ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 44
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಈಜಿಪ್ಟಲ್ಲಿ ಯೆಹೂದ್ಯರಿಗೆ ಕೇಡು ಬರುತ್ತೆ ಅಂತ ಮುಂಚೆನೇ ಹೇಳಿದ್ದು (1-14)

      • ದೇವರ ಎಚ್ಚರಿಕೆಗೆ ಜನ ಕಿವಿಗೊಡಲ್ಲ (15-30)

        • “ಸ್ವರ್ಗದ ರಾಣಿಗೆ” ಆರಾಧನೆ (17-19)

ಯೆರೆಮೀಯ 44:1

ಪಾದಟಿಪ್ಪಣಿ

  • *

    ಅಥವಾ “ಮೋಫ್‌.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 43:4, 7
  • +ಯೆಹೆ 29:10; 30:6
  • +ಯೆಹೆ 30:18
  • +ಯೆರೆ 46:14; ಯೆಹೆ 30:16
  • +ಯೆಹೆ 29:14; 30:14

ಯೆರೆಮೀಯ 44:2

ಮಾರ್ಜಿನಲ್ ರೆಫರೆನ್ಸ್

  • +2ಅರ 25:9, 10; ಯೆರೆ 39:8
  • +ಪ್ರಲಾ 1:1

ಯೆರೆಮೀಯ 44:3

ಮಾರ್ಜಿನಲ್ ರೆಫರೆನ್ಸ್

  • +ಯೆರೆ 11:17
  • +ಧರ್ಮೋ 13:6-9; 32:17; ಯೆರೆ 19:4

ಯೆರೆಮೀಯ 44:4

ಪಾದಟಿಪ್ಪಣಿ

  • *

    ಅಕ್ಷ. “ಬೆಳಿಗ್ಗೆ ಬೇಗ ಎದ್ದು.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:15, 16; ಯೆಶಾ 65:2; ಯೆರೆ 7:24-26; 35:15

ಯೆರೆಮೀಯ 44:5

ಮಾರ್ಜಿನಲ್ ರೆಫರೆನ್ಸ್

  • +ಯೆರೆ 19:13

ಯೆರೆಮೀಯ 44:6

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:11; ಯೆರೆ 39:8

ಯೆರೆಮೀಯ 44:8

ಮಾರ್ಜಿನಲ್ ರೆಫರೆನ್ಸ್

  • +1ಅರ 9:7; ಯೆರೆ 24:9; 42:18

ಯೆರೆಮೀಯ 44:9

ಮಾರ್ಜಿನಲ್ ರೆಫರೆನ್ಸ್

  • +2ಅರ 21:19, 20; 24:8, 9
  • +1ಅರ 11:1-3
  • +ಯೆರೆ 44:19

ಯೆರೆಮೀಯ 44:10

ಪಾದಟಿಪ್ಪಣಿ

  • *

    ಅಕ್ಷ. “ಅವರು.”

  • *

    ಅಕ್ಷ. “ಕಣ್ಮುಂದೆ ಇಟ್ಟ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 36:22-24
  • +ಧರ್ಮೋ 6:1, 2

ಯೆರೆಮೀಯ 44:12

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 30:13
  • +ಯೆರೆ 42:17, 18

ಯೆರೆಮೀಯ 44:13

ಪಾದಟಿಪ್ಪಣಿ

  • *

    ಅಥವಾ “ಕಾಯಿಲೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 21:9; 42:22; 43:11

ಯೆರೆಮೀಯ 44:15

ಮಾರ್ಜಿನಲ್ ರೆಫರೆನ್ಸ್

  • +ಯೆರೆ 43:4, 7
  • +ಯೆರೆ 44:1

ಯೆರೆಮೀಯ 44:17

ಪಾದಟಿಪ್ಪಣಿ

  • *

    ಇದು ಧರ್ಮಭ್ರಷ್ಟ ಇಸ್ರಾಯೇಲ್ಯರು ಆರಾಧಿಸುತ್ತಿದ್ದ ಒಂದು ದೇವತೆಯ ಬಿರುದು. ಇದು ಬಹುಶಃ ಸಂತಾನೋತ್ಪತ್ತಿಯ ದೇವತೆ.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 7:18

