ಬೈಬಲಿನಲ್ಲಿರುವ ರತ್ನಗಳು | ಯೋಹಾನ 20-21
“ನೀನು ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?”
ಬೈಬಲ್ ಕಾಲದಲ್ಲಿ, ಒಳ್ಳೆಯ ಬೆಸ್ತರು ಮೀನು ಹಿಡಿಯಲಿಕ್ಕಾಗಿ ತಾಳ್ಮೆ ತೋರಿಸುತ್ತಿದ್ದರು, ಕಠಿಣ ಶ್ರಮಪಡುತ್ತಿದ್ದರು, ಕಷ್ಟ ಪರಿಸ್ಥಿತಿಗಳನ್ನು ತಾಳಿಕೊಳ್ಳಲು ಮತ್ತು ತ್ಯಾಗಗಳನ್ನು ಮಾಡಲು ಸಿದ್ಧರಿರುತ್ತಿದ್ದರು. (w12-E 8/1 ಪುಟ 18-20) ಈ ಎಲ್ಲಾ ಗುಣಗಳು ಪೇತ್ರನಿಗೆ ಮನುಷ್ಯರನ್ನು ಹಿಡಿಯುವ ಬೆಸ್ತನಾಗಿ ಕೆಲಸ ಮಾಡಲು ಸಹಾಯ ಮಾಡಲಿದ್ದವು. ಅವನು ಇಷ್ಟಪಡುತ್ತಿದ್ದ ಜೀವನ ವೃತ್ತಿ ಮತ್ತು ಯೇಸುವಿನ ಹಿಂಬಾಲಕರಿಗೆ ಆಧ್ಯಾತ್ಮಿಕವಾಗಿ ಉಣಿಸುವ ಕೆಲಸ ಇವೆರಡರಲ್ಲಿ, ಯಾವುದಕ್ಕೆ ತನ್ನ ಜೀವನದಲ್ಲಿ ಮೊದಲ ಸ್ಥಾನ ಕೊಡಬೇಕು ಎನ್ನುವುದನ್ನು ಅವನೇ ನಿರ್ಣಯಿಸಬೇಕಿತ್ತು.
ನೀವು ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡಲು ಯಾವೆಲ್ಲಾ ಬದಲಾವಣೆಗಳನ್ನು ಮಾಡಿದ್ದೀರಿ?