ಸುವಾರ್ತೆ ಸಾರಲು ನಮ್ಮನ್ನು ಯಾವುದು ಪ್ರೇರೇಪಿಸುತ್ತೆ?
1. ಸುವಾರ್ತೆ ಸಾರಲು ನಮ್ಮನ್ನು ಯಾವುದು ಪ್ರೇರೇಪಿಸುತ್ತೆ?
1 ನಾವು ಬದುಕಿನಲ್ಲಿ ಮಾಡಬಹುದಾದ ಸಾರ್ಥಕ ಕೆಲಸವೆಂದರೆ ದೇವರ ರಾಜ್ಯದ ಸುವಾರ್ತೆ ಸಾರುವ ಕೆಲಸ. ಈ ಒಂದು ಕೆಲಸ ಮಾಡುವ ಮೂಲಕ ಎರಡು ಅತೀ ದೊಡ್ಡ ಆಜ್ಞೆಗಳನ್ನು ಅಂದರೆ ಯೆಹೋವ ದೇವರನ್ನು, ನೆರೆಯವರನ್ನು ಪ್ರೀತಿಸಬೇಕು ಅನ್ನೋ ಆಜ್ಞೆಗಳನ್ನು ಪಾಲಿಸುತ್ತೀವಿ. (ಮಾರ್ಕ 12:29-31) ಈ ಪ್ರೀತಿಯೇ ಹುರುಪಿನಿಂದ ಸೇವೆ ಮಾಡಲು ನಮ್ಮನ್ನು ಪ್ರೇರೇಪಿಸುವ ಅತೀ ಬಲಾಢ್ಯ ಶಕ್ತಿ.—1 ಯೋಹಾ. 5:3.
2. ನಾವು ಸುವಾರ್ತೆ ಸಾರುವ ಮೂಲಕ ದೇವರ ಮೇಲೆ ಪ್ರೀತಿಯಿದೆ ಅಂತ ತೋರಿಸುತ್ತೀವಿ. ಹೇಗೆ?
2 ಯೆಹೋವ ದೇವರ ಮೇಲಿನ ಪ್ರೀತಿ: ನಮ್ಮ ಅತ್ಯಾಪ್ತ ಮಿತ್ರನಾದ ಯೆಹೋವ ದೇವರ ಪರವಾಗಿ ಮಾತಾಡುವಂತೆ ಪ್ರೀತಿ ನಮ್ಮನ್ನು ಪ್ರೇರಿಸುತ್ತೆ. ಸೈತಾನ ಸುಮಾರು 6,000 ವರ್ಷಗಳಿಂದ ದೇವರ ಮೇಲೆ ಅಪವಾದ ಹೊರಿಸುತ್ತಿದ್ದಾನೆ. (2 ಕೊರಿಂ. 4:3, 4) ದೇವರು ಕೆಟ್ಟ ಜನರಿಗೆ ನರಕದಲ್ಲಿ ಚಿತ್ರಹಿಂಸೆ ಕೊಡುತ್ತಾನೆ, ಅವನಿಗೆ ಮನುಜರ ಬಗ್ಗೆ ಸ್ವಲ್ಪನೂ ಚಿಂತೆಯಿಲ್ಲ, ಅವನೊಬ್ಬ ತ್ರಿಯೇಕ ದೇವರು ಅವನನ್ನು ಅರ್ಥ ಮಾಡಿಕೊಳ್ಳೋಕೆ ಆಗಲ್ಲ ಅಂತೆಲ್ಲ ಜನರನ್ನು ನಂಬಿಸಿದ್ದಾನೆ. ಕೆಲವರಂತೂ ದೇವರೇ ಇಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಜನರಿಗೆ ನಮ್ಮ ದೇವರ ಬಗ್ಗೆ ಸತ್ಯ ವಿಷಯ ತಿಳಿಸಬೇಕಂತ ನಮ್ಮ ಮನಸ್ಸು ಹಾತೊರೆಯುತ್ತಿದೆ. ನಾವು ಶ್ರದ್ಧೆಯಿಂದ ಸೇವೆ ಮಾಡುವ ಮೂಲಕ ದೇವರಿಗೆ ಖುಷಿ ತರುತ್ತೀವಿ. ಸೈತಾನನ ನೆಮ್ಮದಿ ಹಾಳು ಮಾಡುತ್ತೀವಿ.—ಜ್ಞಾನೋ. 27:11; ಇಬ್ರಿ. 13:15, 16.
