ಕ್ರಿಸ್ತನ ಮರಣದ ಸ್ಮರಣೆಯ ಪ್ರಯುಕ್ತ ಅಭಿಯಾನ—ಮಾರ್ಚ್ 17ರಿಂದ
1. ಮಾರ್ಚ್ 17ರಿಂದ ಯಾವ ಅಭಿಯಾನ ಆರಂಭವಾಗಲಿದೆ?
1 ನಾವು ಪ್ರತಿವರ್ಷ ಕ್ರಿಸ್ತನ ಮರಣವನ್ನು ಸ್ಮರಿಸುವಾಗ ಅದನ್ನು ಪ್ರಕಟಪಡಿಸುತ್ತೇವೆ. (1 ಕೊರಿಂ. 11:26) ಬೇರೆ ಜನರು ಸಹ ಹಾಜರಿದ್ದು, ಯೆಹೋವನು ನಮ್ಮ ರಕ್ಷಣೆಗಾಗಿ ಮಾಡಿರುವ ಪ್ರೀತಿಯ ಏರ್ಪಾಡಿನ ಬಗ್ಗೆ ತಿಳಿಯಬೇಕೆಂಬುದು ನಮ್ಮ ಇಚ್ಛೆ. (ಯೋಹಾ. 3:16) ಯೇಸುವಿನ ಮರಣದ ಸ್ಮರಣೆಗೆ ಜನರನ್ನು ಆಮಂತ್ರಿಸುವ ಈ ವರ್ಷದ ಅಭಿಯಾನ ಮಾರ್ಚ್ 17ರ ಶನಿವಾರದಂದು ಆರಂಭವಾಗಲಿದೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದೀರಲ್ಲವೇ?
2. ಆಮಂತ್ರಣ ಪತ್ರ ನೀಡುವಾಗ ಏನು ಹೇಳಬಹುದು? ಯಾವ ಎಚ್ಚರಿಕೆ ವಹಿಸತಕ್ಕದ್ದು?
2 ಹೀಗೆ ಆಮಂತ್ರಿಸೋಣ: ನಿರೂಪಣೆ ಚುಟುಕಾಗಿರಲಿ. ಹೀಗನ್ನಬಹುದು: “ನಮಸ್ಕಾರ. ಏಪ್ರಿಲ್ 5ರಂದು ಒಂದು ಮುಖ್ಯವಾದ ಕಾರ್ಯಕ್ರಮವಿದೆ. ಇದು ಪ್ರತಿ ವರ್ಷ ಲೋಕವ್ಯಾಪಕವಾಗಿ ನಡೆಯುತ್ತದೆ. ನಿಮ್ಮ ಕುಟುಂಬಕ್ಕೆ ಈ ಆಮಂತ್ರಣ ಪತ್ರ ಕೊಡಲು ಬಂದಿದ್ದೇವೆ. ಆ ದಿನ ಒಂದು ಬೈಬಲಾಧರಿತ ಭಾಷಣ ಇರುತ್ತದೆ. ಯೇಸು ಜೀವಕೊಟ್ಟದ್ದರಿಂದ ಮಾನವರಿಗೆ ಯಾವ ಪ್ರಯೋಜನದ ಸಿಗುತ್ತದೆ, ಯೇಸು ಈಗ ಏನು ಮಾಡುತ್ತಿದ್ದಾನೆ ಎಂಬದರ ಬಗ್ಗೆ ಭಾಷಣದಲ್ಲಿ ವಿವರಿಸಲಾಗುವುದು. ಈ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಸಮಯವನ್ನು ಇಲ್ಲಿ ಕೊಡಲಾಗಿದೆ.” ಮನೆಯವರು ಕ್ರಿಶ್ಚಿಯನ್ ಅಲ್ಲದಿದ್ದರೆ ಅವರಿಗೆ ಆಸಕ್ತಿಯಿದೆಯೋ ಎಂದು ಮೊದಲು ಖಚಿತಪಡಿಸಿ ಆಮೇಲೆಯೇ ಆಮಂತ್ರಣ ಪತ್ರ ನೀಡಬೇಕು. ವಾರಾಂತ್ಯದಲ್ಲಿ ಆಮಂತ್ರಣ ಪತ್ರಗಳನ್ನು ಕೊಡುವಾಗ ಸೂಕ್ತವಾಗಿರುವಲ್ಲಿ ಪತ್ರಿಕೆಗಳನ್ನೂ ನೀಡಿ.
3. ಆದಷ್ಟು ಹೆಚ್ಚು ಜನರನ್ನು ಆಮಂತ್ರಿಸಲು ನಾವೇನು ಮಾಡಬಹುದು?
