ಕಲಿಕೆಯಲ್ಲಿ ವಿಡಿಯೊಗಳನ್ನು ಬಳಸಿ
ದೃಶ್ಯ ಸಾಧನ ಬಳಸಿ ಒಂದು ವಿಷಯವನ್ನು ವಿವರಿಸುವಾಗ ಬೇಗನೆ ಅರ್ಥವಾಗುತ್ತದೆ. ಹಾಗಾಗಿ ಯೆಹೋವ ದೇವರು ಅಬ್ರಹಾಮ ಮತ್ತು ಯೆರೆಮೀಯರಿಗೆ ಪ್ರಾಮುಖ್ಯ ಮಾಹಿತಿಯನ್ನು ತಿಳಿಸಿದ್ದು ಮಾತುಗಳ ಮೂಲಕ ಮಾತ್ರವಲ್ಲ ಕೆಲವು ದೃಶ್ಯ ಸಾಧನಗಳನ್ನು ತೋರಿಸಿ ಕೂಡ. (ಆದಿ. 15:5; ಯೆರೆ. 18:1-6) ನಾವು ಸಹ ವಿಡಿಯೊಗಳಂಥ ದೃಶ್ಯ ಸಾಧನಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಬೈಬಲ್ ಸತ್ಯವನ್ನು ಅದನ್ನು ಕಲಿಯುವುದರಿಂದ ಸಿಗುವ ಪ್ರಯೋಜನಗಳನ್ನು ಅರ್ಥಮಾಡಿಸಬಹುದು. ಯಾವ ವಿಡಿಯೊ ಯಾವಾಗ ತೋರಿಸಬಹುದು ಅಂತ ಕೆಳಗೆ ಕೊಡಲಾಗಿದೆ. ಇದು ಬರೀ ಸಲಹೆ ಅಷ್ಟೇ. ಇವನ್ನು ಹೀಗೆಯೇ ಪಾಲಿಸಬೇಕು ಅಂತ ಏನೂ ಇಲ್ಲ ಏಕೆಂದರೆ ಎಲ್ಲ ವಿದ್ಯಾರ್ಥಿಗಳು ಒಂದೇ ರೀತಿ ಇರಲ್ಲ.
ಬೈಬಲ್ ಬೋಧಿಸುತ್ತದೆ ಪುಸ್ತಕ
◻ ಅಧ್ಯಾಯ 1: ಪ್ಯಾರ 17ರ ನಂತರ ದ ವಂಡರ್ಸ್ ಆಫ್ ಕ್ರಿಯೇಷನ್ ರಿವೀಲ್ ಗಾಡ್ಸ್ ಗ್ಲೋರಿ ವಿಡಿಯೊ ನೋಡಿ
◻ ಅಧ್ಯಾಯ 2: ಕೊನೆಯಲ್ಲಿ ಬೈಬಲ್—ಮ್ಯಾನ್ಕೈಂಡ್ಸ್ ಓಲ್ಡೆಸ್ಟ್ ಮಾಡರ್ನ್ ಬುಕ್ ವಿಡಿಯೊ ನೋಡಿ
◻ ಅಧ್ಯಾಯ 9: ಪ್ಯಾರ 14ರ ನಂತರ ಜೆಹೋವಾಸ್ ವಿಟ್ನೆಸಸ್—ಆರ್ಗನೈಸ್ಡ್ ಟು ಶೇರ್ ದ ಗುಡ್ ನ್ಯೂಸ್ ವಿಡಿಯೊ ನೋಡಿ
◻ ಅಧ್ಯಾಯ 14: ಕೊನೆಯಲ್ಲಿ ದ ಬೈಬಲ್—ಇಟ್ಸ್ ಪವರ್ ಇನ್ ಯುವರ್ ಲೈಫ್ ವಿಡಿಯೊ ನೋಡಿ
◻ ಅಧ್ಯಾಯ 15: ಪ್ಯಾರ 10ರ ನಂತರ ಲೋಕವ್ಯಾಪಕ ಸಹೋದರತ್ವ ವಿಡಿಯೊ ನೋಡಿ
“ದೇವರ ಪ್ರೀತಿ” ಪುಸ್ತಕ
◻ ಅಧ್ಯಾಯ 3: ಪ್ಯಾರ 15ರ ನಂತರ ಯಂಗ್ ಪೀಪಲ್ ಆಸ್ಕ್—ಹೌ ಕ್ಯಾನ್ ಐ ಮೇಕ್ ರಿಯಲ್ ಫ್ರೆಂಡ್ಸ್? ವಿಡಿಯೊ ನೋಡಿ
