ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/14 ಪು. 8
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2014 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
  • ಎಲ್ಲಾ ಸಂದರ್ಭದಲ್ಲೂ ಉಪಯೋಗಿಸಿ
    2010 ನಮ್ಮ ರಾಜ್ಯದ ಸೇವೆ
  • ವೆಬ್‌ಸೈಟ್‌ ಕರಪತ್ರವನ್ನು ಉಪಯೋಗಿಸಿ
    2014 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2015 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
2014 ನಮ್ಮ ರಾಜ್ಯದ ಸೇವೆ
km 7/14 ಪು. 8

ಮಾದರಿ ನಿರೂಪಣೆಗಳು

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?

ಮನೆಯವನಿಗೆ ಕರಪತ್ರವನ್ನು ಕೊಟ್ಟು ಅದರ ಮುಖಪುಟದಲ್ಲಿರುವ ಪ್ರಶ್ನೆಯನ್ನು ತೋರಿಸುತ್ತಾ, “ನಮಸ್ಕಾರ, ಒಂದು ಪ್ರಾಮುಖ್ಯ ಸಂದೇಶವಿರುವ ಈ ಕರಪತ್ರವನ್ನು ನಾವು ಲೋಕವ್ಯಾಪಕವಾಗಿ ಎಲ್ಲರಿಗೂ ಕೊಡುತ್ತಿದ್ದೇವೆ, ಇದು ನಿಮಗೆ.”

ಮನೆಯಲ್ಲಿ ಯಾರೂ ಸಿಗದಿದ್ದಾಗ ಕರಪತ್ರವನ್ನು ಇಟ್ಟುಬರುವಲ್ಲಿ, ನೆರೆಹೊರೆಯವರಿಗೆ ಕಾಣದಂತೆ ಮತ್ತು ಅಗತ್ಯಕ್ಕಿಂತ ಹೆಚ್ಚು ಮಡಿಚದೆ ಇಡಿ.

ಮನೆಯವರು ಆಸಕ್ತಿ ತೋರಿಸಿದರೆ ಅಥವಾ ಮಾತಾಡಲು ಬಯಸಿದರೆ, ಕರಪತ್ರದ ಮುಖ ಪುಟದಲ್ಲಿನ ಪ್ರಶ್ನೆಗಿರುವ ಆಯ್ಕೆಗಳನ್ನು ತೋರಿಸುತ್ತಾ ಅವರ ಅಭಿಪ್ರಾಯವನ್ನು ಕೇಳಿ. ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲಾಧಾರಿತ ಉತ್ತರ ತಿಳಿದುಕೊಳ್ಳಲು ನಿಮಗೆ ಆಸಕ್ತಿ ಇದೆಯೋ? ಎಂದು ಕೇಳಿ, ಕರಪತ್ರವನ್ನು ತೆರೆದು ಕೀರ್ತನೆ 119:144, 160ನೇ ವಚನವನ್ನು ತೋರಿಸಿ. ಈ ಕರಪತ್ರವು ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲಾಧಾರಿತ ಉತ್ತರಗಳನ್ನು ತಿಳಿಸುವ ವೆಬ್‌ಸೈಟ್‌ನ ಕುರಿತು ತಿಳಿಸುತ್ತದೆ ಎಂದು ವಿವರಿಸಿ. ಅವರಿಗೆ ಇನ್ನೂ ಸಮಯವಿದ್ದರೆ ಬೈಬಲ್‌ ಅಧ್ಯಯನ ಏಕೆ ಮಾಡಬೇಕು? ಎಂಬ ವೀಡಿಯೋ ತೋರಿಸಿ. ಹೊರಡುವ ಮುನ್ನ ಕರಪತ್ರದ ಹಿಂಬದಿಯಲ್ಲಿರುವ ಮೂರು ಪ್ರಶ್ನೆ ತೋರಿಸಿ, ಅದರಲ್ಲಿ ಯಾವ ಪ್ರಶ್ನೆಗೆ ಉತ್ತರ ತಿಳಿಯಲು ಇಷ್ಟಪಡುತ್ತಾರೆಂದು ಕೇಳಿ. ಪುನರ್ಭೇಟಿಯಲ್ಲಿ jw.org ವೆಬ್‌ಸೈಟ್‌ನಲ್ಲಿನ ಪ್ರಕಾಶನಗಳು>ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ಪುಟವನ್ನು ಅಥವಾ ಸೂಕ್ತವಾದ ಮುದ್ರಿತ ಸಾಹಿತ್ಯವನ್ನು ಉಪಯೋಗಿಸುತ್ತಾ ಅವರು ಆಯ್ಕೆ ಮಾಡಿದ ಪ್ರಶ್ನೆಗೆ ಹೇಗೆ ಉತ್ತರ ತಿಳಿದುಕೊಳ್ಳಬಹುದೆಂದು ತೋರಿಸಿ.

ಪ್ರಾದೇಶಿಕ ಅಧಿವೇಶನದ ಆಮಂತ್ರಣ ಪತ್ರಗಳನ್ನೂ ಕೊಡುತ್ತಿರುವಲ್ಲಿ, ಕರಪತ್ರದೊಂದಿಗೆ ಆಮಂತ್ರಣ ಪತ್ರ ಕೊಟ್ಟು, “ಇದರ ಜೊತೆ ಒಂದು ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ” ಎಂದು ಹೇಳಿ.

ಕಾವಲಿನಬುರುಜು ಜುಲೈ-ಸೆಪ್ಟೆಂಬರ್‌

ವಾರಾಂತ್ಯಗಳಲ್ಲಿ ಕರಪತ್ರದ ಜೊತೆಗೆ ಸೂಕ್ತವಾದಲ್ಲಿ ಕಾವಲಿನಬುರುಜು ಪತ್ರಿಕೆ ಕೊಡಲು ಹೀಗೆ ಹೇಳಿ: “ಇದು ಕಾವಲಿನಬುರುಜು ಪತ್ರಿಕೆ, ಧೂಮಪಾನದ ಬಗ್ಗೆ ದೇವರ ನೋಟ ಏನೆಂದು ಈ ಪತ್ರಿಕೆ ತಿಳಿಸುತ್ತದೆ. ನಿಮಗೆ ಆಸಕ್ತಿ ಇರುವುದಾದರೆ ಇದನ್ನು ಓದಬಹುದು.”

ಎಚ್ಚರ! ಜುಲೈ-ಸೆಪ್ಟೆಂಬರ್‌

ವಾರಾಂತ್ಯಗಳಲ್ಲಿ ಕರಪತ್ರದ ಜೊತೆಗೆ ಸೂಕ್ತವಾದಲ್ಲಿ ಎಚ್ಚರ! ಪತ್ರಿಕೆ ಕೊಡಲು ಹೀಗೆ ಹೇಳಿ: “ನಾವ್ಯಾಕೆ ಬದುಕಿರಬೇಕು ಎನ್ನುವುದಕ್ಕಿರುವ ಮೂರು ಕಾರಣಗಳನ್ನು ಈ ಹೊಸ ಎಚ್ಚರ! ಪತ್ರಿಕೆಯು ತಿಳಿಸುತ್ತದೆ. ಈ ಪತ್ರಿಕೆಯನ್ನು ಓದಲು ಆಸಕ್ತಿ ಇರುವವರಿಗೆ ಕೊಡುತ್ತಿದ್ದೇವೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