ಪ್ರಶ್ನಾ ಚೌಕ
◼ ಸಹೋದರಿಯೊಬ್ಬರು ಮನೆಬಾಗಿಲಲ್ಲಿ ನಿಂತು ಬೈಬಲ್ ಅಧ್ಯಯನ ನಡೆಸುವಾಗ ದೀಕ್ಷಾಸ್ನಾನವಾಗದ ಪ್ರಚಾರಕನೊಬ್ಬ ಇದ್ದರೆ ಆ ಸಹೋದರಿ ತಲೆಗೆ ಮುಸುಕು ಹಾಕಬೇಕಾ?
ಒಂದುವೇಳೆ ಆ ಬೈಬಲ್ ಅಧ್ಯಯನ ನಿಯಮಿತವಾಗಿ ನಡೆಯುತ್ತಿರುವುದಾದರೆ ಸಹೋದರಿ ತಲೆಗೆ ಮುಸುಕು ಹಾಕಬೇಕು. (1 ಕೊರಿಂ. 11:3-10) 2002ರ ಕಾವಲಿನಬುರುಜು ಜುಲೈ 15, ಪುಟ 27ರಲ್ಲಿ ಹೀಗೆ ಹೇಳಲಾಗಿತ್ತು: ‘ಮೊದಲೇ ನಿರ್ಧರಿಸಿ ನಡೆಸುವ ಅಧ್ಯಯನ ಅದಾಗಿರುವುದರಿಂದ ಅದು ಸಭೆಯ ನಮೂನೆಯಾಗಿದೆ. ಆದುದರಿಂದ, ದೀಕ್ಷಾಸ್ನಾನ ಪಡೆದ ಸಹೋದರನೊಬ್ಬನು ಉಪಸ್ಥಿತನಿರುವಾಗ ಸಹೋದರಿಯೊಬ್ಬಳು ಅಧ್ಯಯನ ನಡೆಸುತ್ತಿರುವಲ್ಲಿ ತಲೆಗೆ ಮುಸುಕು ಹಾಕಿಕೊಳ್ಳಬೇಕು.” ಅಧ್ಯಯನ ಮನೆಯಲ್ಲಿ ಮಾಡಲಿ, ಮನೆಬಾಗಿಲಲ್ಲಿ ಮಾಡಲಿ ಅಥವಾ ಇನ್ನೆಲ್ಲೇ ಮಾಡಲಿ ಸಹೋದರಿ ಮುಸುಕು ಹಾಕಬೇಕು.
ಆದರೆ ಮನೆಬಾಗಿಲಲ್ಲಿ ನಿಂತು ಮಾಡುವ ಬೈಬಲ್ ಅಧ್ಯಯನ ಇನ್ನೂ ಶುರುವಾಗದೇ ಇದ್ದಲ್ಲಿ ಸಹೋದರಿ ಮುಸುಕು ಹಾಕಿಕೊಳ್ಳುವ ಅವಶ್ಯಕತೆ ಇಲ್ಲ. ಇದು ಪುನರ್ಭೇಟಿ ಮಾಡುವಾಗಲೂ ಮತ್ತು ಬೈಬಲ್ ಅಧ್ಯಯನ ಹೇಗೆ ನಡೆಸಲಾಗುತ್ತದೆ ಅಂತ ತೋರಿಸಿಕೊಡುವಾಗಲೂ ಅನ್ವಯಿಸುತ್ತದೆ. ಮನೆಬಾಗಿಲಲ್ಲಿ ನಡೆಸುವ ಅಧ್ಯಯನ ಕೆಲವೇ ದಿನಗಳಲ್ಲಿ ಶುರುವಾಗಲ್ಲ, ಕ್ರಮೇಣವಾಗಿ ಹಲವಾರು ಪುನರ್ಭೇಟಿಗಳಾದ ನಂತರ ಶುರುವಾಗುತ್ತದೆ. ಹಾಗಾಗಿ ಸಹೋದರಿ ಯಾವಾಗ ಮುಸುಕು ಹಾಕಿಕೊಳ್ಳಬೇಕು ಅಂತ ಸನ್ನಿವೇಶಕ್ಕೆ ತಕ್ಕಂತೆ ವಿವೇಚಿಸಿ ನಿರ್ಧರಿಸಬೇಕು.