◻ ಅಧ್ಯಾಯ 4: ಕೊನೆಯಲ್ಲಿ ರೆಸ್ಪೆಕ್ಟ್ ಜೆಹೋವಾಸ್ ಅತಾರಿಟಿ ವಿಡಿಯೊ ನೋಡಿ
◻ ಅಧ್ಯಾಯ 7: ಪ್ಯಾರ 12ರ ನಂತರ ನೋ ಬ್ಲಡ್—ಮೆಡಿಸಿನ್ ಮೀಟ್ಸ್ ದ ಚಾಲೆಂಜ್ ವಿಡಿಯೊ ನೋಡಿ
◻ ಅಧ್ಯಾಯ 9: ಪ್ಯಾರ 6ರ ನಂತರ ವಾರ್ನಿಂಗ್ ಎಗ್ಸಾಂಪಲ್ಸ್ ಫಾರ್ ಅವರ್ ಡೇ ವಿಡಿಯೊ ನೋಡಿ
◻ ಅಧ್ಯಾಯ 17: ಕೊನೆಯಲ್ಲಿ ‘ವಾಕ್ ಬೈ ಫೇತ್, ನಾಟ್ ಬೈ ಸೈಟ್’ ವಿಡಿಯೊ ನೋಡಿ
ಈ ಪಟ್ಟಿಯಲ್ಲಿ ಇಲ್ಲದಿರುವ ಬೇರೆ ವಿಡಿಯೊಗಳು ಕೂಡ ನಿಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಪ್ರಯೋಜನ ತರಬಹುದು. ಉದಾ: ಸತ್ಯ ಕಲಿಯೋ ಕಾರಣ ಬೇರೆಯವರಿಂದ ವಿರೋಧ ಎದುರಿಸುತ್ತಿರುವ ವಿದ್ಯಾರ್ಥಿಗೆ ಫೇತ್ಫುಲ್ ಅಂಡರ್ ಟ್ರಯಲ್ಸ್—ಜೆಹೋವಾಸ್ ವಿಟ್ನೆಸಸ್ ಇನ್ ದ ಸೋವಿಯಟ್ ಯೂನಿಯನ್ ಅಥವಾ ಜೆಹೋವಾಸ್ ವಿಟ್ನೆಸಸ್ ಸ್ಟ್ಯಾಂಡ್ ಫರ್ಮ್ ಅಗೈನ್ಸ್ಟ್ ನಾಜಿ ಅಸಾಲ್ಟ್ ಅನ್ನೋ ವಿಡಿಯೊಗಳನ್ನು ತೋರಿಸಬಹುದು. ಯುವಜನರಿಗೆ ಪರ್ಸ್ಯೂ ಗೋಲ್ಸ್ ದ್ಯಾಟ್ ಆನರ್ ಗಾಡ್ ಮತ್ತು ಯಂಗ್ ಪೀಪಲ್ ಆಸ್ಕ್—ವಾಟ್ ವಿಲ್ ಐ ಡು ವಿತ್ ಮೈ ಲೈಫ್? ವಿಡಿಯೊಗಳನ್ನು ತೋರಿಸಬಹುದು. ಯಾವಾಗ ವಿಡಿಯೊ ನೋಡಬೇಕು ಅಂತ ಬೈಬಲ್ ಬೋಧಿಸುತ್ತದೆ ಮತ್ತು “ದೇವರ ಪ್ರೀತಿ” ಪುಸ್ತಕಗಳಲ್ಲಿ ಗುರುತಿಸಿಟ್ಟುಕೊಳ್ಳಿ. ನೀವು ಮತ್ತು ಬೈಬಲ್ ವಿದ್ಯಾರ್ಥಿ ಇಬ್ಬರೂ ಒಟ್ಟಿಗೆ ಕೂತು ನೋಡಬಹುದು ಅಥವಾ ವಿದ್ಯಾರ್ಥಿಯೊಬ್ಬರೇ ಕೂಡ ನೋಡಬುಹುದು. ಹೊಸ ವಿಡಿಯೊಗಳು ಬಿಡುಗಡೆಯಾಗುತ್ತಿದ್ದಂತೆ ಸತ್ಯವನ್ನು ವಿದ್ಯಾರ್ಥಿಯ ಹೃದಯಕ್ಕೆ ನಾಟಿಸಲು ಅವನ್ನು ಹೇಗೆ ಬಳಸಬಹುದೆಂದು ಯೋಚಿಸಿ.—ಲೂಕ 24:32.