ಯೆರೆಮೀಯ 44:18

ಪಾದಟಿಪ್ಪಣಿ

  • *

    ಇದು ಧರ್ಮಭ್ರಷ್ಟ ಇಸ್ರಾಯೇಲ್ಯರು ಆರಾಧಿಸುತ್ತಿದ್ದ ಒಂದು ದೇವತೆಯ ಬಿರುದು. ಇದು ಬಹುಶಃ ಸಂತಾನೋತ್ಪತ್ತಿಯ ದೇವತೆ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1999, ಪು. 13-14

ಯೆರೆಮೀಯ 44:19

ಪಾದಟಿಪ್ಪಣಿ

  • *

    ಇದು ಧರ್ಮಭ್ರಷ್ಟ ಇಸ್ರಾಯೇಲ್ಯರು ಆರಾಧಿಸುತ್ತಿದ್ದ ಒಂದು ದೇವತೆಯ ಬಿರುದು. ಇದು ಬಹುಶಃ ಸಂತಾನೋತ್ಪತ್ತಿಯ ದೇವತೆ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2676

ಯೆರೆಮೀಯ 44:21

ಮಾರ್ಜಿನಲ್ ರೆಫರೆನ್ಸ್

  • +ಯೆರೆ 11:13; ಯೆಹೆ 16:24, 25

ಯೆರೆಮೀಯ 44:22

ಮಾರ್ಜಿನಲ್ ರೆಫರೆನ್ಸ್

  • +1ಅರ 9:8, 9; ಪ್ರಲಾ 2:15; ಯೆಹೆ 33:29

ಯೆರೆಮೀಯ 44:23

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:15, 16; ದಾನಿ 9:11

ಯೆರೆಮೀಯ 44:25

ಪಾದಟಿಪ್ಪಣಿ

  • *

    ಇದು ಧರ್ಮಭ್ರಷ್ಟ ಇಸ್ರಾಯೇಲ್ಯರು ಆರಾಧಿಸುತ್ತಿದ್ದ ಒಂದು ದೇವತೆಯ ಬಿರುದು. ಇದು ಬಹುಶಃ ಸಂತಾನೋತ್ಪತ್ತಿಯ ದೇವತೆ.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 7:18; 44:15, 17

ಯೆರೆಮೀಯ 44:26

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 48:1, 2; ಯೆರೆ 5:2
  • +ಯೆಹೆ 20:39

ಯೆರೆಮೀಯ 44:27

ಮಾರ್ಜಿನಲ್ ರೆಫರೆನ್ಸ್

  • +ಯೆರೆ 1:10
  • +ಯೆರೆ 44:12

ಯೆರೆಮೀಯ 44:28

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:44; ಯೆಶಾ 27:13; ಯೆರೆ 44:14

ಯೆರೆಮೀಯ 44:30

ಪಾದಟಿಪ್ಪಣಿ

  • *

    ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.

