ಹಳೇ ಪತ್ರಿಕೆಗಳನ್ನು ಸದುಪಯೋಗಿಸಿ
ಹಳೇ ಪತ್ರಿಕೆಗಳನ್ನು ಕೂಡಿಸಿಟ್ಟರೆ ಅಥವಾ ಎಸೆದರೆ ಯಾರಿಗೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ನಾವು ಅವುಗಳನ್ನು ಕ್ಷೇತ್ರದಲ್ಲಿ ವಿತರಿಸಲು ಪ್ರಯತ್ನಿಸಬೇಕು. ಸತ್ಯಕ್ಕಾಗಿ ಒಬ್ಬ ವ್ಯಕ್ತಿಯಲ್ಲಿ ಆಸಕ್ತಿ ಹುಟ್ಟಿಸಲು ಒಂದೇ ಒಂದು ಪತ್ರಿಕೆ ಸಾಕು. ಯೆಹೋವನ ನಾಮದಲ್ಲಿ ಆತನು ಕೋರುವಂತೆ ಅದು ನಡೆಸಬಲ್ಲದು. (ರೋಮ. 10:13, 14) ಹಳೇ ಪತ್ರಿಕೆಗಳನ್ನು ಸದುಪಯೋಗಿಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.
ವಿರಳವಾಗಿ ಕೆಲಸಮಾಡುವ ಸೇವಾಕ್ಷೇತ್ರಗಳಲ್ಲಿ ಸಾರುವಾಗ ಮನೆಯಲ್ಲಿ ಯಾರೂ ಸಿಗದಿದ್ದಲ್ಲಿ ಇತರರಿಗೆ ಕಾಣಿಸದಂತೆ ಒಂದು ಪ್ರತಿಯನ್ನು ಬಿಟ್ಟುಬನ್ನಿ.
ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವಾಗ ಬಸ್ ನಿಲ್ದಾಣ ಅಥವಾ ರೈಲ್ವೇ ಸ್ಟೇಷನ್ಗಳಲ್ಲಿ ಕಾಯುತ್ತಿರುವವರನ್ನು ಸಂಪರ್ಕಿಸಿ, ಅವರಿಗೆ ಓದುವ ಹವ್ಯಾಸವಿದೆಯಾ ಎಂದು ಕೇಳಿ. ನಂತರ ಕೆಲವು ಹಳೇ ಸಂಚಿಕೆಗಳನ್ನು ತೋರಿಸಿ, ಅವರಿಗಿಷ್ಟವಾದದ್ದನ್ನು ಆರಿಸಿಕೊಳ್ಳುವಂತೆ ಹೇಳಿ.
ನಿಮ್ಮ ಸಭೆಯ ಸೇವಾಕ್ಷೇತ್ರದಲ್ಲಿರುವ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳನ್ನು ಸಂದರ್ಶಿಸಿ, ಅಲ್ಲಿನ ವೇಟಿಂಗ್ ಏರಿಯಾದಲ್ಲಿ ಕೆಲವು ಹಳೇ ಪತ್ರಿಕೆಗಳನ್ನು ಬಿಟ್ಟುಬನ್ನಿ. ಸಂಬಂಧಪಟ್ಟ ಅಧಿಕಾರಿ ಇದ್ದರೆ ಮೊದಲು ಅವರಿಂದ ಒಪ್ಪಿಗೆ ಪಡೆದುಕೊಳ್ಳುವುದು ಉತ್ತಮ. ಈಗಾಗಲೇ ಪತ್ರಿಕೆಗಳು ಅಲ್ಲಿರುವುದಾದರೆ ಪುನಃ ಪತ್ರಿಕೆಗಳನ್ನು ಬಿಟ್ಟು ಬರುವ ಅಗತ್ಯವಿಲ್ಲ.
ಪುನರ್ಭೇಟಿಗೆ ತಯಾರಿ ನಡೆಸುವಾಗ ನೀವು ಭೇಟಿಮಾಡಲಿರುವ ವ್ಯಕ್ತಿಗೆ ಯಾವ ವಿಷಯ ಆಸಕ್ತಿಕರವಾಗಿರಬಹುದೆಂದು ಪರಿಗಣಿಸಿ. ಅವನು ಕುಟುಂಬಸ್ಥನಾ? ಬೇರೆ ಬೇರೆ ಸ್ಥಳಗಳನ್ನು ಭೇಟಿಮಾಡುವುದರಲ್ಲಿ ಆತನಿಗೆ ಆಸಕ್ತಿ ಇದೆಯಾ? ತೋಟಗಾರಿಕೆಯಲ್ಲಿ ಇಷ್ಟವಿದೆಯಾ? ಮುಂತಾದ ವಿಷಯಗಳ ಕುರಿತು ಯೋಚಿಸಿ. ನಂತರ ಹಳೇ ಸಂಚಿಕೆಗಳಲ್ಲಿ ಅವನಿಗೆ ಓದಲು ಆಸಕ್ತಿಕರವಾಗಿರುವ ಯಾವುದಾದರೂ ಲೇಖನವಿದೆಯಾ ಎಂದು ನೋಡಿ, ಪುನರ್ಭೇಟಿಗೆ ಹೋದಾಗ ಅದನ್ನು ಅವನಿಗೆ ತೋರಿಸಿ.
ಒಬ್ಬ ಆಸಕ್ತ ವ್ಯಕ್ತಿಯನ್ನು ಹಲವು ಬಾರಿ ಭೇಟಿಮಾಡಲು ಪ್ರಯತ್ನಿಸಿದರೂ ಸಿಗದೆ ಇದ್ದು, ಈಗ ಭೇಟಿಯಾಗಿದ್ದರೆ ಅವನಿಗೆ ಕೊಡಬೇಕೆಂದಿದ್ದ ಹಳೇ ಸಂಚಿಕೆಗಳಲ್ಲಿ ಕೆಲವನ್ನು ತೋರಿಸಿ.