1914-2014 ದೇವರ ರಾಜ್ಯದ ಆಳ್ವಿಕೆಯ ಶತಮಾನೋತ್ಸವ!
1922ರಲ್ಲಿ ಸಹೋದರ ಜೆ.ಎಫ್. ರದರ್ಫರ್ಡ್ರವರು “ನೋಡಿ, ರಾಜನು ಆಳುತ್ತಾನೆ! ಆದಕಾರಣ ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ” ಎಂದು ಘೋಷಿಸಿದರು. ದೇವರ ರಾಜ್ಯದ ಆಳ್ವಿಕೆ ಆರಂಭವಾಗಿ 100 ವರ್ಷವಾದರೂ, ಅವರ ಆ ಮಾತುಗಳು ಈಗಲೂ ನಮ್ಮ ಹುರುಪನ್ನು ಬಡಿದೆಬ್ಬಿಸುತ್ತವೆ. ಆದ್ದರಿಂದ ನಮ್ಮ ವೆಬ್ಸೈಟ್ನಿಂದ ದೇವರ ರಾಜ್ಯದ ಕುರಿತು ಕಲಿಯುವಂತೆ ಇತರರಿಗೆ ಸಹಾಯ ಮಾಡುವ ಕೆಲಸದಲ್ಲಿ ನಮ್ಮ ಶಕ್ತಿಯನ್ನೆಲ್ಲಾ ಧಾರೆಯೆರೆಯುವ ಮೂಲಕ ಈ ಆಗಸ್ಟ್ ತಿಂಗಳನ್ನು ಅವಿಸ್ಮರಣೀಯ ತಿಂಗಳನ್ನಾಗಿ ಮಾಡೋಣ!