ಮಾರ್ಜಿನಲ್ ರೆಫರೆನ್ಸ್

  • +2ಅರ 25:7; ಯೆರೆ 34:21; 39:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 44:1ಯೆರೆ 43:4, 7
ಯೆರೆ. 44:1ಯೆಹೆ 29:10; 30:6
ಯೆರೆ. 44:1ಯೆಹೆ 30:18
ಯೆರೆ. 44:1ಯೆರೆ 46:14; ಯೆಹೆ 30:16
ಯೆರೆ. 44:1ಯೆಹೆ 29:14; 30:14
ಯೆರೆ. 44:22ಅರ 25:9, 10; ಯೆರೆ 39:8
ಯೆರೆ. 44:2ಪ್ರಲಾ 1:1
ಯೆರೆ. 44:3ಯೆರೆ 11:17
ಯೆರೆ. 44:3ಧರ್ಮೋ 13:6-9; 32:17; ಯೆರೆ 19:4
ಯೆರೆ. 44:42ಪೂರ್ವ 36:15, 16; ಯೆಶಾ 65:2; ಯೆರೆ 7:24-26; 35:15
ಯೆರೆ. 44:5ಯೆರೆ 19:13
ಯೆರೆ. 44:6ಯೆಶಾ 6:11; ಯೆರೆ 39:8
ಯೆರೆ. 44:81ಅರ 9:7; ಯೆರೆ 24:9; 42:18
ಯೆರೆ. 44:92ಅರ 21:19, 20; 24:8, 9
ಯೆರೆ. 44:91ಅರ 11:1-3
ಯೆರೆ. 44:9ಯೆರೆ 44:19
ಯೆರೆ. 44:10ಯೆರೆ 36:22-24
ಯೆರೆ. 44:10ಧರ್ಮೋ 6:1, 2
ಯೆರೆ. 44:12ಯೆಹೆ 30:13
ಯೆರೆ. 44:12ಯೆರೆ 42:17, 18
ಯೆರೆ. 44:13ಯೆರೆ 21:9; 42:22; 43:11
ಯೆರೆ. 44:15ಯೆರೆ 43:4, 7
ಯೆರೆ. 44:15ಯೆರೆ 44:1
ಯೆರೆ. 44:17ಯೆರೆ 7:18
ಯೆರೆ. 44:21ಯೆರೆ 11:13; ಯೆಹೆ 16:24, 25
ಯೆರೆ. 44:221ಅರ 9:8, 9; ಪ್ರಲಾ 2:15; ಯೆಹೆ 33:29
ಯೆರೆ. 44:232ಪೂರ್ವ 36:15, 16; ದಾನಿ 9:11
ಯೆರೆ. 44:25ಯೆರೆ 7:18; 44:15, 17
ಯೆರೆ. 44:26ಯೆಶಾ 48:1, 2; ಯೆರೆ 5:2
ಯೆರೆ. 44:26ಯೆಹೆ 20:39
ಯೆರೆ. 44:27ಯೆರೆ 1:10
ಯೆರೆ. 44:27ಯೆರೆ 44:12
ಯೆರೆ. 44:28ಯಾಜ 26:44; ಯೆಶಾ 27:13; ಯೆರೆ 44:14
ಯೆರೆ. 44:302ಅರ 25:7; ಯೆರೆ 34:21; 39:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 44:1-30

ಯೆರೆಮೀಯ

44 ಈಜಿಪ್ಟ್‌+ ದೇಶದ ಮಿಗ್ದೋಲ್‌,+ ತಹಪನೇಸ್‌,+ ನೋಫ್‌,*+ ಪತ್ರೋಸಲ್ಲಿ+ ವಾಸ ಮಾಡ್ತಿದ್ದ ಎಲ್ಲ ಯೆಹೂದ್ಯರ ಬಗ್ಗೆ ದೇವರು ಯೆರೆಮೀಯನಿಗೆ ಹೀಗೆ ಹೇಳಿದನು 2 “ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಾನು ಯೆರೂಸಲೇಮಿನ ಮೇಲೆ ಯೆಹೂದದ ಎಲ್ಲ ಪಟ್ಟಣಗಳ ಮೇಲೆ ತಂದ ಕಷ್ಟವನ್ನೆಲ್ಲ ನೀವು ನೋಡಿದ್ರಿ.+ ಇವತ್ತು ಅದು ಹಾಳುಬಿದ್ದಿದೆ, ಅಲ್ಲಿ ಒಬ್ಬನೂ ವಾಸ ಮಾಡ್ತಿಲ್ಲ.+ 3 ಅಂಥ ಸ್ಥಿತಿ ಬರೋಕೆ ನೀವು ಮಾಡಿದ ಕೆಟ್ಟ ಕೆಲಸಗಳೇ ಕಾರಣ. ನಿಮಗೆ ಗೊತ್ತಿಲ್ಲದ ಬೇರೆ ದೇವರುಗಳಿಗೆ ಬಲಿ ಅರ್ಪಿಸಿ,+ ಅವುಗಳ ಸೇವೆ ಮಾಡಿ ನನಗೆ ಕೋಪ ಬರಿಸಿದ್ರಿ. ಆ ದೇವರುಗಳ ಬಗ್ಗೆ ನಿಮಗಾಗಲಿ ನಿಮ್ಮ ಪೂರ್ವಜರಿಗಾಗಲಿ ಗೊತ್ತಿರಲಿಲ್ಲ.+ 4 ನಾನು ನನ್ನ ಸೇವಕರಾದ ಪ್ರವಾದಿಗಳನ್ನ ನಿಮ್ಮ ಹತ್ರ ಪದೇಪದೇ* ಕಳಿಸ್ತಾ “ನಾನು ದ್ವೇಷಿಸೋ ಈ ಕೆಟ್ಟ ಕೆಲಸಗಳನ್ನ ದಯವಿಟ್ಟು ಮಾಡಬೇಡಿ” ಅಂತ ಹೇಳ್ತಾ ಇದ್ದೆ.+ 5 ಆದ್ರೆ ಅವರು ಅದನ್ನ ಕಿವಿಗೆ ಹಾಕೊಳ್ಳಲೇ ಇಲ್ಲ, ನನ್ನ ಮಾತನ್ನ ಕೇಳಲಿಲ್ಲ. ಬೇರೆ ದೇವರುಗಳಿಗೆ ಬಲಿಗಳನ್ನ ಅರ್ಪಿಸ್ತಾನೇ ಇದ್ರಿ, ಕೆಟ್ಟ ದಾರಿ ಬಿಟ್ಟು ವಾಪಸ್‌ ಬರಲಿಲ್ಲ.+ 6 ಹಾಗಾಗಿ ನಾನು ಯೆಹೂದದ ಪಟ್ಟಣಗಳ ಮೇಲೆ ಯೆರೂಸಲೇಮಿನ ಬೀದಿಗಳಲ್ಲಿ ನನ್ನ ಕೋಪ ಸುರಿಸಿದೆ. ಅವುಗಳ ಮೇಲೆ ನನ್ನ ಕೋಪ ಹೊತ್ತಿ ಉರಿತು. ಇದ್ರಿಂದ ಅವು ಹಾಳುಬಿದ್ದು ಬಂಜರು ಭೂಮಿ ಆಯ್ತು, ಇವತ್ತಿಗೂ ಅದು ಹಾಗೇ ಇದೆ.’+

