“ನೀವು ನನ್ನ ಪತ್ರಿಕೆ ತಗೊಳಿ ನಾನು ನಿಮ್ಮದು ತಗೊಳ್ತಿನಿ”
ಕೆಲವು ಮನೆಯವರು ಈ ರೀತಿ ನಮ್ಮನ್ನು ಕೇಳುತ್ತಾರೆ. ತಪ್ಪು ವಿಷಯಗಳನ್ನು ತಿಳಿಸುವಂಥ ಪುಸ್ತಕಗಳ ಜತೆ ನಮ್ಮ ಬೈಬಲ್ ಕಲಿಕೆಗೆ ಪೂರಕವಾಗುವ ಸಾಧನಗಳನ್ನು ನಾವೆಂದೂ ಬದಲಾಯಿಸಿಕೊಳ್ಳುವುದಿಲ್ಲ. ಹಾಗಾಗಿ ಯಾರಾದರೊಬ್ಬರು ಇಂಥ ಪ್ರಸ್ತಾಪವನ್ನಿಟ್ಟರೆ ಚಾಣಾಕ್ಷತನದಿಂದ ಹೇಗೆ ಉತ್ತರ ಕೊಡುವುದು? (ರೋಮ. 1:25) ಹೀಗೆ ಹೇಳಬಹುದು: “ನೀವು ಕೇಳಿದ್ದಕ್ಕೆ ತುಂಬ ಧನ್ಯವಾದ. ಈ ಪುಸ್ತಕದಲ್ಲಿ ಮಾನವರ ಸಮಸ್ಯೆಗೆ ಪರಿಹಾರ ಏನು ಅಂತ ತಿಳಿಸಿದಿಯಾ? [ಉತ್ತರಕ್ಕಾಗಿ ಕಾಯಿರಿ. ‘ಇದರಿಂದಲೇ ಓದಿ ಉತ್ತರ ತಿಳಿದುಕೊಳ್ಳಿ’ ಅಂತ ಅವರು ಹೇಳಿದರೆ, ನೀವು ಪತ್ರಿಕೆಯನ್ನು ಕೊಡುವಾಗ ಅದರಲ್ಲಿ ಏನಿದೆ ಅಂತ ತಿಳಿಸಿದ್ದನ್ನು ಸೌಜನ್ಯದಿಂದ ಜ್ಞಾಪಕ ಹುಟ್ಟಿಸಿ. ನಂತರ ಮತ್ತಾಯ 6:9, 10 ಓದಿ ಅಥವಾ ನೀವೇ ಹೇಳಿ.] ದೇವರ ಆಡಳಿತ ಭೂಮಿಯಲ್ಲೂ ಬರಲಿ ಎಂದು ಪ್ರಾರ್ಥಿಸಲು ಯೇಸು ನಮ್ಮನ್ನು ಉತ್ತೇಜಿಸಿದ್ದಾನೆ. ಆ ಆಡಳಿತ ಮಾತ್ರ ಭೂಮಿಯಲ್ಲಿರುವ ಎಲ್ಲಾ ತೊಂದರೆಗಳಿಗೆ ಶಾಶ್ವತ ಪರಿಹಾರ ತರಲು ಸಾಧ್ಯ. ಹಾಗಾಗಿ ಆ ವಿಷಯಗಳನ್ನು ತಿಳಿಸೋ ಪತ್ರಿಕೆಗಳನ್ನು ಮಾತ್ರ ನಾನು ಓದೋದು. ನಿಮಗೆ ಇಷ್ಟ ಇರುವುದಾದರೆ ದೇವರ ಆಡಳಿತ ಪೂರೈಸುವ ಕೆಲವು ವಿಷಯಗಳನ್ನು ಬೈಬಲ್ನಿಂದ ತೋರಿಸಲಾ?”