ಬೈಬಲಿನಲ್ಲಿರುವ ರತ್ನಗಳು | ಅ. ಕಾರ್ಯಗಳು 1-3
ಕ್ರೈಸ್ತ ಸಭೆಯ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು
ಕ್ರಿ.ಶ. 33ರ ಪಂಚಾಶತ್ತಮದಂದು ಬೇರೆ ಬೇರೆ ದೇಶಗಳಿಂದ ಯೆಹೂದ್ಯರು ಯೆರೂಸಲೇಮಿಗೆ ಬಂದಿದ್ದರು. (ಅಕಾ 2:9-11) ಅವರು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವವರಾಗಿದ್ದರೂ ಅನ್ಯ ದೇಶದಲ್ಲೇ ವಾಸಿಸಿದ್ದರು. (ಯೆರೆ 44:1) ಆದುದರಿಂದ ಅವರು ನೋಡುವುದಕ್ಕೆ ಅನ್ಯ ದೇಶದವರಂತೆ ಕಾಣುತ್ತಿದ್ದರು ಮತ್ತು ಅವರು ಆಡುವ ಭಾಷೆಯೂ ಯೆಹೂದ್ಯರಂತಿರಲಿಲ್ಲ. ವಿಭಿನ್ನ ದೇಶದಿಂದ ಬಂದಿದ್ದ 3,000 ಮಂದಿ ದೀಕ್ಷಾಸ್ನಾನ ಪಡೆದುಕೊಂಡಾಗ ಕ್ರೈಸ್ತ ಸಭೆಯೂ ಬಹುಭಾಷೀಯ ಜನರಿಂದ ಕೂಡಿತು. ಅವರು ಬೇರೆ ಬೇರೆ ಹಿನ್ನೆಲೆಗಳಿಂದ ಬಂದಿದ್ದರೂ, “ಪ್ರತಿದಿನವೂ . . . ಏಕಮನಸ್ಸಿನಿಂದ ದೇವಾಲಯದಲ್ಲಿ ಎಡೆಬಿಡದೆ ಕೂಡಿಬರುತ್ತಾ ಇದ್ದರು.”—ಅಕಾ 2:46.
ಈ ಕೆಳಗಿನವರಿಗೆ ನೀವು ಹೇಗೆ ನಿಜವಾದ ಆಸಕ್ತಿಯನ್ನು ತೋರಿಸುವಿರಿ?
ಬೇರೆ ಬೇರೆ ಪ್ರದೇಶಗಳಿಂದ ಬಂದು ನಿಮ್ಮ ಟೆರಿಟೊರಿಯಲ್ಲಿ ಜೀವಿಸುತ್ತಿರುವವರಿಗೆ
ಬೇರೆ ಬೇರೆ ಪ್ರದೇಶಗಳಿಂದ ಬಂದಿರುವ ನಿಮ್ಮ ಸಭೆಯ ಸಹೋದರ ಸಹೋದರಿಯರಿಗೆ