ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 23-24
ಪೀಡೆ, ರಾಜದ್ರೋಹಿ ಎಂಬ ಆರೋಪ
ಯೆರೂಸಲೇಮಿನಲ್ಲಿದ್ದ ಯೆಹೂದ್ಯರು ಪೌಲನನ್ನು ಕೊಲ್ಲುವ ಶಪಥ ಮಾಡಿದರು. (ಅಕಾ 23:12) ಆದರೆ ಪೌಲನು ರೋಮಿಗೆ ಹೋಗಿ ಸಾರುವುದು ಯೆಹೋವನ ಉದ್ದೇಶವಾಗಿತ್ತು. (ಅಕಾ 23:11) ಪೌಲನ ಸೋದರಳಿಯನಿಗೆ ಯೆಹೂದ್ಯರ ಒಳಸಂಚು ಗೊತ್ತಾದಾಗ, ಅವನದನ್ನು ಪೌಲನಿಗೆ ವರದಿಸಿದನು. ಹೀಗೆ ಪೌಲನ ಜೀವ ಉಳಿಯಿತು. (ಅಕಾ 23:16) ಈ ವೃತ್ತಾಂತದಿಂದ ಕೆಳಗಿರುವ ವಿಷಯಗಳ ಬಗ್ಗೆ ಏನು ಕಲಿಯಬಹುದು?
ದೇವರ ಇಷ್ಟದ ವಿರುದ್ಧ ಜನರು ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ ಏನಾಗುತ್ತೆ?
ನಮಗೆ ಸಹಾಯ ಮಾಡಕ್ಕೆ ದೇವರು ಏನನ್ನು ಅಥವಾ ಯಾರನ್ನು ಉಪಯೋಗಿಸುತ್ತಾನೆ?
ಧೈರ್ಯದ ಬಗ್ಗೆ ಏನು ಕಲಿಯಬಹುದು?