ನಮ್ಮ ಕ್ರೈಸ್ತ ಜೀವನ
ನಿಮ್ಮ ಆನ್‌ಲೈನ್ ಫ್ರೆಂಡ್ಸ್ ಯಾರು?
ಸ್ನೇಹಿತನ ಬಗ್ಗೆ ಇರುವ ವ್ಯಾಖ್ಯಾನ ಏನಂದ್ರೆ, “ವಾತ್ಸಲ್ಯ ಅಥವಾ ಗೌರವದಿಂದಾಗಿ ಇನ್ನೊಬ್ಬ ವ್ಯಕ್ತಿಯನ್ನು ಹಚ್ಚಿಕೊಂಡಿರುವವನು.” ಉದಾಹರಣೆಗೆ, ಗೊಲ್ಯಾತನನ್ನು ಕೊಂದ ನಂತರ ದಾವೀದ ಮತ್ತು ಯೋನಾತಾನನ ನಡುವೆ ಮುರಿಯಲಾಗದ ಗಾಢ ಸ್ನೇಹ ಬೆಳೆಯಿತು. (1ಸಮು 18:1) ಅವರಿಬ್ಬರೂ ಪರಸ್ಪರ ಇಷ್ಟ ಆಗೋ ಗುಣಗಳನ್ನ ತೋರಿಸಿದ್ರು. ಗಾಢ ಸ್ನೇಹ ಬೆಳೆಸೋಕೆ ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಅಂತ ಇದ್ರಿಂದ ಅರ್ಥ ಆಗುತ್ತೆ. ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ಅರ್ಥಮಾಡ್ಕೊಳ್ಳಲು ತುಂಬ ಸಮಯ ಬೇಕಾಗುತ್ತೆ, ಪ್ರಯತ್ನನೂ ಮಾಡಬೇಕಾಗುತ್ತೆ. ಸೋಷಿಯಲ್ ನೆಟ್‌ವರ್ಕಲ್ಲಿ “ಫ್ರೆಂಡ್ಸನ್ನು” ಮಾಡಿಕೊಳ್ಳಲು ಮೌಸನ್ನು ಒಂದು ಸಲ ಕ್ಲಿಕ್ಕಿಸಿದರೆ ಸಾಕು. ಆನ್‌ಲೈನಲ್ಲಿರೋ ಜನರು ತಮ್ಮ ಮಾತುಗಳ ಮೇಲೆ, ಜನರು ತಮ್ಮ ಬಗ್ಗೆ ಯೋಚಿಸುವುದರ ಮೇಲೆ ಮತ್ತು ತಾವು ಯಾವ ರೀತಿಯ ವ್ಯಕ್ತಿಗಳಾಗಿದ್ದೇವೆ ಅಂತ ತೋರಿಸಿಕೊಳ್ಳುವುದರ ಮೇಲೆ ಹಿಡಿತ ಇಟ್ಕೊಂಡಿರುತ್ತಾರೆ. ಹಾಗಾಗಿ ಆನ್‌ಲೈನಲ್ಲಿ ಫ್ರೆಂಡ್ಸನ್ನು ಮಾಡ್ಕೊಳ್ಳುವಾಗ ಜಾಗ್ರತೆ ವಹಿಸಿ. ಗೊತ್ತಿಲ್ಲದವರು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸುವಾಗ ಅದನ್ನು ರಿಜೆಕ್ಟ್ ಮಾಡೋಕೆ ಹಿಂದೆ-ಮುಂದೆ ನೋಡಬೇಡಿ. ಅವರಿಗೆ ನೋವಾಗುತ್ತೆ ಅಂತನೂ ಅಂದುಕೊಳ್ಳಬೇಡಿ. ಇದರಲ್ಲಿ ಅಪಾಯಗಳು ಇರೋದ್ರಿಂದ ಕೆಲವು ಜನರು ಸೋಷಿಯಲ್ ನೆಟ್‌ವರ್ಕ್ ಸಹವಾಸನೇ ಬೇಡ ಅಂದ್ಕೊಂಡಿದ್ದಾರೆ. ಒಂದುವೇಳೆ ನೀವು ಸೋಷಿಯಲ್ ನೆಟ್‌ವರ್ಕನ್ನು ಬಳಸುವುದಾದರೆ ಯಾವ ವಿಷಯಗಳನ್ನು ಮನಸ್ಸಲ್ಲಿ ಇಡಬೇಕು?
ಸೋಷಿಯಲ್ ನೆಟ್‌ವರ್ಕನ್ನು ಜಾಣರಾಗಿ ಬಳಸಿ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:
ಫೋಟೋಗಳನ್ನು ಮತ್ತು ಕಮೆಂಟ್‌ಗಳನ್ನು ಪೋಸ್ಟ್ ಮಾಡೋದಕ್ಕಿಂತ ಮುಂಚೆ ನೀವು ಏನನ್ನು ಮನಸ್ಸಲ್ಲಿ ಇಡಬೇಕು?
ಆನ್‌ಲೈನ್ ಫ್ರೆಂಡ್ಸನ್ನು ಆರಿಸಿಕೊಳ್ಳುವಾಗ ಯಾಕೆ ಜಾಗ್ರತೆ ವಹಿಸಬೇಕು?
ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯೋದ್ರ ಬಗ್ಗೆ ಯಾಕೆ ಒಂದು ಲಿಮಿಟ್ ಇಡಬೇಕು?—ಎಫೆ 5:15, 16