3 ಆದಷ್ಟು ಹೆಚ್ಚು ಜನರನ್ನು ಆಮಂತ್ರಿಸೋಣ: ಸಾಧ್ಯವಾದಷ್ಟು ಹೆಚ್ಚು ಮಂದಿಯನ್ನು ಆಮಂತ್ರಿಸುವುದು ನಮ್ಮ ಗುರಿ. ಹಾಗಾಗಿ ನಿಮ್ಮ ಬೈಬಲ್ ವಿದ್ಯಾರ್ಥಿಗಳು, ಪುನರ್ಭೇಟಿಗಳು, ಸಂಬಂಧಿಕರು, ಸಹೋದ್ಯೋಗಿಗಳು, ಸಹಪಾಠಿಗಳು, ನೆರೆಯವರು, ಇತರ ಪರಿಚಯಸ್ಥರನ್ನು ಖಂಡಿತ ಆಮಂತ್ರಿಸಿ. ಸಮಸ್ಯೆ ಉಂಟಾಗುವ ಸಾಧ್ಯತೆಗಳನ್ನು ಮನಸ್ಸಿನಲ್ಲಿಟ್ಟು ಹಿರಿಯರು ನಿಮ್ಮ ಸೇವಾ ಕ್ಷೇತ್ರವನ್ನು ಆವರಿಸುವುದು ಹೇಗೆಂದು ಸಲಹೆಸೂಚನೆ ನೀಡುವರು. ಜನರನ್ನು ಆಮಂತ್ರಿಸುವ ಈ ವಾರ್ಷಿಕ ಅಭಿಯಾನದಿಂದ ಒಳ್ಳೇ ಫಲಿತಾಂಶಗಳು ಸಿಕ್ಕಿವೆ. ಕಳೆದ ವರ್ಷ ಸ್ತ್ರೀಯೊಬ್ಬರು ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ಬಂದರು. ಅವರಿಗೆ ಆಮಂತ್ರಣ ಪತ್ರ ಕೊಟ್ಟ ಪ್ರಚಾರಕರನ್ನು ಹುಡುಕಿಕೊಡುತ್ತೇನೆಂದು ಅಲ್ಲಿದ್ದ ಸಹಾಯಕ ಹೇಳಿದಾಗ ಆ ಸ್ತ್ರೀ, ‘ನನಗೆ ಅವರ ಪರಿಚಯ ಇಲ್ಲ. ಇವತ್ತು ಮನೆಗೆ ಬಂದು ನನಗೆ ಈ ಆಮಂತ್ರಣ ಪತ್ರ ಕೊಟ್ಟು ಹೋದರು’ ಎಂದರು.
4. ಈ ಅಭಿಯಾನದಲ್ಲಿ ಹುರುಪಿನಿಂದ ಪಾಲ್ಗೊಳ್ಳಲು ಯಾವ್ಯಾವ ಕಾರಣಗಳಿವೆ?
4 ನಿಮ್ಮಿಂದ ಆಮಂತ್ರಣ ಪತ್ರ ಪಡಕೊಂಡ ವ್ಯಕ್ತಿಯೊಬ್ಬರು ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗಲೂ ಬಹುದು. ಅವರು ಬರದಿದ್ದರೂ ನಿಮ್ಮ ಶ್ರಮ ವ್ಯರ್ಥವಾಗಲ್ಲ. ಮನೆಯವರಿಗೆ ಒಳ್ಳೇ ಸಾಕ್ಷಿ ಸಿಗುತ್ತದೆ. ನೀವು ವಿತರಿಸುವ ಆಮಂತ್ರಣ ಪತ್ರದಿಂದ ಯೇಸು ಈಗ ಶಕ್ತಿಶಾಲಿ ರಾಜನಾಗಿದ್ದಾನೆ ಎಂದು ಜನ ತಿಳಿದುಕೊಳ್ಳುತ್ತಾರೆ. ಈ ಅಭಿಯಾನದಲ್ಲಿ ಹುರುಪಿನಿಂದ ಪಾಲ್ಗೊಳ್ಳುವಾಗ ವಿಮೋಚನಾ ಮೌಲ್ಯವೆಂಬ ಉಡುಗೊರೆಯನ್ನು ನೀವೆಷ್ಟು ಮಾನ್ಯಮಾಡುತ್ತೀರೆಂದು ನಿಮ್ಮ ಸೇವಾ ಕ್ಷೇತ್ರದ ಜನರಿಗೆ, ಇತರ ಪ್ರಚಾರಕರಿಗೆ, ಎಲ್ಲಕ್ಕಿಂತ ಮಿಗಿಲಾಗಿ ಯೆಹೋವನಿಗೆ ತೋರಿಸಿಕೊಡುತ್ತೀರಿ.—ಕೊಲೊ. 3:15.