ನಮ್ಮ ಕ್ರೈಸ್ತ ಜೀವನ
ಸ್ಮರಣೆಗೆ ಸರ್ವರನ್ನೂ ಆಹ್ವಾನಿಸಿ!
ಫೆಬ್ರವರಿ 27ರಿಂದ ಕ್ರಿಸ್ತನ ಮರಣದ ಸ್ಮರಣೆಯ ಅಭಿಯಾನ ಆರಂಭವಾಗಲಿದೆ. ನಮ್ಮ ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರನ್ನು ಆಹ್ವಾನಿಸೋಣ. ಈ ಸಮಯದಲ್ಲಿ ಆಸಕ್ತಿ ತೋರಿಸುವವರನ್ನು ಪುನಃ ಭೇಟಿಯಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಈ ಹೆಜ್ಜೆಗಳನ್ನು ಅನುಸರಿಸಿ
ಆಮಂತ್ರಿಸಿ
“ಮಾರ್ಚ್ 23ರಂದು ಒಂದು ತುಂಬ ಮುಖ್ಯವಾದ ಕಾರ್ಯಕ್ರಮ ನಡೆಯಲಿದೆ. ಯೇಸುವಿನ ಮರಣವನ್ನು ಸ್ಮರಿಸಲು ಮತ್ತು ಆತನ ಪ್ರಾಣತ್ಯಾಗದಿಂದ ನಮಗಾಗುವ ಪ್ರಯೋಜನಗಳನ್ನು ತಿಳಿಯಲು ಒಂದು ಬೈಬಲಾಧಾರಿತ ಭಾಷಣ ಕೊಡಲಾಗುತ್ತದೆ. ಇದನ್ನು ಕೇಳಲು ಲೋಕವ್ಯಾಪಕವಾಗಿ ಲಕ್ಷಾಂತರ ಜನ ಅನೇಕ ಕಡೆಗಳಲ್ಲಿ ಕೂಡಿಬರುತ್ತಾರೆ. ಕಾರ್ಯಕ್ರಮ ನಡೆಯುವ ಸಮಯ ಮತ್ತು ನಿಮಗೆ ಹತ್ತಿರದ ಸ್ಥಳ ಇದರಲ್ಲಿದೆ. ದಯವಿಟ್ಟು ನೀವೂ ಬನ್ನಿ.”
ಮನೆಯವನು ಆಸಕ್ತಿ ತೋರಿಸಿದರೆ . . .
ಕಾವಲಿನಬುರುಜು ಪತ್ರಿಕೆ ನೀಡಿ
ಪುನರ್ಭೇಟಿಗಾಗಿ ತಳಪಾಯ ಹಾಕಿ.
ಕ್ರಿಸ್ತನ ಮರಣದ ಸ್ಮರಣೆಯ ವಿಡಿಯೋ ತೋರಿಸಿ
ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿಯಲ್ಲಿ . . .
ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ
ಬೈಬಲ್ ಅಧ್ಯಯನದ ಪುಸ್ತಕ ಕೊಡಿ.
ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ಕೊಡಿ
ಪುಟ 206ರಿಂದ 208ನ್ನು ಬಳಸಿ ಸ್ಮರಣೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ. ನಂತರ ಪುಸ್ತಕ ನೀಡಿ.
ದೇವರ ಮಾತನ್ನು ಆಲಿಸಿ ಕಿರುಹೊತ್ತಗೆ ನೀಡಿ
ಪುಟ 18, 19ನ್ನು ಬಳಸಿ ಕ್ರಿಸ್ತನ ಮರಣದ ಬಗ್ಗೆ ವಿವರಿಸಿ. ನಂತರ ಕಿರುಹೊತ್ತಗೆ ನೀಡಿ.