3. ನಾವು ಸುವಾರ್ತೆ ಸಾರುವಾಗ ನೆರೆಯವರ ಮೇಲೆ ಪ್ರೀತಿಯಿದೆ ಅಂತ ತೋರಿಸ್ತೀವಿ. ಹೇಗೆ?
3 ನೆರೆಯವರ ಮೇಲಿನ ಪ್ರೀತಿ: ನಾವು ಒಬ್ಬ ವ್ಯಕ್ತಿಗೆ ಸುವಾರ್ತೆ ಸಾರಿದಾಗ ಅವರ ಮೇಲೆ ಪ್ರೀತಿಯಿದೆ ಅಂತ ತೋರಿಸ್ತೀವಿ. ಈಗಿರೋ ಪರಿಸ್ಥಿತಿಯಲ್ಲಿ ಜನರಿಗೆ ಸುವಾರ್ತೆಯ ಅಗತ್ಯವಿದೆ. ಬಹುತೇಕ ಜನರು ಯೋನ ಪ್ರವಾದಿಯ ಕಾಲದಲ್ಲಿದ್ದ ಜನರಂತೆ “ಎಡಗೈ ಬಲಗೈ ತಿಳಿಯದ” ಜನರಾಗಿದ್ದಾರೆ. (ಯೋನ 4:11) ಸಂತಸದ ಸಂತೃಪ್ತಿಕರ ಬಾಳ್ವೆ ನಡೆಸುವುದು ಹೇಗೆಂದು ನಾವು ಸುವಾರ್ತೆ ಸಾರೋದರಿಂದ ಜನರು ತಿಳಿದುಕೊಳ್ಳುತ್ತಾರೆ. (ಯೆಶಾ. 48:17-19) ಸುವಾರ್ತೆ ಅವರಲ್ಲಿ ಪ್ರತೀಕ್ಷೆ ತುಂಬಿಸುತ್ತೆ. (ರೋಮ. 15:4) ಅವರು ಸುವಾರ್ತೆ ಕೇಳಿಸಿಕೊಂಡು ಅದರಂತೆ ನಡೆದರೆ ರಕ್ಷಣೆ ಹೊಂದುತ್ತಾರೆ.—ರೋಮ. 10:13, 14.
4. ಯೆಹೋವ ದೇವರು ಯಾವುದನ್ನು ಮರೆಯಲ್ಲ?
4 ಮಕ್ಕಳು ತಮ್ಮ ಹೆತ್ತವರ ಮೇಲಿರುವ ಪ್ರೀತಿಯನ್ನು ಒಂದು ನಿರ್ದಿಷ್ಟ ದಿನ ಸಮಯ ಗಳಿಗೆಗೆ ಮಾತ್ರ ಸೀಮಿತಗೊಳಿಸಲ್ಲ. ಬದಲಾಗಿ ಯಾವಾಗಲೂ ತೋರಿಸುತ್ತಾರೆ. ಅದೇ ರೀತಿ ದೇವರ ಮೇಲೆ ಹಾಗೂ ನೆರೆಯವರ ಮೇಲೆ ನಮಗೆ ಆಳವಾದ ಪ್ರೀತಿ ಇರೋದಾದರೆ ಸುವಾರ್ತೆ ಸಾರಲು ಅವಕಾಶಕ್ಕಾಗಿ ಹುಡುಕುತ್ತೇವೆಯೇ ಹೊರತು ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಸಾರೋದಿಲ್ಲ. ಎಲ್ಲ ಸಮಯದಲ್ಲೂ ಸಾರುತ್ತೀವಿ. (ಅ. ಕಾ. 5:42) ನಾವು ತೋರಿಸುವ ಇಂಥ ಪ್ರೀತಿಯನ್ನು ಯೆಹೋವ ದೇವರು ಎಂದೂ ಮರೆಯಲ್ಲ.—ಇಬ್ರಿ. 6:10.