ಸಾರಲು ಹನ್ನೆರಡು ಕಾರಣಗಳು
ನಾವು ಸುವಾರ್ತೆ ಸಾರುವುದೂ ಬೋಧಿಸುವುದೂ ಏಕೆ? ಸಹೃದಯದ ಜನರನ್ನು ಜೀವದ ಮಾರ್ಗಕ್ಕೆ ನಡೆಸಲಿಕ್ಕಾಗಿಯೇ? (ಮತ್ತಾ. 7:14) ಮುಂದೆ ಕೊಡಲಾಗಿರುವ ಪಟ್ಟಿಯಲ್ಲಿ ಈ ಕಾರಣವನ್ನು ಮೊದಲು ಕೊಡಲಾಗಿದೆ. ಆದರೆ ಇದೇ ನಮ್ಮ ಮುಖ್ಯ ಕಾರಣವಲ್ಲ. ಸಾರುವ, ಬೋಧಿಸುವ ಕೆಲಸದಲ್ಲಿ ಪಾಲ್ಗೊಳ್ಳಲು ನಮಗಿರುವ ಈ ಮುಂದಿನ 12 ಕಾರಣಗಳಲ್ಲಿ ಯಾವುದು ಅತಿ ಮುಖ್ಯವೆಂದು ನೆನಸುತ್ತೀರಿ?
1. ಜನರ ಜೀವ ಉಳಿಸಲು ಸಹಾಯಕ. —ಯೋಹಾ. 17:3.
2. ದುಷ್ಟರಿಗೆ ಎಚ್ಚರಿಕೆ ಕೊಡುತ್ತದೆ.—ಯೆಹೆ. 3:18, 19.
3. ಬೈಬಲಿನ ಪ್ರವಾದನೆಯನ್ನು ನೆರವೇರಿಸುತ್ತದೆ. —ಮತ್ತಾ. 24:14.
4. ದೇವರ ನೀತಿಯ ಅಭಿವ್ಯಕ್ತಿ ಆಗಿದೆ. ದುಷ್ಟರಿಗೆ ಪಶ್ಚಾತ್ತಾಪಪಡಲು ಅವಕಾಶಕೊಡದೆ ನಾಶಮಾಡಿದನೆಂದು ಯಾರೂ ಆರೋಪ ಹಾಕಲಾರರು.—ಅ. ಕಾ. 17:30, 31; 1 ತಿಮೊ. 2:3, 4.
5. ಯೇಸುವಿನ ರಕ್ತದಿಂದ ಖರೀದಿಸಲಾಗಿರುವ ಜನರಿಗೆ ಆಧ್ಯಾತ್ಮಿಕ ನೆರವನ್ನು ಕೊಡುವ ನಮ್ಮ ಋಣ ತೀರಿಸಲು ಸಾಧ್ಯವಾಗುತ್ತದೆ.—ರೋಮ. 1:14, 15.
6. ನಮ್ಮ ಮೇಲೆ ರಕ್ತಾಪರಾಧ ಬರದಂತೆ ತಡೆಯುತ್ತದೆ.—ಅ. ಕಾ. 20:26, 27.
7. ನಮ್ಮ ಸ್ವಂತ ರಕ್ಷಣೆಗಾಗಿ ಇದು ಅತ್ಯಗತ್ಯ. —ಯೆಹೆ. 3:19; ರೋಮ. 10:9, 10.
8. ನೆರೆಯವರ ಮೇಲೆ ನಮಗಿರುವ ಪ್ರೀತಿಯ ಸಂಕೇತ. —ಮತ್ತಾ. 22:39.
9. ಯೆಹೋವನಿಗೆ, ಆತನ ಪುತ್ರನಿಗೆ ವಿಧೇಯರಾಗುತ್ತಿದ್ದೇವೆ.—ಮತ್ತಾ. 28:19, 20.
10. ನಮ್ಮ ಆರಾಧನೆಯ ಭಾಗ.—ಇಬ್ರಿ. 13:15.
11. ದೇವರ ಮೇಲೆ ನಮಗಿರುವ ಪ್ರೀತಿಯ ಸಂಕೇತ. —1 ಯೋಹಾ. 5:3.
12. ಯೆಹೋವನ ನಾಮದ ಪವಿತ್ರೀಕರಣಕ್ಕೆ ಸಹಾಯವಾಗುತ್ತದೆ.—ಯೆಶಾ. 43:10-12; ಮತ್ತಾ. 6:9.
ಸಾರುವ, ಬೋಧಿಸುವ ಕೆಲಸದಲ್ಲಿ ನಾವು ಪಾಲ್ಗೊಳ್ಳುವ ಕಾರಣಗಳು ಬರೀ ಇಷ್ಟೇ ಅಲ್ಲ, ಇನ್ನೂ ಇವೆ. ಉದಾಹರಣೆಗೆ, ಸಾರುವ ಕೆಲಸ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ದೇವರ ಜೊತೆಕೆಲಸಗಾರರಾಗುವ ಸದವಕಾಶವನ್ನೂ ಕೊಡುತ್ತದೆ. (1 ಕೊರಿಂ. 3:9) ಆದರೆ ಅತೀ ಮುಖ್ಯ ಕಾರಣ 12ನೇ ಕಾರಣವಾಗಿದೆ. ಜನರು ನಮ್ಮ ಸಂದೇಶಕ್ಕೆ ಕಿವಿಗೊಡಲಿ ಕೊಡದಿರಲಿ, ನಮ್ಮ ಕೆಲಸವು ದೇವರ ನಾಮದ ಪವಿತ್ರೀಕರಣಕ್ಕೆ ಸಹಾಯಮಾಡುತ್ತದೆ ಮತ್ತು ತನ್ನನ್ನು ದೂರುವವನಿಗೆ ಯೆಹೋವನು ಉತ್ತರಕೊಡುವಂತೆ ಸಾಧ್ಯಗೊಳಿಸುತ್ತದೆ. (ಜ್ಞಾನೋ. 27:11) ‘ಎಡೆಬಿಡದೆ ಬೋಧಿಸುತ್ತಾ ಸುವಾರ್ತೆ ಸಾರುತ್ತಾ’ ಇರಲು ನಿಶ್ಚಯವಾಗಿಯೂ ನಮಗೆ ಉತ್ತಮ ಕಾರಣಗಳಿವೆ.—ಅ. ಕಾ. 5:42.