ಉತ್ತಮ ಬೋಧನೆಗೆ ಒಳ್ಳೆಯ ತಯಾರಿ ಅಗತ್ಯ
ಇಬ್ಬರು ವ್ಯಕ್ತಿಗಳು ಯೇಸುವಿನ ಹತ್ತಿರ ನಿತ್ಯಜೀವದ ಕುರಿತು ಒಂದೇ ರೀತಿಯ ಪ್ರಶ್ನೆಯನ್ನು ಕೇಳಿದರು. ಆ ಇಬ್ಬರಿಗೂ ಯೇಸು ಅವರವರ ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಉತ್ತರ ಕೊಟ್ಟನು. (ಲೂಕ 10:25-28; 18:18-20) ಬೈಬಲ್ ಅಧ್ಯಯನದಲ್ಲಿ ಉಪಯೋಗಿಸುವ ಪುಸ್ತಕದ ಮಾಹಿತಿ ನಮಗೆ ಚೆನ್ನಾಗಿ ಗೊತ್ತಿರುವುದಾದರೂ ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಯೊಂದು ಅಧ್ಯಯನಕ್ಕಾಗಿ ತಯಾರಿ ಮಾಡಬೇಕು. ಹಾಗೆ ತಯಾರಿಸುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳೋಣ: ವಿದ್ಯಾರ್ಥಿಗೆ ಯಾವ ವಿಷಯ ಅರ್ಥಮಾಡಿಕೊಳ್ಳಲು ಮತ್ತು ಸ್ವೀಕರಿಸಲು ಕಷ್ಟ ಆಗಬಹುದು? ಯಾವ ವಚನಗಳನ್ನು ಅವನೊಂದಿಗೆ ಓದಬೇಕು? ಎಷ್ಟು ವಿಷಯಗಳನ್ನು ಆವರಿಸಬೇಕು? ಕೆಲವೊಮ್ಮೆ, ವಿದ್ಯಾರ್ಥಿ ವಿಷಯವನ್ನು ಗ್ರಹಿಸುವಂತೆ ದೃಷ್ಟಾಂತ, ವಿವರಣೆ ಮತ್ತು ಪ್ರಶ್ನೆಗಳನ್ನು ಸಹ ತಯಾರಿಸಬೇಕಾಗಬಹುದು. ಒಬ್ಬ ವ್ಯಕ್ತಿಯ ಹೃದಯದಲ್ಲಿ ಸತ್ಯದ ಬೀಜ ಬೆಳೆಯುವಂತೆ ಮಾಡುವವನು ಯೆಹೋವ ದೇವರಾಗಿದ್ದಾನೆ. ಹಾಗಾಗಿ ನಮ್ಮ ತಯಾರಿಯ ಮೇಲೆ, ವಿದ್ಯಾರ್ಥಿಯ ಮೇಲೆ ಮತ್ತು ಆತನಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡಲು ನಾವು ಹಾಕುವ ಪ್ರಯತ್ನದ ಮೇಲೆ ಆಶೀರ್ವಾದಕ್ಕಾಗಿ ದೇವರಲ್ಲಿ ಕೇಳಿಕೊಳ್ಳಬೇಕು.—1 ಕೊರಿಂ. 3:6; ಯಾಕೋ. 1:5.