7 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಈಗ ಹೇಳೋದು ಏನಂದ್ರೆ ‘ನಿಮ್ಮ ಮೇಲೆ ನೀವೇ ಯಾಕೆ ಕಷ್ಟ ತಂದ್ಕೊಳ್ತಾ ಇದ್ದೀರ? ಇದ್ರಿಂದಾಗಿ ಯೆಹೂದದ ಎಲ್ಲ ಗಂಡಸ್ರು, ಹೆಂಗಸ್ರು, ಮಕ್ಕಳು, ಕೂಸುಗಳು ನಾಶ ಆಗ್ತಾರೆ. ಅಲ್ಲಿ ಒಬ್ರೂ ಉಳಿಯಲ್ಲ. 8 ನೀವು ವಾಸ ಮಾಡೋಕೆ ಹೋಗಿರೋ ಈಜಿಪ್ಟ್‌ ದೇಶದಲ್ಲಿ ನಿಮ್ಮ ಕೈಯಿಂದ ಬೇರೆ ದೇವರುಗಳಿಗೆ ಬಲಿ ಅರ್ಪಿಸಿ ಯಾಕೆ ನನಗೆ ಕೋಪ ಬರಿಸ್ತೀರ? ಈ ರೀತಿ ಮಾಡ್ತಾ ಇದ್ರೆ ನೀವು ನಾಶ ಆಗ್ತೀರ, ಭೂಮಿಯ ಎಲ್ಲ ದೇಶದ ಜನ್ರು ನಿಮಗೆ ಶಾಪ ಹಾಕ್ತಾರೆ, ನಿಮ್ಮನ್ನ ಅವಮಾನ ಮಾಡ್ತಾರೆ.+ 9 ನಿಮ್ಮ ಪೂರ್ವಜರು, ಯೆಹೂದದ ರಾಜರು,+ ಅವರ ಹೆಂಡತಿಯರು+ ಯೆಹೂದ ದೇಶದಲ್ಲಿ, ಯೆರೂಸಲೇಮಿನ ಬೀದಿಗಳಲ್ಲಿ ಎಷ್ಟೆಲ್ಲ ಕೆಟ್ಟ ಕೆಲಸ ಮಾಡಿದ್ರು. ನೀವು, ನಿಮ್ಮ ಹೆಂಡತಿಯರು ಅದನ್ನೇ ಮಾಡಿದ್ರಿ.+ ಇದನ್ನೆಲ್ಲ ನೀವು ಮರೆತುಬಿಟ್ರಾ? 10 ಇವತ್ತಿಗೂ ನೀವು* ಇನ್ನೂ ದೀನತೆ ಬೆಳೆಸ್ಕೊಳ್ಳಲಿಲ್ಲ, ನನಗೆ ಭಯಪಡಲಿಲ್ಲ.+ ನಾನು ನಿಮಗೆ, ನಿಮ್ಮ ಪೂರ್ವಜರಿಗೆ ಕೊಟ್ಟ* ನಿಯಮಗಳನ್ನ ಪಾಲಿಸಲಿಲ್ಲ.’+

