ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು —ಪುನರ್ಭೇಟಿ ಮಾಡಿ
ಏಕೆ ಪ್ರಾಮುಖ್ಯ: ರಾಜ್ಯ ಸುವಾರ್ತೆಗೆ ಆಸಕ್ತಿ ತೋರಿಸುವ ಅನೇಕರು ದೇವರ ಕುರಿತಾದ ಸತ್ಯವನ್ನು ಹುಡುಕುವವರಾಗಿದ್ದಾರೆ. (ಯೆಶಾ 55:6) ಅವರಿಗೆ ಹೆಚ್ಚೆಚ್ಚು ಕಲಿಸಬೇಕೆಂದರೆ ನಾವು ಕ್ರಮವಾಗಿ ಭೇಟಿ ಮಾಡುತ್ತಿರಬೇಕು. ಜನರು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುವುದರಿಂದ ಅವರ ಆಸಕ್ತಿಯನ್ನು ಬೆಳೆಸುವ ವಿಧಾನವೂ ಬೇರೆ ಬೇರೆಯಾಗಿರುತ್ತದೆ. ನಾವು ಒಳ್ಳೆಯ ತಯಾರಿ ಮಾಡುವುದಾದರೆ, ಹೆಚ್ಚು ಪರಿಣಾಮಕಾರಿಯಾಗಿ ಮಾತಾಡಬಹುದು. ಪ್ರತಿಯೊಂದು ಭೇಟಿಯನ್ನೂ ಒಂದು ಉದ್ದೇಶವನ್ನಿಟ್ಟು ಮಾಡಿ. ನಿಮ್ಮ ಮುಖ್ಯ ಗುರಿ ಬೈಬಲ್ ಅಧ್ಯಯನ ಆರಂಭಿಸುವುದಾಗಿರಲಿ.
ಹೇಗೆ ಮಾಡುವುದು:
ಕೊಟ್ಟ ಮಾತಿಗೆ ತಪ್ಪದೆ ಕೆಲವೇ ದಿನಗಳೊಳಗೆ ಭೇಟಿಮಾಡಲು ಪ್ರಯತ್ನಿಸಿ.—ಮತ್ತಾ 13:19
ಸ್ನೇಹಭಾವ ಮತ್ತು ಗೌರವದಿಂದ ಆರಾಮವಾಗಿ ಮಾತಾಡಿ
ನಗುಮುಖದಿಂದ ವಂದಿಸಿ. ಅವರ ಹೆಸರನ್ನು ಉಪಯೋಗಿಸಿ, ಆದರೆ ಅದನ್ನು ಗೌರವಯುತವಾಗಿ ಉಪಯೋಗಿಸಿ. ಅವರನ್ನು ಪುನಃ ಭೇಟಿಮಾಡುವ ಕಾರಣ ತಿಳಿಸಿ. ಅವರ ಪ್ರಶ್ನೆಗೆ ಉತ್ತರಿಸಲು, ಹೊಸ ಪತ್ರಿಕೆ ನೀಡಲು, ನಮ್ಮ ವೆಬ್‌ಸೈಟನ್ನು ತೋರಿಸಲು, ವಿಡಿಯೋ ತೋರಿಸಲು ಅಥವಾ ಬೈಬಲ್ ಅಧ್ಯಯನ ಹೇಗೆ ಮಾಡುವುದೆಂದು ತೋರಿಸಲು ಬಂದಿದ್ದೀರೆಂದು ತಿಳಿಸಿ. ಅವರು ಬೇರೆ ಯಾವುದಾದರೂ ವಿಷಯದ ಬಗ್ಗೆ ಆಸಕ್ತಿ ತೋರಿಸುವುದಾದರೆ ನಿಮ್ಮ ಸಂಭಾಷಣೆಯನ್ನು ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ.—ಫಿಲಿ 2:4
ಒಂದು ವಚನಭಾಗವನ್ನು ಚರ್ಚಿಸುವ ಮೂಲಕ ಅಥವಾ ಸಾಹಿತ್ಯವನ್ನು ಬಿಟ್ಟು ಬರುವ ಮೂಲಕ ಅವರ ಹೃದಯದಲ್ಲಿ ಬಿತ್ತಲಾಗಿರುವ ಸತ್ಯದ ಬೀಜಕ್ಕೆ ನೀರು ಹಾಕಿ. (1ಕೊರಿಂ 3:6) ಅವರೊಂದಿಗೆ ಒಂದು ಸ್ನೇಹ ಸಂಬಂಧ ಬೆಳೆಸಿಕೊಳ್ಳಿ
ಮುಂದಿನ ಭೇಟಿಗಾಗಿ ತಳಪಾಯ ಹಾಕಿ