ವೆಬ್ಸೈಟ್ ಕರಪತ್ರವನ್ನು ಉಪಯೋಗಿಸಿ
ಈ ಕರಪತ್ರದ ಶೀರ್ಷಿಕೆ, ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? ಇದರ ಹಿಂಬದಿಯಲ್ಲಿ ಮೂರು ಪ್ರಾಮುಖ್ಯ ಪ್ರಶ್ನೆಗಳನ್ನು ಕೊಡಲಾಗಿದೆ. ಅವಕಾಶ ಸಿಕ್ಕಾಗ ವಿವೇಚನೆಯಿಂದ ‘ಈ ಪ್ರಶ್ನೆಗಳಲ್ಲಿ ಯಾವುದು ಆಸಕ್ತಿಕರವಾಗಿದೆ’ ಎಂದು ಮನೆಯವರನ್ನು ಕೇಳಿ. ಅವರಿಗೆ ಆಸಕ್ತಿಯಿದೆ ಎಂದು ನಿಮಗನಿಸಿದರೆ, ಅವರು ಉತ್ತರ ತಿಳಿದುಕೊಳ್ಳಲು ನಮ್ಮ ವೆಬ್ಸೈಟ್ನಲ್ಲಿ ಪ್ರಕಾಶನಗಳು > ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ಪುಟವನ್ನು ತೋರಿಸಿ. ಅಲ್ಲಿ, ದೇವರ ರಾಜ್ಯ ಎಂದರೇನು? ಆ ರಾಜ್ಯ ಏನು ಮಾಡುವುದು? ಎಂಬ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.
ದೇವರ ರಾಜ್ಯದಲ್ಲಿ ನಮ್ಮ ಜೀವನ ಹೇಗಿರುತ್ತದೆ ಎನ್ನುವುದರ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ಜನರಿಗೆ ತಿಳಿಸಲು ಈ ಕರಪತ್ರವನ್ನು ಯಾವಾಗಲೂ ನಿಮ್ಮೊಂದಿಗೆ ಕೊಂಡೊಯ್ಯಿರಿ.