ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜೂನ್‌ ಪು. 7
  • ಸೋಷಿಯಲ್‌ನೆಟ್‌ವರ್ಕ್‌—ಅಪಾಯಗಳಿಂದ ದೂರವಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೋಷಿಯಲ್‌ನೆಟ್‌ವರ್ಕ್‌—ಅಪಾಯಗಳಿಂದ ದೂರವಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ನಿಮ್ಮ ಆನ್‌ಲೈನ್‌ ಫ್ರೆಂಡ್ಸ್‌ ಯಾರು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸಾಮಾಜಿಕ ಜಾಲತಾಣ ಬಳಕೆ ನೀವು ಕೇಳಿಕೊಳ್ಳಬೇಕಾದ ನಾಲ್ಕು ಪ್ರಶ್ನೆ
    ಎಚ್ಚರ!—2012
  • ನಾನು ಸೋಶಿಯಲ್‌ ಮೀಡಿಯಾಗೆ ದಾಸನಾಗಿದ್ದೀನಾ?
    ಯುವಜನರ ಪ್ರಶ್ನೆಗಳು
  • ಸೋಶಿಯಲ್‌ ನೆಟ್‌ವರ್ಕಿಂಗ್‌ ಬಗ್ಗೆ ನನಗೆಲ್ಲ ತಿಳಿದಿದೆಯಾ? ಭಾಗ 1
    ಎಚ್ಚರ!—2012
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜೂನ್‌ ಪು. 7

ನಮ್ಮ ಕ್ರೈಸ್ತ ಜೀವನ

ಸೋಷಿಯಲ್‌ ನೆಟ್‌ವರ್ಕ್‌—ಅಪಾಯಗಳಿಂದ ದೂರವಿರಿ

ಕಲ್ಲುಗಳನ್ನು ರೊಟ್ಟಿಯಾಗಿ ಮಾಡಲು ಯೇಸು ನಿರಾಕರಿಸುತ್ತಿದ್ದಾನೆ

ಯಾಕೆ ಪ್ರಾಮುಖ್ಯ: ಸೋಷಿಯಲ್‌ ನೆಟ್‌ವರ್ಕ್‌ನಿಂದ ಸಹಾಯನೂ ಇದೆ ಅಪಾಯನೂ ಇದೆ. ಹಾಗಾಗಿ ಕೆಲವು ಕ್ರೈಸ್ತರು ಅದರ ಸಹವಾಸನೇ ಬೇಡ ಎಂದು ತೀರ್ಮಾನಿಸಿದ್ದಾರೆ. ಇನ್ನು ಕೆಲವು ಕ್ರೈಸ್ತರು ತಮ್ಮ ಬಂಧುಮಿತ್ರರ ಜೊತೆ ಸಂಪರ್ಕ ಇಟ್ಟುಕೊಳ್ಳಲು ಬಳಸುತ್ತಾರೆ. ಆದರೆ ನಾವು ಅದನ್ನು ಯದ್ವಾತದ್ವಾ ಬಳಸಬೇಕು ಎಂದು ಸೈತಾನ ಬಯಸುತ್ತಾನೆ. ಆಗ ನಮ್ಮ ಹೆಸರು ಮತ್ತು ಯೆಹೋವನ ಜೊತೆ ನಮಗಿರುವ ಸ್ನೇಹ ಎರಡೂ ಹಾಳಾಗಬಹುದು. ಯೇಸುವಿನಂತೆ ಬೈಬಲಿನಲ್ಲಿರುವ ತತ್ವಗಳನ್ನು ಬಳಸಿ ಸೋಷಿಯಲ್‌ ನೆಟ್‌ವರ್ಕ್‌ನಲ್ಲಿರುವ ಅಪಾಯಗಳನ್ನು ತಿಳಿದು ದೂರ ಇರಬಹುದು.—ಲೂಕ 4:4, 8, 12.

ಯಾವ ಅಪಾಯಗಳಿಂದ ದೂರವಿರಬೇಕು?

