ಮಾದರಿ ನಿರೂಪಣೆಗಳು
ಏಪ್ರಿಲ್ ತಿಂಗಳಿನ ಮೊದಲ ಶನಿವಾರ ಬೈಬಲ್ ಅಧ್ಯಯನ ಆರಂಭಿಸಲು
“ಜಗತ್ತಲ್ಲಿ ನಡಿತಿರೋ ಕೆಟ್ಟ ವಿಷಯಗಳಿಗೆ ದುಷ್ಟಶಕ್ತಿಗಳೇ ಕಾರಣ ಅಂತ ಜನ್ರು ನಂಬುತ್ತಾರೆ. ಈ ದುಷ್ಟಶಕ್ತಿಗಳ ಹಿಂದೆ ಯಾರಿದ್ದಾರೆ ಅನ್ನೋ ಪ್ರಶ್ನೆ ಜನರಿಗಿದೆ. ನೀವೇನು ಹೇಳ್ತೀರಾ? [ಉತ್ತರಕ್ಕಾಗಿ ಕಾಯಿರಿ.] ಕೆಟ್ಟದ್ದಕ್ಕೆ ಕುಮ್ಮಕ್ಕು ನೀಡುತ್ತಿರೋ ವ್ಯಕ್ತಿ ಯಾರು? ಆ ವ್ಯಕ್ತಿನ ಯಾರು ಸುಷ್ಟಿಮಾಡಿದ್ದು? ಅನ್ನೋ ಕೆಲವು ಮಾಹಿತಿಯನ್ನು ನಿಮಗೆ ತಿಳಿಸಬಹುದಾ?” ಮನೆಯವರು ಒಪ್ಪುವಲ್ಲಿ ಏಪ್ರಿಲ್-ಜೂನ್ ಕಾವಲಿನಬುರುಜು ಪತ್ರಿಕೆಯ ಕೊನೇ ಪುಟದಲ್ಲಿರುವ ಲೇಖನ ತೋರಿಸಿ. ಮೊದಲ ಪ್ಯಾರ ಮತ್ತು ಅಲ್ಲಿ ಕೊಡಲಾದ ವಚನವನ್ನು ಚರ್ಚಿಸಿ. ಪತ್ರಿಕೆಗಳನ್ನು ಅವರಿಗೆ ನೀಡಿ. ಮುಂದಿನ ಪ್ರಶ್ನೆಯನ್ನು ಚರ್ಚಿಸಲು ಏರ್ಪಾಡು ಮಾಡಿ ಬನ್ನಿ.
ಕಾವಲಿನಬುರುಜು ಏಪ್ರಿಲ್-ಜೂನ್
“ಅಂಗವೈಕಲ್ಯ ಇರೋ ಒಂದು ಮಗುವನ್ನ ನೋಡಿಕೊಳ್ಳೋದು, ಪಾಲನೆಪೋಷಣೆ ಮಾಡೋದು ಅಷ್ಟು ಸುಲಭವಲ್ಲ. ಈ ರೀತಿ ಇದ್ದಾಗ ಮನೆಮಂದಿ ಅದ್ರಲ್ಲೂ ಮಗುವಿನ ಅಪ್ಪಅಮ್ಮ ಹೇಗೆ ಸನ್ನಿವೇಶನ ಸಂಭಾಳಿಸಬಹುದು? [ಉತ್ತರಕ್ಕಾಗಿ ಕಾಯಿರಿ.] ಮುಂದೆ ಭವಿಷ್ಯದಲ್ಲಿ ಇಂಥ ಮಕ್ಕಳಿಗೋಸ್ಕರ ದೇವರು ಮಾಡೋ ಒಂದು ವಿಷ್ಯವನ್ನು ನಿಮಗೆ ಓದಿ ತಿಳಿಸ್ಲಾ? [ಮನೆಯವರು ಒಪ್ಪುವಲ್ಲಿ ಪ್ರಕಟನೆ 21:3, 4 ಓದಿ. ಪುಟ 10ರ ಲೇಖನ ತೋರಿಸಿ.] ಈಗ ನಾವು ಓದಿದ ವಚನ ಭವಿಷ್ಯದ ಬಗ್ಗೆ ಆಶಾಕಿರಣವನ್ನು ಕೊಟ್ಟಿತು. ಆದ್ರೆ ಈಗಿರೋ ಕೆಲ್ವೊಂದು ಸವಾಲುಗಳನ್ನ ಹೇಗೆ ನಿಭಾಯಿಸೋದು ಅನ್ನೋ ಚಿಂತೆ ನಿಮಗಿರಬಹುದು. ಅದರ ಬಗ್ಗೆ ಈ ಲೇಖನದಲ್ಲಿ ಸಲಹೆಗಳಿವೆ.”