11 ಹಾಗಾಗಿ ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಾನು ನಿಮ್ಮ ಮೇಲೆ ಕಷ್ಟ ತಂದು ಇಡೀ ಯೆಹೂದವನ್ನ ನಾಶ ಮಾಡೋಕೆ ದೃಢತೀರ್ಮಾನ ಮಾಡಿದ್ದೀನಿ. 12 ಈಜಿಪ್ಟ್‌ ದೇಶಕ್ಕೆ ಹೋಗಿ ಅಲ್ಲಿ ವಾಸಿಸೋಕೆ ದೃಢತೀರ್ಮಾನ ಮಾಡ್ಕೊಂಡಿದ್ದ ಯೆಹೂದದ ಉಳಿದ ಜನ್ರನ್ನ ನಾನು ಹಿಡಿತೀನಿ, ಅವ್ರೆಲ್ರೂ ಈಜಿಪ್ಟ್‌ ದೇಶದಲ್ಲಿ ನಾಶ ಆಗ್ತಾರೆ.+ ಅವರು ಕತ್ತಿಯಿಂದ ಸಾಯ್ತಾರೆ, ಬರಗಾಲ ಬಂದು ನಾಶ ಆಗ್ತಾರೆ. ಚಿಕ್ಕವರಿಂದ ದೊಡ್ಡವರ ತನಕ ಎಲ್ರೂ ಕತ್ತಿಯಿಂದ, ಬರಗಾಲದಿಂದ ಸಾಯ್ತಾರೆ. ಅವ್ರ ಪಾಡು ನೋಡಿದವರ ಎದೆ ಡವಡವ ಅಂತ ಬಡ್ಕೊಳ್ಳುತ್ತೆ, ಜನ್ರು ಅವ್ರಿಗೆ ಶಾಪ ಹಾಕ್ತಾರೆ, ಗೇಲಿ ಮಾಡ್ತಾರೆ, ಅವಮಾನ ಮಾಡ್ತಾರೆ.+ 13 ನಾನು ಯೆರೂಸಲೇಮ್‌ ಮೇಲೆ ಕತ್ತಿ, ಬರಗಾಲ, ಅಂಟುರೋಗ* ಬರೋ ಹಾಗೆ ಮಾಡಿ ಅದಕ್ಕೆ ಶಿಕ್ಷೆ ಕೊಟ್ಟೆ. ಅದೇ ತರ ಈಜಿಪ್ಟ್‌ ದೇಶದಲ್ಲಿ ವಾಸಿಸ್ತಿರೋ ಜನ್ರಿಗೂ ಶಿಕ್ಷೆ ಕೊಡ್ತೀನಿ.+ 14 ಈಜಿಪ್ಟ್‌ ದೇಶದಲ್ಲಿ ವಾಸಿಸೋಕೆ ಹೋದ ಯೆಹೂದದ ಉಳಿದ ಜನ್ರು ಅಲ್ಲಿಂದ ತಪ್ಪಿಸ್ಕೊಳ್ಳಲ್ಲ. ಯೆಹೂದ ದೇಶಕ್ಕೆ ವಾಪಸ್‌ ಬರೋಕೆ ಅವರು ಬದುಕಿರಲ್ಲ. ವಾಪಸ್‌ ಬಂದು ವಾಸ ಮಾಡೋಕೆ ಅವರು ತುಂಬ ಆಸೆಪಡ್ತಾರೆ, ಆದ್ರೆ ಸ್ವಲ್ಪ ಜನ ಮಾತ್ರ ವಾಪಸ್‌ ಬರ್ತಾರೆ.’”

