತರ ಚರ್ಚಿಸಲು ಪುನರ್ಭೇಟಿಗಾಗಿ ಏರ್ಪಾಡು ಮಾಡಿ.
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಮಕ್ಕಳನ್ನು ಪಡೆಯುವುದು ಜೀವನದ ಅತ್ಯಾನಂದಗಳಲ್ಲಿ ಒಂದು. ಆದರೆ ಮಗು ಹುಟ್ಟಿದಾಗ ಬರುವ ಸವಾಲುಗಳನ್ನು ಹೆತ್ತವರು ಹೇಗೆ ನಿಭಾಯಿಸಬಲ್ಲರು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಸಹಾಯಮಾಡಬಲ್ಲ ಶಾಸ್ತ್ರಾಧಾರಿತ ಸೂತ್ರವೊಂದನ್ನು ನಿಮಗೆ ತೋರಿಸಲೊ? [ಮನೆಯವನಿಗೆ ಆಸಕ್ತಿಯಿದ್ದರೆ 1 ಕೊರಿಂಥ 13:4, 5 ಓದಿ.] ವಿವಾಹ ಜೀವನದಲ್ಲಿ ಬದಲಾವಣೆ ತರುವ ಈ ಸನ್ನಿವೇಶವನ್ನು ಪ್ರಾಯೋಗಿಕವಾಗಿ ನಿಭಾಯಿಸುವ ವಿಧಗಳನ್ನು ಈ ಲೇಖನ ಚರ್ಚಿಸುತ್ತದೆ.” “ಶಿಶುವಿನ ಆಗಮನ ದಂಪತಿಯ ಮೇಲೆ ಬೀರುವ ಪರಿಣಾಮ” ಎಂಬ ಲೇಖನ ತೋರಿಸಿ.
ಎಚ್ಚರ! ಅಕ್ಟೋಬರ್-ಡಿಸೆಂಬರ್
“ತರುಣರಿಗೆ ಹೆಚ್ಚಾಗಿ ತಮ್ಮ ಪಾತ್ರದ ಬಗ್ಗೆ ಗೊಂದಲ, ಅನಿಶ್ಚಯತೆ ಇರುತ್ತದೆ. ಅವರಿಗೆ ನಾವು ಹೇಗೆ ಸಹಾಯ ಮಾಡಬಹುದೆಂದು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಒಂದು ಪ್ರಾಮುಖ್ಯ ಸೂತ್ರವಿರುವ ವಚನವನ್ನು ನಿಮಗೆ ತೋರಿಸಲೊ? [ಮನೆಯವನು ಒಪ್ಪಿದರೆ 1 ಕೊರಿಂಥ 9:26 ಓದಿ.] ಈ ವಚನ ತೋರಿಸುವಂತೆ ನಮ್ಮ ಯುವ ಜನರು ತಮ್ಮ ಶಕ್ತಿಸಾಮರ್ಥ್ಯಗಳನ್ನು ಸರಿಯಾದ ವಿಷಯಗಳಿಗಾಗಿ ವ್ಯಯಿಸಬೇಕೆಂದು ಇಚ್ಛಿಸುತ್ತೇವೆ. ಇದನ್ನು ಮಾಡುವುದಕ್ಕಾಗಿ ಅವರು ತಮ್ಮನ್ನೇ ಅರ್ಥಮಾಡಿಕೊಳ್ಳುವುದು ಕೀಲಿಕೈ. ನಮ್ಮ ಯುವ ಜನರಿಗೆ ನೆರವಾಗುವ ಕೆಲವೊಂದು ಉತ್ತಮ ಸಲಹೆಗಳು ಈ ಲೇಖನದಲ್ಲಿವೆ.” ಪುಟ 26ರ ಲೇಖನವನ್ನು ತೋರಿಸಿ.