  • ಸೋಷಿಯಲ್‌ ಮೀಡಿಯಾವನ್ನು ಅತಿಯಾಗಿ ಬಳಸುವುದು. ಸೋಷಿಯಲ್‌ ಮೀಡಿಯಾದಲ್ಲಿ ಗಂಟೆಗಟ್ಟಲೆ ಕಳೆಯುವುದರಿಂದ ಯೆಹೋವನಿಗೆ ಕೊಡಬೇಕಾದ ಅಮೂಲ್ಯ ಸಮಯವನ್ನು ಕಳೆದುಕೊಂಡುಬಿಡುತ್ತೇವೆ

    ಬೈಬಲ್‌ ತತ್ವಗಳು: ಎಫೆ 5:15, 16; ಫಿಲಿ 1:10

  • ಕೆಟ್ಟದ್ದನ್ನು ನೋಡುವುದು ಅಥವಾ ಓದುವುದು. ಲೈಂಗಿಕವಾಗಿ ಉದ್ರೇಕಿಸುವಂಥ ಚಿತ್ರಗಳನ್ನು ನೋಡುವುದರಿಂದ ಅಶ್ಲೀಲ ಚಿತ್ರಗಳನ್ನು ನೋಡುವ ಚಟಕ್ಕೆ ಅಥವಾ ಅನೈತಿಕತೆಗೆ ಬಲಿಯಾಗುತ್ತೇವೆ. ಧರ್ಮಭ್ರಷ್ಟ ಮಾಹಿತಿಯನ್ನು ಓದುವುದರಿಂದ ಅಥವಾ ಅಂಥ ಬ್ಲಾಗ್‌ಗಳನ್ನು ಬಳಸುವುದರಿಂದ ನಮ್ಮ ನಂಬಿಕೆ ಹಾಳಾಗುತ್ತದೆ

    ಬೈಬಲ್‌ ತತ್ವಗಳು: ಮತ್ತಾ 5:28; ಫಿಲಿ 4:8

  • ತಪ್ಪಾದ ಕಮೆಂಟುಗಳನ್ನು, ಅಸಭ್ಯ ಫೋಟೋಗಳನ್ನು ಹಾಕುವುದು. ನಮ್ಮ ಹೃದಯ ವಂಚಕ ಆಗಿರುವುದರಿಂದ ಸೋಷಿಯಲ್‌ ನೆಟ್‌ವರ್ಕ್‌ನಲ್ಲಿ ಇಂಥ ಕಮೆಂಟುಗಳನ್ನು ಅಥವಾ ಫೋಟೋಗಳನ್ನು ಹಾಕಲು ಮನಸ್ಸಾಗಬಹುದು. ಆದರೆ ಹೀಗೆ ಮಾಡಿದರೆ ನಮ್ಮಿಂದಾಗಿ ಬೇರೆಯವರ ಹೆಸರು ಹಾಳಾಗಬಹುದು ಅಥವಾ ಅವರ ನಂಬಿಕೆ ಕಡಿಮೆಯಾಗಬಹುದು

    ಬೈಬಲ್‌ ತತ್ವಗಳು: ರೋಮ 14:13; ಎಫೆ 4:29

ಸೋಷಿಯಲ್‌ ನೆಟ್‌ವರ್ಕನ್ನು ಜಾಣರಾಗಿ ಬಳಸಿ ವಿಡಿಯೋ ನೋಡಿ, ನಂತರ ಕೆಳಗಿನ ಸನ್ನಿವೇಶಗಳಲ್ಲಿ ಏನು ಮಾಡಬೇಕು ಎಂದು ಚರ್ಚಿಸಿ:

ಸೋಷಿಯಲ್‌ ಮೀಡಿಯಾವನ್ನು ಬಳಸುವ ಕಳ್ಳನೊಬ್ಬನಿಗೆ ಮನೆಯ ಮಾಲೀಕನು ಮನೆಯಲ್ಲಿಲ್ಲ ರಜೆಗೆ ಹೋಗಿದ್ದಾನೆಂದು ಗೊತ್ತಾಗಿದೆ
ಸೋಷಿಯಲ್‌ ನೆಟ್‌ವರ್ಕ್‌ನಲ್ಲಿ ಪೋಸ್ಟ್‌ ಮಾಡಿರುವ ಅಸಭ್ಯ ಫೋಟೋವನ್ನು ಇಂಟರ್‌ವ್ಯೂ ಮಾಡುತ್ತಿರುವ ಧಣಿ ನೋಡಿದ್ದಾನೆ
ಸೋಷಿಯಲ್‌ ನೆಟ್‌ವರ್ಕ್‌ನಲ್ಲಿ ಯಾರೋ ಒಬ್ಬನ ದುರ್ಭಾಷೆಯನ್ನು ಓದುತ್ತಿರುವುದು
ರಾತ್ರಿಯೆಲ್ಲ ಸೋಷಿಯಲ್‌ ಮೀಡಿಯಾವನ್ನು ನೋಡುವುದರಲ್ಲಿ ಸಮಯ ಕಳೆದು ಬೆಳಿಗ್ಗೆ ಏಳುವುದಕ್ಕೆ ಕಷ್ಟವಾಗುತ್ತಿದೆ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