ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ದೇವರ ರಾಜ್ಯದ ಕುರಿತು ದೃಢವಿಶ್ವಾಸದಿಂದ ಮಾತಾಡಿ
ಏಕೆ ಪ್ರಾಮುಖ್ಯ: 2 ತಿಮೊಥೆಯ 1:7,8ರಲ್ಲಿರುವ ನಿರ್ದೇಶನವನ್ನು ನಾವು ಪಾಲಿಸಬೇಕೆಂದರೆ, ರಾಜ್ಯದ ಕುರಿತು ದೃಢವಿಶ್ವಾಸದಿಂದ ಮಾತಾಡಲೇಬೇಕು. ಈ ದೃಢವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳುವುದು?
ಹೇಗೆ ಮಾಡುವುದು:
• ಜನರ ಕಡೆಗೆ ಆಸಕ್ತಿ ಇರಲಿ. (ಫಿಲಿ. 2:4) ಎಷ್ಟೋ ಜನ ವೈಯಕ್ತಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನೋಡಿ ಕಂಗಾಲಾಗಿದ್ದಾರೆ. ನಮಗೆ ಅವರ ಕಡೆಗೆ ಆಸಕ್ತಿ ಇದ್ದರೆ, ಸಾಂತ್ವನ ಮತ್ತು ನಿರೀಕ್ಷೆ ತರುವ ರಾಜ್ಯದ ಕುರಿತು ಮಾತಾಡಲು ಕಾತುರರಾಗಿರುತ್ತೇವೆ.
• ಮನೆಯಿಂದ ಹೊರಡುವ ಮುನ್ನ ಕೆಲವು ಕರಪತ್ರಗಳನ್ನು ತೆಗೆದುಕೊಂಡು ಹೋಗಿ.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
• ದೇವರ ರಾಜ್ಯದ ಕುರಿತು ಯಾರೊಂದಿಗೆ ಮಾತಾಡಬೇಕೆಂದು ಯೋಚಿಸಿ ಆಯ್ಕೆ ಮಾಡಿ. ಧೈರ್ಯಕ್ಕಾಗಿ ಮತ್ತು ಮಾತು ಆರಂಭಿಸಲು ಸಹಾಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಿ.