ಬೈಬಲಿನಲ್ಲಿರುವ ರತ್ನಗಳು | ಲೂಕ 10-11
ನೆರೆಯವನಾದ ಸಮಾರ್ಯದವನ ದೃಷ್ಟಾಂತ
“ನಿಜವಾಗಿಯೂ ನನ್ನ ನೆರೆಯವನು ಯಾರು” ಎಂಬ ಪ್ರಶ್ನೆಗೆ ಯೇಸು ಈ ದೃಷ್ಟಾಂತದ ಮೂಲಕ ಉತ್ತರ ಕೊಟ್ಟನು. (ಲೂಕ 10:25-29) ಸಮಾರ್ಯದವರೂ ಅನ್ಯಜನಾಂಗದವರೂ ಸೇರಿ “ಎಲ್ಲ ರೀತಿಯ” ಜನರು ಮುಂದೆ ಸಭೆಯ ಭಾಗವಾಗುತ್ತಾರೆ ಎಂದು ಆತನಿಗೆ ತಿಳಿದಿತ್ತು. (ಯೋಹಾ 12:32) ಈ ದೃಷ್ಟಾಂತದಿಂದ ಆತನ ಶಿಷ್ಯರು, ತಾವು ಬೇರೆಯವರನ್ನು ಅದರಲ್ಲೂ ತಮಗಿಂತ ತುಂಬ ಭಿನ್ನವಾಗಿರುವವರನ್ನು ಸಹ ಪ್ರೀತಿಸಲು ವಿಶೇಷ ಪ್ರಯತ್ನ ಮಾಡಬೇಕೆಂದು ಕಲಿತರು.
ನಿಮ್ಮನ್ನೇ ಕೇಳಿಕೊಳ್ಳಿ:
‘ಬೇರೆ ಸಂಸ್ಕೃತಿಯ ಸಹೋದರ ಸಹೋದರಿಯರ ಬಗ್ಗೆ ನನಗೆ ಹೇಗನಿಸುತ್ತದೆ?’
‘ನನ್ನಂತೆ ಇರುವ ಜನರ ಜೊತೆನೇ ನಾನು ಹೆಚ್ಚು ಸಮಯ ಕಳೆಯುತ್ತೇನಾ?’
‘ಬೇರೆ ಹಿನ್ನೆಲೆಯ ಜೊತೆ ಕ್ರೈಸ್ತರನ್ನು ಚೆನ್ನಾಗಿ ತಿಳುಕೊಳ್ಳಲು ನನ್ನ ಹೃದಯವನ್ನು ವಿಶಾಲ ಮಾಡಿಕೊಳ್ಳುತ್ತೇನಾ?’ (2ಕೊರಿಂ 6:13)
ನನ್ನ ಜೊತೆ ಸೇವೆ ಮಾಡಲು ನಾನು ಯಾರನ್ನು ಆಮಂತ್ರಿಸಬಹುದು?
ನಮ್ಮ ಮನೆಯಲ್ಲಿ ಊಟ ಮಾಡಲು ಯಾರನ್ನು ಆಮಂತ್ರಿಸಬಹುದು?
ನಮ್ಮ ಕುಟುಂಬದೊಟ್ಟಿಗೆ ಕುಟುಂಬ ಆರಾಧನೆ ಮಾಡಲು ನಾನು ಯಾರನ್ನು ಆಮಂತ್ರಿಸಬಹುದು?