ಮಾದರಿ ನಿರೂಪಣೆಗಳು
ಜನವರಿಯ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸಲು
“ನೀವೇನು ನೆನಸುತ್ತೀರಾ ಸೃಷ್ಟಿಕರ್ತ ತನಗೇ ಅಂತ ಒಂದು ಹೆಸರಿಟ್ಕೊಂಡಿದ್ದಾನಾ? [ಉತ್ತರಕ್ಕಾಗಿ ಕಾಯಿರಿ.] ಈ ಪ್ರಶ್ನೆಗೆ ಸಂಬಂಧಪಟ್ಟ ಕೆಲವೊಂದು ವಿಷಯಗಳನ್ನು ನಿಮಗೆ ತೋರಿಸ್ಲಾ?” ಮನೆಯವರಿಗೆ ಇಷ್ಟ ಇರುವಲ್ಲಿ ಜನವರಿ-ಮಾರ್ಚ್ ಕಾವಲಿನಬುರುಜು ಪತ್ರಿಕೆಯ ಪುಟ 16ರಲ್ಲಿರುವ ಲೇಖನ ತೋರಿಸಿ ಮೊದಲ ಶೀರ್ಷಿಕೆ ಕೆಳಗಿರುವ ಮಾಹಿತಿಯನ್ನು ಚರ್ಚಿಸಿ. ಒಂದು ವಚನವನ್ನಾದರೂ ಓದಿ. ಪತ್ರಿಕೆಯನ್ನು ಮನೆಯವರಿಗೆ ಕೊಟ್ಟು ಮುಂದಿನ ಪ್ರಶ್ನೆಯನ್ನು ಚರ್ಚಿಸಲು ಪುನರ್ಭೇಟಿಗಾಗಿ ಏರ್ಪಾಡು ಮಾಡಿ.
ಕಾವಲಿನಬುರುಜು ಜನವರಿ-ಮಾರ್ಚ್
“ಜನರೆಲ್ಲ ಲೋಕ ಅಂತ್ಯ ಆಗುತ್ತೆ ಅಂತ ತುಂಬ ಮಾತಾಡ್ಕೊಳ್ತಿದ್ರು. ನೀವೇನು ಹೇಳ್ತಿರಾ ಲೋಕಾಂತ್ಯ ಅನ್ನೋ ವಿಷ್ಯ ಭಯಪಡುವಂಥದಾ? [ಉತ್ತರಕ್ಕಾಗಿ ಕಾಯಿರಿ.] ಇದರ ಬಗ್ಗೆ ಒಂದು ಗ್ರಂಥ ಏನು ಹೇಳುತ್ತೆ ಅಂತ ತೋರಿಸ್ಲಾ? [ಮನೆಯವರು ಒಪ್ಪುವಲ್ಲಿ 1ಯೋಹಾನ 2:17 ಓದಿ.] ಲೋಕಾಂತ್ಯಕ್ಕೆ ಸಂಬಂಧಿಸಿದ ನಾಲ್ಕು ಪ್ರಶ್ನೆಗಳಿಗೆ ಈ ಪತ್ರಿಕೆಯಲ್ಲಿ ಉತ್ತರವಿದೆ.”