15 ಆಗ ಬೇರೆ ದೇವರುಗಳಿಗೆ ಬಲಿ ಅರ್ಪಿಸ್ತಿದ್ದ ಸ್ತ್ರೀಯರು ಈ ವಿಷ್ಯ ಗೊತ್ತಿದ್ದ ಅವ್ರ ಗಂಡಂದಿರು ಒಂದು ದೊಡ್ಡ ಗುಂಪಾಗಿ ನಿಂತಿದ್ರು. ಅವರು, ಈಜಿಪ್ಟ್‌ ದೇಶದ+ ಪತ್ರೋಸಲ್ಲಿ+ ವಾಸಿಸ್ತಿದ್ದ ಎಲ್ಲ ಜನ್ರು ಯೆರೆಮೀಯನಿಗೆ 16 “ಯೆಹೋವನ ಹೆಸ್ರಲ್ಲಿ ನೀನೀಗ ನಮಗೆ ಹೇಳಿದ್ದನ್ನ ನಾವು ಮಾಡಲ್ಲ. 17 ನಾವೇನು ಹೇಳಿದ್ವೋ ಅದನ್ನೇ ಮಾಡ್ತೀವಿ ಅಂದ್ರೆ ಸ್ವರ್ಗದ ರಾಣಿಗೆ* ಬಲಿ ಅರ್ಪಿಸಿ, ಪಾನ ಅರ್ಪಣೆ ಸುರಿತೀವಿ.+ ನಾವು, ನಮ್ಮ ಪೂರ್ವಜರು, ನಮ್ಮ ರಾಜರು, ನಮ್ಮ ಅಧಿಕಾರಿಗಳು ಯೆಹೂದದ ಪಟ್ಟಣಗಳಲ್ಲಿ, ಯೆರೂಸಲೇಮಿನ ಬೀದಿಗಳಲ್ಲಿ ಅದನ್ನೇ ಮಾಡಿದ್ವಿ. ಈಗ್ಲೂ ಅದನ್ನೇ ಮಾಡ್ತೀವಿ. ನಾವು ಹಾಗೆ ಮಾಡ್ತಿದ್ದಾಗ ನಮಗೆ ಬೇಕಾದಷ್ಟು ಊಟ ಸಿಗ್ತಿತ್ತು, ಯಾವುದಕ್ಕೂ ಕಮ್ಮಿ ಇರಲಿಲ್ಲ. ನಮಗೆ ಯಾವ ಕಷ್ಟನೂ ಬಂದಿರಲಿಲ್ಲ. 18 ನಾವು ಸ್ವರ್ಗದ ರಾಣಿಗೆ* ಬಲಿ ಅರ್ಪಿಸೋದನ್ನ, ಪಾನ ಅರ್ಪಣೆ ಸುರಿಯೋದನ್ನ ಯಾವಾಗ ನಿಲ್ಲಿಸಿದ್ವೋ ಆಗಿಂದ ನಾವು ಎಲ್ಲಾ ಕಳ್ಕೊಂಡ್ವಿ. ಕತ್ತಿಯಿಂದ, ಬರಗಾಲದಿಂದ ನಾಶ ಆದ್ವಿ” ಅಂದ್ರು.

19 ಸ್ತ್ರೀಯರು “ನಾವೇನು ನಮ್ಮ ಗಂಡಂದಿರ ಒಪ್ಪಿಗೆ ಇಲ್ಲದೆ ಸ್ವರ್ಗದ ರಾಣಿಗೆ* ಬಲಿ ಕೊಟ್ವಾ? ಪಾನ ಅರ್ಪಣೆ ಸುರಿದ್ವಾ? ಅವರು ಹೂಂ ಅಂದಿದ್ದಕ್ಕೇ ನಾವು ಆ ದೇವತೆಯ ಆಕಾರದಲ್ಲಿ ರೊಟ್ಟಿಗಳನ್ನ ಮಾಡಿದ್ವಿ, ಆ ದೇವತೆಗೆ ಪಾನ ಅರ್ಪಣೆಗಳನ್ನ ಸುರಿದ್ವಿ” ಅಂದ್ರು.

