ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 135-141
ನಾವು ಅದ್ಭುತವಾಗಿ ರಚಿಸಲ್ಪಟ್ಟಿದ್ದೇವೆ
ಸೃಷ್ಟಿಯಲ್ಲಿ ಕಂಡುಬರುವ ದೇವರ ಗುಣಗಳ ಬಗ್ಗೆ ದಾವೀದನು ಧ್ಯಾನಿಸಿದನು. ಅಲ್ಲದೆ, ತನ್ನ ಜೀವನವನ್ನು ಯೆಹೋವ ದೇವರ ಸೇವೆಗಾಗಿ ಮುಡಿಪಾಗಿಟ್ಟನು.
ದಾವೀದನು ಸೃಷ್ಟಿಯ ಬಗ್ಗೆ ಆಳವಾಗಿ ಯೋಚಿಸಿದಾಗ ಯೆಹೋವನನ್ನು ಸ್ತುತಿಸುವಂತೆ ಪ್ರೇರೇಪಿಸಲ್ಪಟ್ಟನು:
“ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ”
“ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ”
“ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು”