ಮಾದರಿ ನಿರೂಪಣೆಗಳು
ಕ್ರಿಸ್ತನ ಮರಣದ ಸ್ಮರಣೆಯ ಆಮಂತ್ರಣ ಪತ್ರ ಕೊಡುವಾಗ . . .
“ನಾವು ವಿಶೇಷ ಕಾರ್ಯಕ್ರಮವೊಂದಕ್ಕೆ ಆಮಂತ್ರಣ ಪತ್ರವನ್ನು ನೀಡುತ್ತಿದ್ದೇವೆ. ಇದು ಕ್ರಿಸ್ತನ ಮರಣದ ಸ್ಮರಣೆಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವೇಕೆ ತುಂಬಾ ಪ್ರಾಮುಖ್ಯ ಎಂದು ತಿಳಿಯಲು ಬಯಸುತ್ತೀರಾ? [ಉತ್ತರಕ್ಕಾಗಿ ಕಾಯಿರಿ. ಮನೆಯವನಿಗೆ ಆಸಕ್ತಿಯಿರುವಲ್ಲಿ ನಿಮ್ಮ ಮಾತನ್ನು ಮುಂದುವರಿಸಿ.] ಏಪ್ರಿಲ್ 14ರಂದು ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಲು ಮತ್ತು ಆತನ ಮರಣ ನಮಗೆ ಹೇಗೆ ಪ್ರಯೋಜನ ತರುತ್ತದೆಂದು ತಿಳಿಸುವ ಉಚಿತ ಬೈಬಲ್ ಭಾಷಣವನ್ನು ಆಲಿಸಲು ಲಕ್ಷಾಂತರ ಜನರು ಲೋಕವ್ಯಾಪಕವಾಗಿ ಸೇರಿಬರಲಿದ್ದಾರೆ. ಈ ಕಾರ್ಯಕ್ರಮ ಎಲ್ಲಿ, ಯಾವಾಗ ನಡೆಯುತ್ತದೆ ಎನ್ನುವ ಮಾಹಿತಿ ಇದರಲ್ಲಿ ಇದೆ.”
ಕಾವಲಿನಬುರುಜು ಏಪ್ರಿಲ್ - ಜೂನ್
“ನಮ್ಮೆಲ್ಲರನ್ನು ಬಾಧಿಸುವಂತಹ ವಿಷಯದ ಕುರಿತು ಮಾತಾಡಲು ನಾವು ನಿಮ್ಮನ್ನು ಭೇಟಿಮಾಡುತ್ತಿದ್ದೇವೆ. ಅದೇನೆಂದರೆ ನಮ್ಮ ಪ್ರಿಯರ ಮರಣವೇ ಆಗಿದೆ. ಮರಣದಲ್ಲಿ ಸ್ವಂತದವರನ್ನು ಅಥವಾ ಸ್ನೇಹಿತರನ್ನು ಕಳೆದುಕೊಳ್ಳುವುದು ಒಂದು ಸಹಿಸಲಾಗದ ವಿಷಯವೆಂದು ನೀವು ಒಪ್ಪುತ್ತೀರೋ? [ಉತ್ತರಕ್ಕಾಗಿ ಕಾಯಿರಿ.] ಅನೇಕರಿಗೆ ಸಾಂತ್ವನ ನೀಡಿದ ವಾಗ್ದಾನವೊಂದನ್ನು ನಿಮಗೆ ತಿಳಿಸಬಹುದಾ? [ಮನೆಯವರು ಒಪ್ಪುವಲ್ಲಿ ಯೆಶಾಯ 25:8ನ್ನು ಓದಿ.] ಮರಣವನ್ನು ಅಂತ್ಯಗೊಳಿಸುವ ಮತ್ತು ನಮ್ಮ ಪ್ರಿಯರು ಪುನಃ ಜೀವಿಸುವ ಪ್ರೋತ್ಸಾಹದಾಯಕ ಬೈಬಲ್ ವಾಗ್ದಾನದ ಕುರಿತು ಈ ಪತ್ರಿಕೆ ತಿಳಿಸುತ್ತದೆ.”