ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/12 ಪು. 4
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2012 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2014 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2012 ನಮ್ಮ ರಾಜ್ಯದ ಸೇವೆ
km 6/12 ಪು. 4

ಮಾದರಿ ನಿರೂಪಣೆಗಳು

ಜುಲೈ ತಿಂಗಳ ಮೊದಲ ಶನಿವಾರ ಬೈಬಲ್‌ ಅಧ್ಯಯನ ಆರಂಭಿಸಲು

“ಇಂದಿರುವ ಸಮಸ್ಯೆಗಳು ಎಲ್ಲ ಕುಟುಂಬಗಳ ಮೇಲೆ ಒತ್ತಡ ಹೇರುತ್ತಿವೆ. ನಮ್ಮ ನಮ್ಮ ಕುಟುಂಬ ಸದಾ ಸಂತೋಷವಾಗಿರಲು ಬೇಕಾದ ವಿಶ್ವಾಸಾರ್ಹ ಮಾರ್ಗದರ್ಶನ ಎಲ್ಲಿಂದ ಸಿಗಬಹುದೆಂದು ನೆನಸುತ್ತೀರಿ?” ಉತ್ತರಕ್ಕಾಗಿ ಕಾಯಿರಿ. ಮನೆಯವರಿಗೆ ಆಸಕ್ತಿಯಿದ್ದರೆ ಜುಲೈ-ಸೆಪ್ಟೆಂಬರ್‌ ಕಾವಲಿನಬುರುಜುವನ್ನು ಅವರ ಕೈಗೆ ಕೊಟ್ಟು ಪುಟ 14 ಮತ್ತು 15ರಲ್ಲಿರುವ ಯಾವುದಾದರೊಂದು ಪ್ರಶ್ನೆಯ ಕೆಳಗಿರುವ ವಿಷಯಭಾಗ ಓದಿ, ಚರ್ಚಿಸಿ. ಕೊಡಲಾದ ವಚನಗಳಲ್ಲಿ ಒಂದನ್ನಾದರೂ ಓದಿ. ಪತ್ರಿಕೆಗಳನ್ನು ನೀಡಿರಿ. ಇನ್ನೊಂದು ಪ್ರಶ್ನೆ ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.

ಕಾವಲಿನಬುರುಜು ಜುಲೈ-ಸೆಪ್ಟೆಂಬರ್‌

“ಇತ್ತೀಚಿನ ವರ್ಷಗಳಲ್ಲಿ ಲೋಕಾಂತ್ಯದ ಬಗ್ಗೆ ಎಲ್ಲೆಲ್ಲೂ ಕೇಳಿಬರುತ್ತಿದೆ. ಲೋಕಾಂತ್ಯವನ್ನು ತಡೆಯಲು ಮನುಷ್ಯರು ಏನಾದರೂ ಮಾಡಬಲ್ಲರು ಅಂತ ನೀವು ನೆನಸುತ್ತೀರಾ? [ಉತ್ತರಕ್ಕಾಗಿ ಕಾಯಿರಿ.] ಕೆಲವರು ಲೋಕಾಂತ್ಯವನ್ನು ‘ಅರ್ಮಗೆದ್ದೋನ್‌’ ಎಂದು ಕರೆಯುತ್ತಾರೆ. ಈ ಪದ ಎಲ್ಲಿಂದ ಬಂತೆಂದು ನಿಮಗೆ ತೋರಿಸಬಹುದಾ? [ಮನೆಯವರು ಒಪ್ಪಿದರೆ ಪ್ರಕಟನೆ 16:16 ಓದಿ. ಪತ್ರಿಕೆಯ ಮುಖಪುಟ ತೋರಿಸಿ.] ಈ ಪತ್ರಿಕೆಯು ಲೋಕಾಂತ್ಯ ಇಲ್ಲವೇ ಅರ್ಮಗೆದ್ದೋನ್‌ ನಿಜವಾಗಿ ಏನು, ಯಾವಾಗ ಬರುವುದು ಎಂಬದರ ಬಗ್ಗೆ ಬೈಬಲಿನ ವಿವರಣೆಯನ್ನು ಕೊಡುತ್ತದೆ.”

ಎಚ್ಚರ! ಜುಲೈ-ಸೆಪ್ಟೆಂಬರ್‌

“ಇಂಟರ್‌ನೆಟ್‌ ಮೂಲಕ ಜನರನ್ನು ಸಂಪರ್ಕಿಸುವುದೆಂದರೆ ಇವತ್ತು ಅನೇಕರಿಗೆ ತುಂಬ ಇಷ್ಟ. ಇದರಿಂದ ಅಪಾಯಗಳಿವೆಯಾ? ನಿಮ್ಮ ಅಭಿಪ್ರಾಯ? [ಉತ್ತರಕ್ಕಾಗಿ ಕಾಯಿರಿ.] ಸುರಕ್ಷಿತ ಆನ್‌ಲೈನ್‌ ಬಳಕೆಗೆ ಸಹಾಯಕಾರಿಯಾದ ಕೆಲವು ಸೂತ್ರಗಳು ಬೈಬಲಿನಲ್ಲಿವೆ. ಇಂಥ ಒಂದು ಸೂತ್ರವನ್ನು ನಾನು ತೋರಿಸಬಹುದಾ? [ಮನೆಯವರಿಗೆ ಆಸಕ್ತಿಯಿದ್ದರೆ ಪುಟ 29-32 ತೋರಿಸಿ, ಅಲ್ಲಿಂದ ಯಾವುದಾದರೊಂದು ಪ್ರಶ್ನೆಯನ್ನೂ ಕೊಡಲಾದ ವಚನವನ್ನೂ ಚರ್ಚಿಸಿ.] ಆನ್‌ಲೈನ್‌ ಸಂವಹನದಿಂದಾಗುವ ಅಪಾಯಗಳನ್ನು ತಿಳಿದುಕೊಳ್ಳಲು ಮತ್ತು ಅವುಗಳಿಂದ ತಪ್ಪಿಸಿಕೊಳ್ಳಲು ಈ ಪತ್ರಿಕೆ ನಿಮಗೆ ಸಹಾಯಮಾಡುತ್ತದೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