20 ಆಗ ಯೆರೆಮೀಯ ತನ್ನ ಜೊತೆ ಮಾತಾಡ್ತಿದ್ದ ಗಂಡಸ್ರಿಗೆ, ಅವ್ರ ಹೆಂಡತಿಯರಿಗೆ, ಎಲ್ಲ ಜನ್ರಿಗೆ ಹೀಗಂದ: 21 “ಯೆಹೂದದ ಪಟ್ಟಣಗಳಲ್ಲಿ, ಯೆರೂಸಲೇಮಿನ ಬೀದಿಗಳಲ್ಲಿ ನೀವು, ನಿಮ್ಮ ಪೂರ್ವಜರು, ನಿಮ್ಮ ರಾಜರು, ನಿಮ್ಮ ಅಧಿಕಾರಿಗಳು, ಯೆಹೂದದ ಬೇರೆ ಜನ್ರು ಅರ್ಪಿಸಿದ ಆ ಬಲಿಗಳನ್ನ+ ಯೆಹೋವ ನೆನಪು ಮಾಡ್ಕೊಂಡನು, ಅದನ್ನ ಮರ್ತಿಲ್ಲ! 22 ನೀವು ಮಾಡಿದ್ದ ಕೆಟ್ಟ ಕೆಲಸಗಳನ್ನ, ಅಸಹ್ಯ ಕೆಲಸಗಳನ್ನ ಕೊನೆಗೆ ಯೆಹೋವನಿಗೆ ಸಹಿಸ್ಕೊಳ್ಳೋಕೆ ಆಗ್ಲೇ ಇಲ್ಲ. ಹಾಗಾಗಿ ನಿಮ್ಮ ದೇಶ ಹಾಳುಬಿತ್ತು. ಅದಕ್ಕೆ ಎಂಥ ಸ್ಥಿತಿ ಬಂತಂದ್ರೆ ನೋಡಿದವರ ಎದೆ ಡವಡವ ಅಂತು. ಅಲ್ಲಿ ಒಬ್ರೂ ವಾಸ ಮಾಡ್ತಿಲ್ಲ, ಅದಕ್ಕೆ ಶಾಪ ಬಂತು. ಇವತ್ತಿಗೂ ಅದು ಹಾಗೇ ಇದೆ.+ 23 ನೀವು ಸುಳ್ಳು ದೇವರಿಗೆ ಬಲಿಗಳನ್ನ ಅರ್ಪಿಸಿದ್ರಿ. ಯೆಹೋವನ ಮಾತು ಕೇಳಲಿಲ್ಲ, ಆತನ ನಿಯಮಗಳನ್ನ ಪಾಲಿಸಲಿಲ್ಲ, ಆತನು ಪದೇ ಪದೇ ಎಚ್ಚರಿಕೆ ಕೊಟ್ರೂ ಕೇಳಲಿಲ್ಲ. ಹೀಗೆ ಯೆಹೋವನ ವಿರುದ್ಧ ಪಾಪ ಮಾಡಿದ್ದಿಕ್ಕೇ ಈ ಕಷ್ಟ ಅನುಭವಿಸ್ತಾ ಇದ್ದೀರ.”+

24 ಯೆರೆಮೀಯ ಆ ಎಲ್ಲ ಜನ್ರಿಗೆ, ಎಲ್ಲ ಹೆಂಗಸ್ರಿಗೆ ಇನ್ನೂ ಕೆಲವು ವಿಷ್ಯಗಳನ್ನ ಹೇಳಿದ. ಅದೇನಂದ್ರೆ “ಈಜಿಪ್ಟಿನಲ್ಲಿರೋ ಯೆಹೂದದ ಎಲ್ಲ ಜನ್ರೇ, ಯೆಹೋವನ ಮಾತು ಕೇಳಿ. 25 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘“ಸ್ವರ್ಗದ ರಾಣಿಗೆ* ಬಲಿ ಅರ್ಪಿಸ್ತೀವಿ, ಪಾನ ಅರ್ಪಣೆ ಸುರಿತೀವಿ ಅಂತ ಮಾಡಿದ ಹರಕೆಗಳನ್ನ ತೀರಿಸೇ ತೀರಿಸ್ತೀವಿ”+ ಅಂತ ನೀವೂ ನಿಮ್ಮ ಹೆಂಡತಿರೂ ಆಣೆ ಮಾಡಿದ್ರಿ, ಅದೇ ತರ ನಡ್ಕೊಂಡ್ರಿ. ಹೆಂಗಸ್ರೇ, ನೀವು ಮಾಡಿದ ಹರಕೆಗಳನ್ನ ನೀವು ಖಂಡಿತ ತೀರಿಸ್ತೀರ, ಅದೇ ತರ ಮಾಡ್ತೀರ.’

