ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಮೊದಲ ಮಾತುಗಳನ್ನು ಮುಂತಯಾರಿಸಿ
ಏಕೆ ಪ್ರಾಮುಖ್ಯ: ನಮ್ಮ ಮೊದಲ ಮಾತುಗಳು ಮನೆಯವನ ಆಸಕ್ತಿ ಕೆರಳಿಸದಿದ್ದರೆ, ನಾವು ಸಾಕ್ಷಿ ಕೊಡುವ ಮುಂಚೆಯೇ ಅವನು ಸಂಭಾಷಣೆಯನ್ನು ಕೊನೆಗೊಳಿಸಬಹುದು. ಅನೇಕ ಪ್ರಚಾರಕರು ತಮ್ಮ ನಿರೂಪಣೆಗಳಲ್ಲಿ ಮೊದಲ ಮಾತುಗಳಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಾರೆ. ನಮ್ಮ ರಾಜ್ಯ ಸೇವೆ ಮತ್ತು ಬೈಬಲ್ ಚರ್ಚೆಗಳನ್ನು ಆರಂಭಿಸಿ ಮುಂದುವರಿಸುವ ವಿಧ ಎಂಬ ಪುಸ್ತಿಕೆಯಲ್ಲಿ ಮಾದರಿ ನಿರೂಪಣೆಗಳಿವೆ. ಅವುಗಳನ್ನು ಸನ್ನಿವೇಶಕ್ಕನುಸಾರ ಹೊಂದಿಸಿಕೊಳ್ಳಲು ಸಾಧ್ಯವಾಗುವಂತೆ, ಸಂಪೂರ್ಣ ನಿರೂಪಣೆಯನ್ನು ಕೊಡದೆ ಕೇವಲ ಹೊರಮೇರೆಯನ್ನು ಕೊಡಲಾಗಿದೆ. ಇನ್ನು ಕೆಲವು ನಿರೂಪಣೆಗಳು ಸಂಪೂರ್ಣವಾಗಿರುವುದಾದರೂ ಪ್ರಚಾರಕರು ಅದರಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಬಹುದು ಅಥವಾ ಹೊಸ ನಿರೂಪಣೆಯನ್ನೇ ತಯಾರಿಸಬಹುದು. ಮನಸ್ಸಿಗೆ ತೋಚಿದ್ದನ್ನು ಮನೆಯವನಿಗೆ ಹೇಳುವ ಬದಲು ಮೊದಲ ಮಾತುಗಳನ್ನು ಮುಂತಯಾರಿಸಿ. ಆಗ ಮನೆಯವನ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತದೆ.—ಜ್ಞಾನೋ. 15:28.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ನಿಮ್ಮ ಪೀಠಿಕೆ ಪರಿಣಾಮಕಾರಿಯಾಗಿಲ್ಲದಿದ್ದರೆ ಅದನ್ನು ಬದಲಾಯಿಸಿ.