ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/12 ಪು. 6
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2012 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
  • ಪತ್ರಿಕೆಗಳ ಕುರಿತು ಏನು ಹೇಳಬೇಕು?
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2012 ನಮ್ಮ ರಾಜ್ಯದ ಸೇವೆ
km 3/12 ಪು. 6

ಮಾದರಿ ನಿರೂಪಣೆಗಳು

ಏಪ್ರಿಲ್‌ನ ಮೊದಲ ಶನಿವಾರ ಬೈಬಲ್‌ ಅಧ್ಯಯನ ಆರಂಭಿಸಲು

“ಸಂತೋಷವಾಗಿ ಬದುಕಬೇಕು, ನಮ್ಮ ಜೀವನ ಅರ್ಥಪೂರ್ಣವಾಗಿರಬೇಕು ಅಂತ ನಾವೆಲ್ಲರೂ ಬಯಸುತ್ತೇವೆ. ದೇವರ ಮೇಲೆ ಭಯಭಕ್ತಿಯಿದ್ದರೆ ಜೀವನ ಸಂತೋಷವಾಗಿರುತ್ತೆ. ನೀವೇನು ಹೇಳ್ತಿರಾ? [ಉತ್ತರಕ್ಕಾಗಿ ಕಾಯಿರಿ. ಮನೆಯವರು ಒಪ್ಪಿದರೆ ಮತ್ತಾಯ 5:3 ಓದಿ.] ನಾವು ಯಾವ ರೀತಿ ಭಕ್ತಿ ಸಲ್ಲಿಸಿದರೆ ದೇವರಿಗೆ ಇಷ್ಟವಾಗುತ್ತೆ ಅಂತ ಈ ಪತ್ರಿಕೆ ಹೇಳುತ್ತೆ.” ಮನೆಯವರಿಗೆ ಆಸಕ್ತಿಯಿದ್ದರೆ ಕಾವಲಿನಬುರುಜುವಿನ ಏಪ್ರಿಲ್‌-ಜೂನ್‌ ಸಂಚಿಕೆಯನ್ನು ಅವರ ಕೈಗೆ ಕೊಡಿ. ಪುಟ 16ರ ಮೊದಲ ಪ್ರಶ್ನೆ ಚರ್ಚಿಸಿ. ಅಲ್ಲಿ ಕೊಡಲಾದ ಒಂದು ವಚನವನ್ನಾದರೂ ಓದಿ. ನಂತರ ಅವರಿಗೆ ಇಷ್ಟವಿದ್ದರೆ ಪತ್ರಿಕೆಗಳನ್ನು ನೀಡಿ, ಮುಂದಿನ ಪ್ರಶ್ನೆ ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.

ಕಾವಲಿನಬುರುಜು ಏಪ್ರಿಲ್‌-ಜೂನ್‌

“ಲೈಂಗಿಕತೆಯ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವುದರ ಬಗ್ಗೆ ಜನರ ಅಭಿಪ್ರಾಯ ಬದಲಾಗುತ್ತಾ ಇದೆ. ದೇವರದ್ದೇ ಅಂತ ಒಂದು ಮಟ್ಟ ಇದೆ ಅನ್ನೋದೂ ನಮಗೆಲ್ಲ ಗೊತ್ತಿದೆ. ಆದರೆ ಅದು ತುಂಬ ಸ್ಟ್ರಿಕ್ಟ್‌, ಈ ಕಾಲಕ್ಕೆ ಸಲ್ಲ ಎಂದು ನೆನಸುತ್ತೀರಾ? [ಉತ್ತರಕ್ಕಾಗಿ ಕಾಯಿರಿ.] ಸರಿಯಾದ ನೈತಿಕ ಮಟ್ಟ ಯಾವುದು ಅಂತ ಪವಿತ್ರ ಗ್ರಂಥ ಹೇಳುತ್ತೆ. ಆ ಮಟ್ಟಗಳು ಯಾವ ಮೂಲದಿಂದ ಬಂದಿವೆಯೆಂದು ತೋರಿಸುವ ಒಂದು ವಚನ ಇದೆ. ಅದನ್ನು ನಿಮಗೆ ಓದಿ ಹೇಳಲಾ? [ಮನೆಯವರಿಗೆ ಆಸಕ್ತಿಯಿದ್ದರೆ 2 ತಿಮೊಥೆಯ 3:16 ಓದಿ. ಪುಟ 20ರಲ್ಲಿರುವ ಲೇಖನ ತೋರಿಸಿ.] ಸಾಮಾನ್ಯವಾಗಿ ಲೈಂಗಿಕತೆಯ ಬಗ್ಗೆ ಜನ ಕೇಳುವ 10 ಪ್ರಶ್ನೆಗಳಿಗೆ ಬೈಬಲ್‌ ಕೊಡುವ ಉತ್ತರವನ್ನು ಈ ಲೇಖನದಲ್ಲಿ ಕೊಡಲಾಗಿದೆ. ಈ ಮಟ್ಟಗಳನ್ನು ಪಾಲಿಸುವುದರಿಂದ ಏನು ಪ್ರಯೋಜನ ಎಂದು ಸಹ ಕಂಡುಕೊಳ್ಳಬಹುದು.”

ಎಚ್ಚರ! ಏಪ್ರಿಲ್‌-ಜೂನ್‌

“ಇವತ್ತು ವ್ಯಾಪಾರ-ವ್ಯವಹಾರಗಳಲ್ಲಿ ಲಂಚ, ಭ್ರಷ್ಟಾಚಾರ ಸರ್ವಸಾಧಾರಣ ಆಗಿಬಿಟ್ಟಿದೆ. ವ್ಯಾಪಾರದಲ್ಲಿ ಮೇಲೆ ಬರಬೇಕೆಂದರೆ ಸ್ವಲ್ಪ ಆಚೀಚೆ ಮಾಡಲೇಬೇಕು ಅನ್ನುತ್ತಾರೆ ಕೆಲವರು. ನಿಮ್ಮ ಅಭಿಪ್ರಾಯವೇನು? [ಉತ್ತರಕ್ಕಾಗಿ ಕಾಯಿರಿ.] ಒಳ್ಳೇ ನುಡಿಮುತ್ತೊಂದನ್ನು ನಿಮಗೆ ತೋರಿಸಲಾ? [ಮನೆಯವರು ಒಪ್ಪಿದರೆ ಜ್ಞಾನೋಕ್ತಿ 20:17 ಓದಿ.] ಪ್ರಾಮಾಣಿಕತೆ ತೋರಿಸುವುದು ಪ್ರಾಯೋಗಿಕ ಎಂಬದನ್ನು ಈ ಪತ್ರಿಕೆ ವಿವರಿಸುತ್ತೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