26 ಹಾಗಾಗಿ ಈಜಿಪ್ಟ್‌ ದೇಶದಲ್ಲಿರೋ ಯೆಹೂದದ ಎಲ್ಲ ಜನ್ರೇ, ಯೆಹೋವನ ಮಾತು ಕೇಳಿ ‘ಯೆಹೋವ ಹೇಳೋದು ಏನಂದ್ರೆ “ನನ್ನ ಮಹೋನ್ನತ ಹೆಸ್ರಿನ ಮೇಲೆ ಆಣೆ ಇಟ್ಟು ಹೇಳ್ತಾ ಇದ್ದೀನಿ ‘ವಿಶ್ವದ ರಾಜನ ಆಣೆ, ಜೀವ ಇರೋ ದೇವರಾದ ಯೆಹೋವನಾಣೆ’+ ಅಂತ ಹೇಳ್ತಿರೋ ಒಬ್ಬ ಯೆಹೂದ್ಯ ಕೂಡ ಇನ್ಮುಂದೆ ಈಜಿಪ್ಟಲ್ಲಿ ಎಲ್ಲೂ ನನ್ನ ಹೆಸ್ರಲ್ಲಿ ಆಣೆ ಮಾಡಲ್ಲ.+ 27 ನಾನು ಅವ್ರಿಗೆ ಒಳ್ಳೇದು ಮಾಡೋಕ್ಕಲ್ಲ ಕೆಟ್ಟದು ಮಾಡೋಕೆ ಅವ್ರ ಮೇಲೆ ಕಣ್ಣಿಟ್ಟಿದ್ದೀನಿ.+ ಈಜಿಪ್ಟ್‌ ದೇಶದಲ್ಲಿರೋ ಯೆಹೂದದ ಎಲ್ಲ ಜನ್ರ ಮೇಲೆ ಕತ್ತಿ ಬರಗಾಲ ಬಂದು ಪೂರ್ತಿ ನಾಶ ಆಗ್ತಾರೆ.+ 28 ಸ್ವಲ್ಪ ಜನ ಮಾತ್ರ ಕತ್ತಿಯಿಂದ ತಪ್ಪಿಸ್ಕೊಳ್ತಾರೆ, ಈಜಿಪ್ಟಿಂದ ಯೆಹೂದ ದೇಶಕ್ಕೆ ವಾಪಸ್‌ ಬರ್ತಾರೆ.+ ಆಗ ಈಜಿಪ್ಟಲ್ಲಿ ವಾಸಿಸೋಕೆ ಬಂದ ಯೆಹೂದದ ಉಳಿದ ಎಲ್ಲ ಜನ್ರಿಗೆ ನನ್ನ ಮಾತು ನಿಜ ಆಯ್ತಾ ಅವ್ರ ಮಾತು ನಿಜ ಆಯ್ತಾ ಅಂತ ಗೊತ್ತಾಗುತ್ತೆ.”’”

29 “ಯೆಹೋವ ಹೇಳೋದು ಏನಂದ್ರೆ ‘ನಾನು ಈ ಜಾಗದಲ್ಲಿ ನಿಮಗೆ ಶಿಕ್ಷೆ ಕೊಡ್ತೀನಿ ಅನ್ನೋದಕ್ಕೆ ನಿಮಗೆ ಒಂದು ಗುರುತು ಕೊಡ್ತೀನಿ. ನಾನು ಹೇಳಿದ ಹಾಗೇ ನಿಮ್ಮ ಮೇಲೆ ಕಷ್ಟ ಬಂದೇ ಬರುತ್ತೆ ಅಂತ ನಿಮಗೆ ಆಗ ಗೊತ್ತಾಗುತ್ತೆ. 30 ಯೆಹೋವ ಹೇಳೋದು ಏನಂದ್ರೆ “ನಾನು ಯೆಹೂದದ ರಾಜ ಚಿದ್ಕೀಯನನ್ನ ಅವನ ಜೀವ ತೆಗಿಯೋಕೆ ಕಾಯ್ತಿದ್ದ ಅವನ ಶತ್ರು ಕೈಗೆ ಅಂದ್ರೆ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನ* ಕೈಗೆ ಕೊಟ್ಟೆ. ಅದೇ ತರ ಈಜಿಪ್ಟಿನ ರಾಜ ಫರೋಹ ಹೊಫ್ರನನ್ನ ಅವನ ಶತ್ರುಗಳ ಕೈಗೆ, ಅವನ ಜೀವ ತೆಗಿಯೋಕೆ ಕಾಯ್ತಿರೋರ ಕೈಗೆ ಕೊಡ್ತೀನಿ.”’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